ಪರವಾನಗಿ ಇಲ್ಲದೇ ಸಂಚಾರ: ಲಾರಿ ವಶ
ಕೊಡಗು

ಪರವಾನಗಿ ಇಲ್ಲದೇ ಸಂಚಾರ: ಲಾರಿ ವಶ

December 3, 2018

ಸುಂಟಿಕೊಪ್ಪ: ಸಾರಿಗೆ ಇಲಾಖೆಗೆ ತೆರಿಗೆ ಪಾವತಿಸಿದೆ ನೀಡಿದ್ದ ಪರ ವಾನಗಿಗಿಂತ ಅಧಿಕ ಮರದ ದಿಮ್ಮಿ ಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಸುಂಟಿಕೊಪ್ಪ ಠಾಣಾಧಿಕಾರಿ ವಶ ಪಡಿಸಿಕೊಂಡಿದ್ದಾರೆ.

ನ.24 ರಂದು ಬೋಯಿಕೇರಿ ಕಡೆ ಯಿಂದ ಮರದ ದಿಮ್ಮಿಗಳನ್ನು ಸಾಗಿ ಸುತ್ತಿದ್ದ ಲಾರಿ(ಕೆಎ19-7225)ಯನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಗದ್ದೆಹಳ್ಳದ ಬಲೀ ಪರಿಶೀಲಿಸಿದಾಗ ಅರಣ್ಯ ಇಲಾಖೆಯಿಂದ 9990 ಕೆಜಿ ಮರದ ದಿಮ್ಮಿಗಳನ್ನು ಸಾಗಿಸಲು ಅನುಮತಿ ನೀಡಲಾಗಿತ್ತು. ಆದರೆ ಈ ಲಾರಿಯಲ್ಲಿ ಹೆಚ್ಚುವರಿಯಾಗಿ 10.435 ತೂಕದ ಮರದ ಕೊರಡುಗಳು ಪತ್ತೆಯಾದವು. ಆನಂತರ ಲಾರಿಯ ದಾಖಲೆಗಳನ್ನು ಪರಿಶೀಲಿಸಿದಾಗ 27 ತಿಂಗಳಿ ನಿಂದ ಲಾರಿಯ ತೆರಿಗೆ ಕಟ್ಟದೆ ಈ ರೀತಿ ಮರ ಸಾಗಿಸುತ್ತಿರುವುದು ಕಂಡು ಬಂದವು ಎಂದು ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಾರಿಗೆ ಇಲಾಖಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದಿದ್ದಾರೆ.

Translate »