ಮಡಿಕೇರಿ: ಸಂಚಾರ ನಿರ್ಬಂಧಿತ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ ಎಲ್ಲಾ ರೀತಿಯ ಮಲ್ಟಿ ಆಕ್ಸಿಲ್ ವಾಹನಗಳನ್ನು ಹೊರತುಪಡಿಸಿ ಷರತ್ತು ಬದ್ದವಾಗಿ ಪ್ರಯಾಣಿ ಕರ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ಲಘು ವಾಹನಗಳನ್ನು ಮತ್ತು ಹಗಲು ವೇಳೆಯಲ್ಲಿ ಸಿಂಗಲ್ ಆಕ್ಸಿಲ್ ಬಸ್‍ಗಳು ಹಾಗೂ ಸಿಂಗಲ್ ಆಕ್ಸಿಲ್ ಲಘು ಸರಕು ವಾಹನಗಳ (ವಾಹನದ ನೋಂದಣಿ ತೂಕ 18,500ಕೆ.ಜಿ. ಮೀರದಂತೆ) ಸಂಚಾರಕ್ಕೆ ಮಾತ್ರ ಈ ಹಿಂದೆ ಅವಕಾಶ ನೀಡಲಾಗಿತ್ತು. ಪ್ರಸ್ತುತ ಸಾರ್ವಜನಿಕರ ಮತ್ತು ಪ್ರಯಾಣಿಕರ ಸಂಚಾರದ ಹಿತದೃಷ್ಟಿಯಿಂದ ಪೆರುಂ ಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ…
ನಾಳೆ ಕೈಗಾರಿಕಾ ಅಭಿವೃದ್ಧಿ ಸಮಾವೇಶ
December 6, 2018ಮಡಿಕೇರಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮಡಿಕೇರಿ ಶಾಖಾ ಕಚೇರಿ ವತಿಯಿಂದ ಕೈಗಾರಿಕಾ ಅಭಿವೃದ್ಧಿ ಸಮಾವೇಶವು ಡಿ.7 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಹೋಟೆಲ್ ಕೂರ್ಗ್ ಇಂಟರ್ ನ್ಯಾಷನಲ್‍ನಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಡಿ.ಕೆ.ಲಿಂಗರಾಜು, ಬೆಂಗಳೂರಿನ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಪ್ರಧಾನ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಬಿ.ಸಿ.ಶಿವಪ್ರಕಾಶ್ ಇತರರು ಪಾಲ್ಗೊಳ್ಳಲಿದ್ದಾರೆ.
ಸಾಲಬಾಧೆ: ವೃದ್ಧ ದಂಪತಿ ಆತ್ಮಹತ್ಯೆ
December 6, 2018ಸೋಮವಾರಪೇಟೆ: ಸಾಲಬಾಧೆಯಿಂದ ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ತಾಕೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಕಾಫಿ ಬೆಳೆಗಾರರಾದ ಎಸ್.ಎಂ.ಅಪ್ಪಯ್ಯ(81), ಪತ್ನಿ ಬೊಳ್ಳಮ್ಮ(75) ಮೃತಪಟ್ಟವರು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ನಡೆದಿದೆ ಎನ್ನಲಾಗಿದೆ. ದಂಪತಿಗಳು ಏಣಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ತೆರಳಿ ಸಿಲ್ವರ್ ಮರ ಹಾಗೂ ಹುಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ ಮಗ ಸೊಸೆ ಸೋಮವಾರಪೇಟೆಯಲ್ಲಿನ ಮದುವೆ ಸಮಾರಂಭಕ್ಕೆ ತೆರಳಿದ ನಂತರ ದಂಪತಿಗಳು ನೇಣು ಬಿಗಿದುಕೊಂಡಿದ್ದಾರೆ. ಸಂಜೆ ಮನೆಯಲ್ಲಿ ಪೋಷಕರು ಇರದಿದ್ದಾಗ ಕುಟುಂಬಸ್ಥರು ಹುಡುಕಾಟ…
ನಾಳೆ ಅಂಚೆ ಅದಾಲತ್
