ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಸಿಂಗಲ್ ಆಕ್ಸಿಲ್ ವಾಹನಗಳ ಸಂಚಾರಕ್ಕೆ ಅವಕಾಶ
ಕೊಡಗು

ಪೆರುಂಬಾಡಿ-ಮಾಕುಟ್ಟ ರಸ್ತೆಯಲ್ಲಿ ಸಿಂಗಲ್ ಆಕ್ಸಿಲ್ ವಾಹನಗಳ ಸಂಚಾರಕ್ಕೆ ಅವಕಾಶ

December 6, 2018

ಮಡಿಕೇರಿ:  ಸಂಚಾರ ನಿರ್ಬಂಧಿತ ಪೆರುಂಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ ಎಲ್ಲಾ ರೀತಿಯ ಮಲ್ಟಿ ಆಕ್ಸಿಲ್ ವಾಹನಗಳನ್ನು ಹೊರತುಪಡಿಸಿ ಷರತ್ತು ಬದ್ದವಾಗಿ ಪ್ರಯಾಣಿ ಕರ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ಲಘು ವಾಹನಗಳನ್ನು ಮತ್ತು ಹಗಲು ವೇಳೆಯಲ್ಲಿ ಸಿಂಗಲ್ ಆಕ್ಸಿಲ್ ಬಸ್‍ಗಳು ಹಾಗೂ ಸಿಂಗಲ್ ಆಕ್ಸಿಲ್ ಲಘು ಸರಕು ವಾಹನಗಳ (ವಾಹನದ ನೋಂದಣಿ ತೂಕ 18,500ಕೆ.ಜಿ. ಮೀರದಂತೆ) ಸಂಚಾರಕ್ಕೆ ಮಾತ್ರ ಈ ಹಿಂದೆ ಅವಕಾಶ ನೀಡಲಾಗಿತ್ತು.

ಪ್ರಸ್ತುತ ಸಾರ್ವಜನಿಕರ ಮತ್ತು ಪ್ರಯಾಣಿಕರ ಸಂಚಾರದ ಹಿತದೃಷ್ಟಿಯಿಂದ ಪೆರುಂ ಬಾಡಿಯಿಂದ ಮಾಕುಟ್ಟವರೆಗಿನ ರಸ್ತೆಯಲ್ಲಿ ಡಿಸೆಂಬರ್ 5 ರಿಂದ ಅನ್ವಯಿಸುವಂತೆ ಮುಂದಿನ ಆದೇಶದವರೆಗೆ ಎಲ್ಲಾ ರೀತಿಯ ಮಲ್ಟಿ ಆಕ್ಸಿಲ್ ವಾಹನಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ರೀತಿಯ ಪ್ರಯಾಣಿಕರ ದ್ವಿ-ಚಕ್ರ, ತ್ರಿ-ಚಕ್ರ, ನಾಲ್ಕು ಚಕ್ರದ ಲಘು ವಾಹನಗಳೊಂದಿಗೆ ಸಿಂಗಲ್ ಆಕ್ಸಿಲ್ ಬಸ್‍ಗಳು, ಸಿಂಗಲ್ ಆಕ್ಸಿಲ್ ಸರಕು ಸಾಗಾಣಿಕೆ ವಾಹನಗಳು (ವಾಹನದ ನೋಂದಣಿ ತೂಕ 18,500ಕೆ.ಜಿ. ಮೀರದಂತೆ) ಷರತ್ತುಬದ್ದವಾಗಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಸದರಿ ಆದೇಶವನ್ನು ಸಾರ್ವಜನಿಕರ/ಪ್ರಯಾಣಿಕರ ಅನುಕೂಲತೆಯ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆಯ ದೃಷ್ಟಿಯಿಂದ ಹೊರಡಿಸಲಾಗಿದ್ದು, ಈ ಆದೇಶದ ಉಲ್ಲಂಘನೆಯು ಕಾನೂನು ರೀತ್ಯಾ ದಂಡನೀಯವಾಗಿರುತ್ತದೆ. ಸಾರ್ವ ಜನಿಕರು ಸಹಕರಿಸಲು ಜಿಲ್ಲಾಧಿಕಾರಿ ಅವರು ಕೋರಿದ್ದಾರೆ.

Translate »