ಗಣ್ಯರಿಗೆ ಕಲಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

ಗಣ್ಯರಿಗೆ ಕಲಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

December 3, 2018

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅನ್ನಪೂರ್ಣ ಕಲಾ ಸಂಘ ಹಾಗೂ ವಿವಿಧ ಸಂಘಗಳ ಸಂಯು ಕ್ತಾಶ್ರಯದಲ್ಲಿ ಕಳೆದ ತಿಂಗಳಷ್ಟೇ ನಿಧನ ರಾದ ಚಲನಚಿತ್ರ ನಟ ಹಾಗೂ ಮಾಜಿ ಸಚಿವ ಅಂಬರೀಶ್, ಹಾಸನ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್, ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಮಾಜಿ ಸಚಿವ ಜಾಫರ್ ಶರೀಫ್ ಇವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೊದಲು ಜ್ಯೋತಿ ಬೆಳಗಿ, ಮಡಿದ ನಾಲ್ಕು ಜನರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಎರಡು ನಿಮಿಷ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರವಿನಾಕಲ ಗೂಡು, ನವೆಂಬರ್ ತಿಂಗಳಲ್ಲಿ ಸಮಾಜಕ್ಕೆ ಉತ್ತಮ ಕೆಲಸ ಮಾಡಿದ ನಾಲ್ಕು ಜನ ರನ್ನು ಕಳೆದುಕೊಂಡಿದ್ದೇವೆ. ಯಾವೊಂದು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದವರು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ನಾಲ್ಕು ಬಾರಿ ಕ್ಷೇತ್ರದ ಶಾಸಕರಾಗಿದ್ದ ಸಮಯ ದಲ್ಲಿ ಯಾವ ವ್ಯಕ್ತಿಗೂ ಕಿಂಚಿತ್ತು ದ್ರೋಹ ಬಗೆಯದೆ ಮತ್ತು ಅಧಿಕಾರಾವಧಿಯಲ್ಲಿ ಜಾತಿಯ ಸಂಘರ್ಷಕ್ಕೆ ಅವಕಾಶ ಕೊಡದೇ ಅಚ್ಚು ಕಟ್ಟಾಗಿ ಸೇವೆ ಮಾಡಿದ ಕೀರ್ತಿ ಪ್ರಕಾಶ್ ಅವರಿಗೆ ಸಲ್ಲುತ್ತದೆ ಎಂದರು. ಅಂಬರೀಶ್ ಚಲನಚಿತ್ರದಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಿದ್ದಲ್ಲದೇ ರಾಜಕೀಯದಲ್ಲಿ ಉತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿ ದ್ದರು. ಜಾಫರ್ ಶರೀಫ್ ಕೇಂದ್ರ ರೈಲ್ವೆ ಸಚಿವರಾಗಿ ರಾಜ್ಯ ಮತ್ತು ಜಿಲ್ಲೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಇನ್ನು ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ 39 ವರ್ಷಕ್ಕೆ ಸಚಿವರಾಗಿ ಅತ್ಯಂತ ಕ್ರಿಯಾ ಶೀಲ, ಬುದ್ದಿವಂತ ರಾಜಕಾರಣಿಯಾಗಿ ದ್ದರು. ಇನ್ನು 10 ವರ್ಷದಲ್ಲಿ ಪ್ರಧಾನಿ ಆಗುವಷ್ಟು ಎತ್ತರಕ್ಕೆ ಬೆಳೆದಿದ್ದರು. ಇಂತಹ ವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಕಲಾವಿದರು ಮತ್ತು ವಿವಿಧ ಸಂಘ ಸಂಸ್ಥೆಗಳು ಮಾಡಿರುವುದು ಶ್ಲಾಘನೀಯ ವಾಗಿದೆ ಎಂದು ಬಣ್ಣಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ಮಾತನಾಡಿ, ರಾಜ್ಯದಲ್ಲಿ ನಾಲ್ಕು ಪ್ರತಿಭೆ ಗಳನ್ನು ಕಳೆದುಕೊಂಡಿದ್ದೇವೆ. ಒಬ್ಬ ಮನುಷ್ಯ ನಿಧನರಾದಾಗ ಅವರನ್ನು ನೆನ ಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು. ಕಾವೇರಿ ನೀರಿಗಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅಂಬರೀಶ್. ಹಾಸನದ ಶಾಸಕರಾಗಿದ್ದ ಹೆಚ್.ಎಸ್. ಪ್ರಕಾಶ್ ನನ್ನ ಆತ್ಮೀಯ ಗೆಳೆಯ. ಅವರ ಒಡನಾಟ ಹತ್ತಿರವಾಗಿತ್ತು ಎಂದು ಇದೇ ವೇಳೆ ನಿಧನರಾದವರನ್ನು ಇದೆ ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಅನ್ನಪೂರ್ಣ ಕಲಾ ಸಂಘದ ನಾಗಮೋಹನ್, ಮಾನವ ಹಕ್ಕು ಗಳ ವೇದಿಕೆ ಜಿಲ್ಲಾಧ್ಯಕ್ಷ ಸೈಯದ್ ಏಜಾಜ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಜಿ.ಓ.ಮಹಾಂತಪ್ಪ, ನವ ಕರ್ನಾ ಟಕ ಯುವ ಶಕ್ತಿ ರಾಜ್ಯ ಮುಖಂಡ ಡಿ. ಶಂಕರಗೌಡ, ಲಕ್ಷ್ಮಣ್ ಬೆಳವಾಡಿ, ಶಿವಣ್ಣ, ಶೇಖರಪ್ಪ ಇತರರು ಉಪಸ್ಥಿತರಿದ್ದರು.

Translate »