December 6, 2018ಮಡಿಕೇರಿ: ಅಂಚೆ ಅದಾಲತ್ ಸಭೆಯು ಡಿ.7 ರಂದು ಬೆಳಗ್ಗೆ 11 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಅಂಚೆ ಸೇವೆಗೆ ಸಂಬಂಧಿಸಿದ ಎಲ್ಲಾ ತರಹದ ದೂರುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ದೂರುಗಳಿದ್ದಲ್ಲಿ ಅಂಚೆ ಅದಾಲತ್ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಡಿ.6ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಡಿ.7ರಂದು ನಡೆಯುವ ಸಭೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಭಾಗವಹಿಸ ಬಹುದು ಎಂದು ಕೊಡಗು…
ರಸ್ತೆ-ತಡೆಗೋಡೆ, ಚರಂಡಿ ನಿರ್ಮಾಣಕ್ಕೆ ಸೂಚನೆ
December 5, 2018ಮಡಿಕೇರಿ: ಮುಂದಿನ ಮುಂಗಾರು ಮಳೆಗೆ ಮಣ್ಣು ಕುಸಿಯದಂತೆ ರಸ್ತೆಗೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಅನ್ಬುಕುಮಾರ್ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಅಧಿಕಾರಿಗಳೊಂ ದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ಮುಂಗಾರು ಮಳೆಗಾಲದ ಅವಧಿಯಲ್ಲಿ ಪ್ರಸಕ್ತ ವರ್ಷ ಸುರಿದ ಅರ್ಧ ದಷ್ಟು ಮಳೆ ಸುರಿದರು ಬರೆ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆ ನಿರ್ಮಿಸು ವಾಗ ತಡೆಗೋಡೆ ಹಾಗೂ…
ಕುಟ್ಟಂದಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಕೊಲೆ ಪ್ರಕರಣ: ಆರೋಪಿ ದೋಷ ಮುಕ್ತ
December 5, 2018ವಿರಾಜಪೇಟೆ: ಮೂರು ವರ್ಷಗಳ ಹಿಂದೆ ಕುಟ್ಟಂದಿ ಗ್ರಾಮದಲ್ಲಿ ನಡೆದ ಇಲ್ಲಿನ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚೇರಂಡ ಸಾಬು ನಾಣಯ್ಯ ಅವರ ಕೊಲೆಗೆ ಸಂಬಂಧಿಸಿ ದಂತೆ ಅವರ ಸಂಬಂಧಿಕ ಆರೋಪಿ ಚೇರಂಡ ಮೋಹನ್ ಎಂಬಾತನನ್ನು ಎರಡನೇ ಜಿಲ್ಲಾ ಮತ್ತು ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ದೋಷ ಮುಕ್ತನೆಂದು ತೀರ್ಪು ನೀಡಿ ಕೊಲೆ ಆರೋಪದಿಂದ ಬಿಡುಗಡೆಗೊಳಿಸಿದ್ದಾರೆ. ದಿನಾಂಕ 7-9-2015 ರಂದು ಬೆಳಗ್ಗೆ ಸಾಬು ನಾಣಯ್ಯ ಅವರು ಎಂದಿನಂತೆ ಕಾಫಿ ತೋಟಕ್ಕೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಎದುರು ಬದಿಯಿಂದ ಬಂದ ಸಾಬು ನಾಣಯ್ಯ…
ಕೊಡಗಿನಲ್ಲಿ ಚತುಷ್ಪಥ ಹೆದ್ದಾರಿ, ರೈಲ್ವೆ ಮಾರ್ಗ ಅನುಷ್ಠಾನ ವಿರೋಧಿಸಿ ಡಿ.8ರಂದು ಬೃಹತ್ ರ್ಯಾಲಿ
December 4, 2018ಮಡಿಕೇರಿ: ಕೊಡಗು ಜಿಲ್ಲೆಯನ್ನು ವಿನಾಶ ಮಾಡಲು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಈ ಯೋಜನೆ ವಿರೋಧಿಸಿ ಡಿ.8 ರಂದು ಮಡಿಕೇರಿಯಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಸಂಚಾಲಕ ಕರ್ನಲ್ ಸಿ.ಪಿ. ಮುತ್ತಣ್ಣ, ಮೈಸೂರು -ಕುಶಾಲನಗರ-ಮಡಿಕೇರಿ ಮೂಲಕ 4 ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ….
