ಕೇಂದ್ರದ ಯೋಜನೆಗಳ ಜಾರಿಯಲ್ಲಿ ಸಿಇಓ, ಇಓಗಳಿಗೆ ಹೆಚ್ಚಿನ ಜವಾಬ್ದಾರಿ
ಕೊಡಗು

ಕೇಂದ್ರದ ಯೋಜನೆಗಳ ಜಾರಿಯಲ್ಲಿ ಸಿಇಓ, ಇಓಗಳಿಗೆ ಹೆಚ್ಚಿನ ಜವಾಬ್ದಾರಿ

December 1, 2018

ಮಡಿಕೇರಿ:  ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಗೊಳಿಸುವ ಮಹತ್ತರ ಜವಾಬ್ದಾರಿ ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮತ್ತು ತಾಪಂಗಳ ಕಾರ್ಯನಿರ್ವಹಣಾಧಿಕಾರಿಗಳ ಮೇಲಿದ್ದು, ಯೋಜನೆಗಳನ್ನು ಇಚ್ಛಾ ಶಕ್ತಿ ಬಳಸಿ ಅನುಷ್ಠಾನಕ್ಕೆ ತರಬೇಕೆಂದು ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.

ನಗರದ ಕೋಟೆ ಹಳೆ ವಿಧಾನ ಸಭಾಂ ಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಸರಕಾರದ ವಿವಿಧ ಯೋಜ ನೆಗಳ ಅನುಷ್ಠಾನದ ಕುರಿತು ಮಾಹಿತಿ ಪಡೆದರು. 2022ರ ಒಳಗೆ ವಸತಿ ಮತ್ತು ನಿವೇಶನ ರಹಿತರಿಗೆ ಸೂರು ಕಲ್ಪಿಸಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 3 ತಾಲೂಕುಗಳ ಲ್ಲಿರುವ ವಸತಿ ಮತ್ತು ನಿವೇಶನ ರಹಿತ ರನ್ನು ಪಾರದರ್ಶಕವಾಗಿ ಗುರುತಿಸುವ ಕೆಲಸ ನಡೆಯಬೇಕಿದೆ. ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಈ ದಿಸೆಯಲ್ಲಿ ಮತ್ತಷ್ಟು ಕಾರ್ಯೋನ್ಮುಖರಾಗಬೇಕೆಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.

ಗಾಳಿಬೀಡು ಗ್ರಾಪಂ ಅಧ್ಯಕ್ಷ ಸುಭಾಷ್ ನಾಣಯ್ಯ ಮಾತನಾಡಿ, ಗ್ರಾಮ ಪಂಚಾ ಯ್ತಿಗೆ ಸ್ವಂತ ಕಟ್ಟಡ ಕಟ್ಟಲು 10ಸೆಂಟ್ ನಿವೇಶನವನ್ನು ಬಿಟ್ಟುಕೊಡುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಅಲೆದಾಡಿದ್ದೇನೆ. ಆದರೆ ಇಂದಿಗೂ ಅರಣ್ಯ ಅಧಿಕಾರಿಗಳು ನಿವೇಶನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚು ರಂಜನ್, ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ಮಿತಿಮೀರಿದೆ. ಈ ವಿಚಾರವನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಐಎಫ್‍ಎಸ್ ಅಧಿಕಾರಿ ಶ್ರೇಣಿಯೇ ರಾಜ್ಯಕ್ಕೆ ಬೇಡವೆಂದು ನಿರ್ಣಯ ಮಂಡಿಸಲು ಒತ್ತಾಯಿಸುವು ದಾಗಿ ಹೇಳಿದರಲ್ಲದೆ, ಮಾನವೀಯ ದೃಷ್ಟಿ ಯಿಂದ ಕರ್ತವ್ಯ ನಿರ್ವಹಿಸುವಂತೆ ಡಿಎಫ್‍ಓ ಮಂಜುನಾಥ್ ಅವರನ್ನು ತರಾಟೆಗೆ ತೆಗೆದು ಕೊಂಡರು. ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊ ಳಿಸುವಂತೆ ಹಲವು ಬಾರಿ ಹೇಳಿದ್ದೇನೆ. ಹೀಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಫ್‍ಓ ಮಂಜು ನಾಥ್ ಮುಂದಿನ 2 ದಿನಗಳ ಒಳಗೆ ನಿವೇಶ ನವನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತÀ ರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ ಗಾಳಿಬೀಡು ವ್ಯಾಪ್ತಿಯಲ್ಲಿ ಕೃಷಿ ಬೆಳೆಗಳಿಗೆ ಅತೀವ ಹಾನಿಯಾಗಿದೆ. ಹೀಗಾಗಿ ಈ ವರ್ಷ ಕಂದಾಯ ತೆರಿಗೆಯನ್ನು ಸರಕಾರಕ್ಕೆ ಪಾವತಿಸುವು ದಿಲ್ಲ ಎಂದು ಗ್ರಾಪಂ ನಿರ್ಣಯ ಕೈಗೊಂ ಡಿದೆ. ಇದನ್ನು ಕೂಡ ಪರಿಗಣಿಸಿ ಕಂದಾಯ ಸೇರಿದಂತೆ ಎಲ್ಲಾ ರೀತಿಯ ತೆರಿಗೆಯಿಂದ ಗಾಳಿಬೀಡು ಗ್ರಾಮಕ್ಕೆ ವಿನಾಯಿತಿ ನೀಡು ವಂತೆ ಮನವಿ ಮಾಡಿದರು. ಮಳೆ ನಿಂತರು ಕೂಡ ರಸ್ತೆಗಳ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಯನ್ನು ಶಾಸಕ ಅಪ್ಪಚ್ಚು ರಂಜನ್ ತೀವ್ರ ತರಾಟೆಗೆ ತೆಗೆದುಕೊಂಡರು. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ನಿದ್ರೆ ಮಾಡುತ್ತಿದ್ದಾರೆ. ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರವೇ ಸಾಧ್ಯವಿಲ್ಲದಾಗಿದೆ. 1 ವಾರ ದೊಳಗೆ ರಸ್ತೆಗಳ ಗುಂಡಿ ಮುಚ್ಚದಿದ್ದಲ್ಲಿ ತಾವೇ ಖುದ್ದಾಗಿ ಪಿಡಬ್ಲುಡಿ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು.

