ಚೇಲಾವರದಲ್ಲಿ ಲೆ.ಜ.ಚಂಗಪ್ಪ ತಿಮ್ಮಯ್ಯರಿಗೆ ಕುಟುಂಬಸ್ಥರ ಗೌರವ
ಕೊಡಗು

ಚೇಲಾವರದಲ್ಲಿ ಲೆ.ಜ.ಚಂಗಪ್ಪ ತಿಮ್ಮಯ್ಯರಿಗೆ ಕುಟುಂಬಸ್ಥರ ಗೌರವ

December 3, 2018

ಮಡಿಕೇರಿ:  ಕೊಡಗು ಮೂಲದ ಪ್ರಸ್ತುತ ಭಾರತೀಯ ಸೇನಾ ಪಡೆಯ ತರ ಬೇತಿ ವಿಭಾಗದ ಮುಖ್ಯಸ್ಥರಾಗಿರುವ ಲೆಫ್ಟಿ ನೆಂಟ್ ಜನರಲ್ ಪಟ್ಟಚೆರುವಂಡ ಚಂಗಪ್ಪ ತಿಮ್ಮಯ್ಯ ಚೇಲಾವರದಲ್ಲಿರುವ ತಮ್ಮ ಕುಟುಂ ಬದ ಐನ್‍ಮನೆಗೆ ಆಗಮಿಸಿದ ಸಂದರ್ಭ ಪಟ್ಟಚೆರುವಂಡ ಕುಟುಂಬಸ್ಥರು ಆತ್ಮೀ ಯವಾಗಿ ಬರಮಾಡಿಕೊಂಡರು.

ಶುಕ್ರವಾರದಂದು ಚೆಯ್ಯಂಡಾಣೆ ಸಮೀ ಪದ ಚೇಲಾವರ ಗ್ರಾಮದಲ್ಲಿರುವ ಪಟ್ಟಚೆರು ವಂಡ ಐನ್‍ಮನೆಗೆ ಪುತ್ರ ಲೆಫ್ಟಿನೆಂಟ್ ಕಮಾಂಡರ್ ಅರ್ಜುನ್ ದೇವಯ್ಯ, ಸಹೋ ದರಿ ರೇಖಾ ಹಾಗೂ ತಾಯಿ ಗೌರು ಚಂಗಪ್ಪ ಅವರೊಂದಿಗೆ ಆಗಮಿಸಿದ ಸಂದರ್ಭ ಕುಟುಂಬಸ್ಥರು ತಳಿಯತಕ್ಕಿ ಬೊಳ್ಚದೊಂ ದಿಗೆ ದುಡಿಕೊಟ್ಟ್ ಪಾಟ್ ಹಾಗೂ ಕೊಡವ ಸಾಂಪ್ರದಾಯಿಕ ವಾಲಗದೊಂ ದಿಗೆ ಹೃದಯಸ್ಪರ್ಶಿ ಸ್ವಾಗತ ಕೋರಿದರು.

ಐನ್‍ಮನೆಗೆ ಬರುತ್ತಿದ್ದಂತೆಯೆ ಗುರು ಕಾರೋಣ ಸ್ಥಾನಕ್ಕೆ ತೆರಳಿ ಗೌರವವನ್ನು ಸಲ್ಲಿಸಿದ ಲೆಫ್ಟಿನೆಂಟ್ ಜನರಲ್ ಚಂಗಪ್ಪ ತಿಮ್ಮಯ್ಯ, ಐನ್‍ಮನೆಯಲ್ಲಿ ನೆಲ್ಲಕ್ಕಿ ನಡು ಬಾಡೆಗೆ ವಂದಿಸಿ ಕುಟುಂಬಸ್ಥರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಐನ್ ಮನೆ ಬಳಿಯಲ್ಲೆ ಆಯೋಜಿತ ಸರಳ ಸಮಾರಂ ಭದಲ್ಲಿ ಕುಟುಂಬಸ್ಥರ ಸನ್ಮಾನಕ್ಕೆ ಪಾತ್ರರಾದರು.

