ಪಪಂ ಆಡಳಿತದಿಂದ ಗೌರವ ಧನ: ಪ್ರತಿಭಟನೆ ಹಿಂಪಡೆದ ಪೌರಕಾರ್ಮಿರು
ಮೈಸೂರು

ಪಪಂ ಆಡಳಿತದಿಂದ ಗೌರವ ಧನ: ಪ್ರತಿಭಟನೆ ಹಿಂಪಡೆದ ಪೌರಕಾರ್ಮಿರು

December 1, 2018

ಸರಗೂರು: ಪಟ್ಟಣ ಪಂಚಾಯ್ತಿ ಅಧ್ಯಕ್ಷರು-ಉಪಾಧ್ಯಕ್ಷರು, ಸದಸ್ಯರು ಗೌರವ ಧನ ನೀಡಿ ಕರ್ತವ್ಯದಲ್ಲಿ ತೊಡಗಲು ಮನವಿ ಮಾಡಿದ ಹಿನ್ನೆಲೆ ವೇತನಕ್ಕಾಗಿ ಪಪಂ ಮುಂದೆ ಪೌರಕಾರ್ಮಿರು ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆದರು.

ಮೂರು ದಿನಗಳಿಂದ ಪಟ್ಟಣದಲ್ಲಿ ಸ್ವಚ್ಛತೆ, ಕುಡಿ ಯುವ ನೀರು ರಸ್ತೆ ಚರಂಡಿ ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣೆ ಇಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ತಾಲೂಕಿನ ಶಾಸಕರು ಪ್ರತಿಭಟನಾಕಾರರನ್ನು ಮನವಲಿಸುವ ಪ್ರಯತ್ನ ವಿಫಲವಾಗಿತ್ತು. ಪಟ್ಟಣದ ನಾಗರಿಕರ ಹಿತದೃಷ್ಟಿಯಿಂದ ಇಂದು ಪಪಂ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರ ಗೌರವ ಧನ ನೀಡಿ ಕರ್ತವ್ಯದಲ್ಲಿ ತೊಡಗಲು ಪ್ರತಿ ಭಟನಾಕಾರರಿಗೆ ಮಾಡಿದ ಮನವಿಗೆ ಸ್ಪಂದಿಸಿದ ಅವರು ಪ್ರತಿಭಟನೆ ಕೈಬಿಟ್ಟು ತಮ್ಮ ಕಾಯಕದಲ್ಲಿ ತೊಡಗಲು ನಿರ್ಧರಿಸಿದರು.

ಪಪಂ ಅಧ್ಯಕ್ಷೆ ಜ್ಯೋತಿಯೊಗೀಶ್, ವೇತನಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಪ್ರತಿಭಟನಾ ನೇತೃತ್ವ ವಹಿಸಿದ್ದ ಮುಖಂಡ ಎಸ್.ಎಲ್. ರಾಜಣ್ಣ ಸಾರ್ವಜನಿಕರು ತೊಂದರೆ ಬಗ್ಗೆ ಮನವರಿಕೆ ಮಾಡಿ ಫಲ ಸಂಧಾನ ಯಶಸ್ವಿ ಯಾಗಿದೆ ಎಂದರು.

ಪ್ರತಿಭಟನೆಗೆ ಸಹರಿಸಿದ ಸಂಘ-ಸಂಸ್ಥೆಗಳ ಮುಖಂಡರಿಗೆ ಪೌರಕಾರ್ಮಿಕರು ಕೃತಜ್ಞತೆ ಸಲ್ಲಸಿದರು. ಪಪಂ ಮುಖ್ಯಾಧಿಕಾರಿ ಸಿ.ಅಶೋಕ್ ಪಪಂ ಉಪಾಧÀ್ಯಕ್ಷೆ ಮಂಜುಳಾ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮನಾಯಕ, ಸದಸ್ಯರಾದÀ ಮಹಮದ್ ಉಸ್ಮಾನ್, ಪದ್ಮಾವತಿ ಗೋಪಾಲ್, ಭಾಗ್ಯಲಕ್ಷ್ಮಿ ಬಿಲ್ಲೇಶ್, ಬಿಎಸ್‍ಪಿ ಸರಗೂರು ಘಟಕದ ಅಧ್ಯಕ್ಷ ಚನ್ನಿಪುರ ಮಲ್ಲೇಶ್, ಅಟೋಚಾಲಕರ ಸಂಘದ ಅಧ್ಯಕ್ಷರು ಸದಸ್ಯರು, ಪೌರಕಾಮಿಕರ ಸಮಾಜದ ಅಧ್ಯಕ್ಷ ಮಹದೇವ್, ತಾಲೂಕು ವೃತ್ತ ನಿರಿಕ್ಷಕ ಹರೀಶ್, ಸರಗೂರು ಠಾಣಾ ಎಸ್‍ಐ ಮಹದೇವಯ್ಯ ಇತರರಿದ್ದರು.

Translate »