ಉಸ್ತುವಾರಿ ಸಮಿತಿ ಸದಸ್ಯ ಮನು ಮುತ್ತಪ್ಪ ಮಾತನಾಡಿ, ಪ್ರಕೃತಿ ವಿಕೋಪದ ಬಳಿಕ ಶೇ.5ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಆಗಸ್ಟ್ ತಿಂಗಳಲ್ಲಿ ಸಮರೋಪಾದಿಯಲ್ಲಿ ದುರಸ್ಥಿ ಕಾಮಗಾರಿ ನಡೆಸಿ ಇದೀಗ ತಟಸ್ಥ ವಾಗಿದ್ದಾರೆ. ಸರಕಾರಗಳು ಕೋಟ್ಯಾಂತರ ರೂ.ಹಣ ನೀಡಿದ್ದರೂ ಕಾಮಗಾರಿ ಏಕೆ ನಡೆಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿದ ಜಿಲ್ಲಾ ಧಿಕಾರಿ ಪಿ.ಐ. ಶ್ರೀವಿದ್ಯಾ, ಪ್ರತಿ ಜಿಲ್ಲಾ ಧಿಕಾರಿಗಳ ಖಾತೆಯಲ್ಲಿ ಕೇವಲ 5 ಕೋಟಿ ರೂಪಾಯಿ ಹಣ ಮಾತ್ರ ಮೀಸಲಿರುತ್ತದೆ. ಈ ಹಣವನ್ನು ತ್ವರಿತ ಕಾಮಗಾರಿಗಳಿಗೆ ಆಧ್ಯತೆಯ ಮೇಲೆ ಬಿಡುಗಡೆ ಮಾಡಬೇಕೆ ನ್ನುವ ಮಾನದಂಡವೂ ಇದೆ. ಇದೀಗ ವಿವಿಧ ಇಲಾಖೆಗಳಿಗೆ ಒಟ್ಟು 85 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾ ಗಿದೆ. ರಾಜ್ಯ ಸರಕಾರದ ನಿರ್ದೇಶನದಂತೆ ಈ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಲಾಗುತ್ತಿದ್ದು, ಸದ್ಯದಲ್ಲಿಯೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡು ಗಡೆ ಮಾಡುವುದಾಗಿ ತಿಳಿಸಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಪ್ರಕೃತಿ ವಿಕೋಪದ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಪಾವತಿಯಾಗಿಲ.್ಲ ಇದೀಗ ಹಣ ಬಿಡುಗಡೆಯಾಗಿರುವುದರಿಂದ ಕಾಮಗಾರಿಗಳನ್ನು ಪರಿಶೀಲಿಸಿ ಹಣ ಬಿಡು ಗಡೆ ಮಾಡಬೇಕೆಂದು ಒತ್ತಾಯಿಸಿದರು.