ಈ ಸಂದರ್ಭ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲು ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮುಖ್ಯ. ನಮ್ಮನ್ನು ನಾವು ಸಮಾಜದಲ್ಲಿ ಮತ್ತು ಶಾಶ್ವತವಾಗಿ ಗುರುತಿಸಿಕೊಳ್ಳುವಂತಾಗಲು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ನುಡಿದರು. ಪಟ್ಟಚೆರುವಂಡ ಕುಟುಂಬ ಸ್ಥರ ಸಂಖ್ಯೆ ಬೇರೆ ಕುಟುಂಬಗಳಿಗೆ ಹೋಲಿಸಿದರೆ ಸಾಕಷ್ಟು ಸಣ್ಣ ಪ್ರಮಾಣ ದಲ್ಲಿದೆ. ಆದರೆ, ನಮ್ಮಲ್ಲಿ ಇತಿಹಾಸ ಕಾಲದಿಂದಲೂ ಸೇನಾ ಪಡೆಗಳಿಂದ ಹಿಡಿದು ಮಹಿಳಾ ದಂತ ವೈದ್ಯರವರೆಗೆ ವೃತ್ತಿಪರರಿದ್ದು, ಎಲ್ಲರೂ ತಮ್ಮ ಕಠಿಣ ಪರಿಶ್ರಮದ ಹಿನ್ನೆಲೆಯಲ್ಲಿ ತಮ್ಮ ತಮ್ಮ ವೃತ್ತಿಗಳಿಗೆ ಗೌರವ ಮತ್ತು ಯಶಸ್ಸು ತಂದುಕೊಟ್ಟಿದ್ದಾರೆ ಎಂದು ಲೆ.ಜ. ತಿಮ್ಮಯ್ಯ ಹೇಳಿದರು.

ಪಟ್ಟಚೆರುವಂಡ ಕುಟುಂಬದ ಪಟ್ಟೆ ದಾರರಾದ ಪಿ.ಬಿ ಬೆಳ್ಯಪ್ಪ ಮಾತನಾಡಿ, ನಮ್ಮ ಕುಟುಂಬದ ಹಿರಿಯರು ಮತ್ತು ನಾವು ಬಹಳ ಕಷ್ಟದಿಂದ ಜೀವನವನ್ನು ರೂಪಿಸಿಕೊಂಡವರು. ಕುಟುಂಬದ ಹಿರಿ ಯರಾಗಿರುವ ಪಟ್ಟಚೆರುವಂಡ ಬೊಳಕ ಅವರು ಇತಿಹಾಸದ ಕಾಲದಲ್ಲಿ ಸೇನಾ ಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಲೆ.ಜ. ತಿಮ್ಮಯ್ಯ ಅವರ ಸಹೋದರಿ ರೇಖಾ ಮಾತನಾಡಿ, ನಮ್ಮ ತಂದೆ, ಅವರ ಮಕ್ಕಳಾದ ನಮಗೆ ಹಣ ಮತ್ತು ಆಸ್ತಿ ಶಾಶ್ವತವಲ್ಲ. ಶಿಕ್ಷಣವೇ ಆಸ್ತಿ ಮತ್ತು ಶಕ್ತಿ ಎಂಬುದನ್ನು ತೋರಿಸಿಕೊಟ್ಟಿರು ವುದೇ ನಮ್ಮ ಬೆಳವಣಿಗೆಗೆ ಹಾಗೂ ಸಹೋ ದರ ಸೈನ್ಯದಲ್ಲಿ ಮಾಡಿರುವ ಸಾಧನೆಗೆ ಕಾರಣವೆಂದು ಮನದುಂಬಿ ನುಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಪಟ್ಟಚೆರು ವಂಡ ನಾಚಪ್ಪ, ಮಂಡೇಪಂಡ ಡಾಲಿ ಪೊನ್ನಪ್ಪ, ಪಟ್ಟಚೆರುವಂಡ ದಿನೇಶ್, ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿದರು.
ಇದೇ ಸಂದರ್ಭ ಜಿ. ಚಿದ್ವಿಲಾಸ್ ದಂಪ ತಿಗಳು ಮತ್ತು ಚೆಂಬಂಡ ಅಕ್ಕಯ್ಯಚ್ಚಿ ಅವರು ಯೋಧ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ತುಂಬಿದರು.

Translate »