ಚೇಲಾವರದಲ್ಲಿ ಲೆ.ಜ.ಚಂಗಪ್ಪ ತಿಮ್ಮಯ್ಯರಿಗೆ ಕುಟುಂಬಸ್ಥರ ಗೌರವ
December 3, 2018ಮಡಿಕೇರಿ: ಕೊಡಗು ಮೂಲದ ಪ್ರಸ್ತುತ ಭಾರತೀಯ ಸೇನಾ ಪಡೆಯ ತರ ಬೇತಿ ವಿಭಾಗದ ಮುಖ್ಯಸ್ಥರಾಗಿರುವ ಲೆಫ್ಟಿ ನೆಂಟ್ ಜನರಲ್ ಪಟ್ಟಚೆರುವಂಡ ಚಂಗಪ್ಪ ತಿಮ್ಮಯ್ಯ ಚೇಲಾವರದಲ್ಲಿರುವ ತಮ್ಮ ಕುಟುಂ ಬದ ಐನ್‍ಮನೆಗೆ ಆಗಮಿಸಿದ ಸಂದರ್ಭ ಪಟ್ಟಚೆರುವಂಡ ಕುಟುಂಬಸ್ಥರು ಆತ್ಮೀ ಯವಾಗಿ ಬರಮಾಡಿಕೊಂಡರು. ಶುಕ್ರವಾರದಂದು ಚೆಯ್ಯಂಡಾಣೆ ಸಮೀ ಪದ ಚೇಲಾವರ ಗ್ರಾಮದಲ್ಲಿರುವ ಪಟ್ಟಚೆರು ವಂಡ ಐನ್‍ಮನೆಗೆ ಪುತ್ರ ಲೆಫ್ಟಿನೆಂಟ್ ಕಮಾಂಡರ್ ಅರ್ಜುನ್ ದೇವಯ್ಯ, ಸಹೋ ದರಿ ರೇಖಾ ಹಾಗೂ ತಾಯಿ ಗೌರು ಚಂಗಪ್ಪ ಅವರೊಂದಿಗೆ ಆಗಮಿಸಿದ ಸಂದರ್ಭ ಕುಟುಂಬಸ್ಥರು ತಳಿಯತಕ್ಕಿ…
ಕೇಂದ್ರದ ಯೋಜನೆಗಳ ಜಾರಿಯಲ್ಲಿ ಸಿಇಓ, ಇಓಗಳಿಗೆ ಹೆಚ್ಚಿನ ಜವಾಬ್ದಾರಿ
December 1, 2018ಮಡಿಕೇರಿ: ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಗೊಳಿಸುವ ಮಹತ್ತರ ಜವಾಬ್ದಾರಿ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮತ್ತು ತಾಪಂಗಳ ಕಾರ್ಯನಿರ್ವಹಣಾಧಿಕಾರಿಗಳ ಮೇಲಿದ್ದು, ಯೋಜನೆಗಳನ್ನು ಇಚ್ಛಾ ಶಕ್ತಿ ಬಳಸಿ ಅನುಷ್ಠಾನಕ್ಕೆ ತರಬೇಕೆಂದು ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು. ನಗರದ ಕೋಟೆ ಹಳೆ ವಿಧಾನ ಸಭಾಂ ಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಸರಕಾರದ ವಿವಿಧ ಯೋಜ ನೆಗಳ ಅನುಷ್ಠಾನದ ಕುರಿತು ಮಾಹಿತಿ ಪಡೆದರು. 2022ರ ಒಳಗೆ ವಸತಿ…
ಬಾಳಲೆಯಲ್ಲಿ ಸೌಹಾರ್ದ ಸಮ್ಮೇಳನ ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವವರನ್ನು ದೂರವಿಡಬೇಕು
December 1, 2018ಗಮನ ಸೆಳೆದ ಮಕ್ಕಳ ದಫ್ ಸಾಂಸ್ಕøತಿಕ ಕಾರ್ಯಕ್ರಮ ಗೋಣಿಕೊಪ್ಪಲು: ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಸಮಾಜ ದೂರವಿಡಬೇಕೆಂದು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು. ದಕ್ಷಿಣ ಕೊಡಗಿನ ಬಾಳೆಲೆ ಗ್ರಾಮದಲ್ಲಿರುವ ನುಸ್ರತುಲ್ ಇಸ್ಲಾಂ ಜುಮಾ ಮಸ್ಜಿದ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲೋಕ ಅನುಗ್ರಹಿ ಮಹಮ್ಮದ್ ಮುಸ್ತಫರವರ 1493ನೇ ಜನ್ಮ ದಿನಾಚರಣೆ ಅಂಗ ವಾಗಿ ನೂರೇ ಮದೀನ ಈದ್ ಮಿಲಾದ್ ಪ್ರಯುಕ್ತ ಸೌಹಾರ್ದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಇಂದು ಜಾತಿ, ಧರ್ಮದ ವಿಚಾರದಲ್ಲಿ ಪರಸ್ಪರ…