ನಾಚಿಕೆ ಇಲ್ಲವೆ..?: ಬಿಎಸ್‍ಎನ್‍ಎಲ್ ಸಂಸ್ಥೆಯಿಂದ ನಿರೀಕ್ಷಿತ ಕನಿಷ್ಟ ಸೇವೆಯೂ ಜಿಲ್ಲೆಗೆ ಲಭ್ಯವಾಗುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ನನ್ನ ಮನೆಯ ಸ್ಥಿರ ದೂರವಾಣಿ ಕೆಟ್ಟು ಹಲವು ಸಮಯ ಕಳೆದಿದೆ. ಈ ಬಗ್ಗೆ ದೂರು ನೀಡಿ ಹಲವು ಸಮಯ ಕಳೆದಿದೆ. ಆದರೂ ದುರಸ್ಥಿಯಾ ಗಿಲ್ಲ. ಶಾಸಕರ ಸಮಸ್ಯೆಯೇ ಪರಿಹಾರವಾಗಲಿಲ್ಲ ಎಂದಮೇಲೆ ಸಾರ್ವಜನಿಕರಿಗೆ ಇನ್ನೆಂ ಥಹಾ ಸೇವೆ ಸಿಗಲು ಸಾಧ್ಯ ಎಂದು ಹರಿಹಾಯ್ದರು. ಈ ಹಂತದಲ್ಲಿ ತೀವ್ರ ಆಕ್ರೋಶಿತರಾದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಬಿಎಸ್‍ಎನ್‍ಎಲ್ ಟವರ್‍ಗಳನ್ನು ಖಾಸಗಿ ಸಂಸ್ಥೆಗಳಿಗೆ ಬಾಡಿಗೆ ನೀಡಲಾಗುತ್ತಿದೆ. ನಿಮ್ಮ ಸಂಸ್ಥೆಯ ಟವರನ್ನು ಖಾಸಗಿಯವರಿಗೆ ನೀಡಿ ನಿಮಗೆ ಸೇವೆ ನೀಡಲು ಸಾಧ್ಯವಾಗದಿರುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್‍ಎನ್‍ಎಲ್ ಅಧಿಕಾರಿ ಟವರ್‍ಗಳನ್ನು ಸಂಸ್ಥೆ ಬಾಡಿಗೆ ನೀಡುತ್ತಿದ್ದು, ಸ್ಪೆಕ್ಟ್ರಂ ಮಾನದಂಡದಂತೆ ಟವರ್‍ಗಳು ಕಾರ್ಯಾಚರಿಸುತ್ತವೆ. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಲಕ್ಷ್ಮಿಪ್ರಿಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಸಮಿತಿ ಸದಸ್ಯರಾದ ಡಾ. ಬಿ.ಸಿ. ನವೀನ್, ತೆಕ್ಕಡೆ ಶೋಭಾ ಮೋಹನ್ ಸೇರಿದಂತೆ ವಿವಿಧ ಇಲಾಖಾ ಅಧಿ ಕಾರಿಗಳು ಹಾಜರಿದ್ದರು.

ಎಸಿಬಿಗೆ ಸಂಸದ, ಶಾಸಕರ ಮೆಚ್ಚುಗೆ

ಮಡಿಕೇರಿ:  ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ ಮತ್ತು ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ಎಸ್. ದೊಡ್ಡಮನಿ ಅವರನ್ನು ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದ ಕ್ರಮಕ್ಕೆ ಪ್ರತಾಪ್ ಸಿಂಹ ಮತ್ತು ಶಾಸಕ ಅಪ್ಪಚ್ಚು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು. ಚೆಸ್ಕಾಂ ಅಧಿಕಾರಿಯ ಮೇಲೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು.

ಈ ಬಗ್ಗೆ ಪ್ರಶ್ನಿಸಿದಾಗ ನಾನು ಪ್ರಾಮಾಣಿಕ ವ್ಯಕ್ತಿ ಎಂದು ಚೆಸ್ಕಾಂ ಅಧಿಕಾರಿ ದೊಡ್ಡಮನಿ ಹೇಳುತ್ತಿದ್ದರು. ಇದೀಗ ಎಸಿಬಿ ಚೆಸ್ಕಾಂ ಅಧಿಕಾರಿಯ ಪ್ರಾಮಾಣಿಕತೆಯನ್ನು ಬಯಲು ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಪ್ಪಚ್ಚು ರಂಜನ್ ಮಾಯಾದೇವಿ ಗಲಗಲಿ ಕೂಡ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಅವರ ಬಗ್ಗೆಯೂ ದೂರುಗಳಿದ್ದವು. ಎಸಿಬಿ ಒಳ್ಳೆಯ ಕೆಲಸ ಮಾಡಿದೆ ಎಂದು ರಂಜನ್ ಪ್ರತಿಕ್ರಿಯಿಸಿದರು.

Translate »