ಕಡವೆ ಬೇಟೆ: ಆರೋಪಿ ಬಂಧನ
ಕೊಡಗು

ಕಡವೆ ಬೇಟೆ: ಆರೋಪಿ ಬಂಧನ

December 3, 2018

ವಿರಾಜಪೇಟೆ: ಮೀಸಲು ಅರಣ್ಯದಲ್ಲಿ ಕಡವೆಯೊಂದನ್ನು ಬೇಟೆಯಾಡಿ ಮಾಂಸ ಹಂಚಿಕೊಂಡಿದ್ದ ಆರೋ ಪಿಯೋರ್ವನನ್ನು ಬಂಧಿಸಿ, ಆತ ನಿಂದ 20 ಕೆಜಿ ಮಾಂಸ ವಶ ಪಡಿಸಿಕೊಂಡಿರುವ ಅರಣ್ಯಾಧಿ ಕಾರಿಗಳು, ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿ ಸುವುದಾಗಿ ವಲಯ ಅರಣ್ಯಾ ಧಿಕಾರಿ ಕಂಬೇಯಂಡ ಗೋಪಾಲ್ ತಿಳಿಸಿದ್ದಾರೆ. ವಿರಾಜಪೇಟೆ ಸಮೀ ಪದ ತೋರ ಗ್ರಾಮದ ವೀರೇಂದ್ರ ಬಂಧಿತ ಆರೋಪಿಯಾಗಿದ್ದು, ಈತನಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲವು ದಿನಗಳ ಹಿಂದೆ ತೊರ ಗ್ರಾಮದ ಬಳಿಯ ಮಾಕುಟ್ಟ ಮೀಸಲು ಅರಣ್ಯದಲ್ಲಿ ಐದು ಮಂದಿ ತಂಡ ಬೇಟೆಗೆಂದು ತೆರಳಿ ಕಡವೆಗೆ ಒಂಟಿ ನಳಿಕೆಯ ಕೊವಿಯಿಂದ ಗುಂಡು ಹೊಡೆದು ಕಡವೆಯನ್ನು ಕೊಂದಿದ್ದರು ಎನ್ನಲಾಗಿದೆ. ಬಂಧಿತ ವೀರೇಂದ್ರನಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಇದೀಗ ಐದು ಜನರ ಮೇಲೆ ವನ್ಯಮೃಗಗಳ ಸಂರಕ್ಷಣ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿದ್ದಾರೆ. ನಾಲ್ಕು ಮಂದಿ ತಲೆಮರೆಸಿಕೊಂಡಿದ್ದಾರೆ. ಇದೀಗ ಅರೋಪಿ ವೀರೇಂದ್ರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಅದೇಶಿಸಿರುತ್ತಾರೆ. ಇನ್ನು ನಾಲ್ಕು ಅರೋಪಿಗಳ ಶೋಧ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸ್ತುರಾಜ್, ಸಹ ಅರಣ್ಯ ಸಂರಕ್ಷಣಾಧಿಕಾರಿ ರೋಶಿನಿ, ವಲಯ ಅರಣ್ಯಾಧಿಕಾರಿ ಕೆ.ಗೋಪಾಲ್, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎನ್.ಪ್ರಶಾಂತ್‍ಕುಮಾರ್, ಆಶೋಕ್ ಹಾಗೂ ಅರ್‍ಅರ್‍ಟಿ ಸಿಬ್ಬಂದಿ ಭಾಗವಹಿಸಿದ್ದರು.

Translate »