ಹಾಸನದಲ್ಲಿ ಪತಂಜಲಿ ಪರಿವಾರದ ಯೋಗ ಮ್ಯಾರಥಾನ್
ಹಾಸನ

ಹಾಸನದಲ್ಲಿ ಪತಂಜಲಿ ಪರಿವಾರದ ಯೋಗ ಮ್ಯಾರಥಾನ್

December 3, 2018

ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾಗೂ ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಲು ಪತಂಜಲಿ ಯೋಗ ಪರಿವಾರದಿಂದ ಭಾನುವಾರ ಬೆಳಿಗ್ಗೆ ನಗರದ ಹೇಮಾವತಿ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗಿದ್ದ ಯೋಗ ಮ್ಯಾರಥಾನ್ ಯಶಸ್ವಿಗೊಂಡಿತು.

ಪತಂಜಲಿ ಯೋಗ ಸಮಿತಿ, ಯುವ ಭಾರತ್, ಭಾರತ್ ಸ್ವಾಭಿಮಾನ್ ಟ್ರಸ್ಟ್, ಕಿಸಾನ್ ಸೇವಾ ಸಮಿತಿ, ಮಹಿಳಾ ಪತಂ ಜಲಿ ಯೋಗ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಮ್ಯಾರ ಥಾನ್” ನಡಿಗೆಗೆ ಪತಂಜಲಿ ರಾಜ್ಯ ಸದಸ್ಯ ಹಾಗೂ ಜಿಲ್ಲೆಯ ಮುಖಂಡರು ಹರಿಹರ ಪುರ ಶ್ರೀಧರ್ ಮತ್ತು ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಬಸವರಾಜು ಅವರು ಕನ್ನಡ ಬಾವುಟ ಮತ್ತು ಪತಂಜಲಿ ಬಾವುಟವನ್ನು ಪ್ರದರ್ಶಿ ಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಪತಂಜಲಿಯ ಹರಿಹರಪುರ ಶ್ರೀಧರ್, ಯೋಗ ಮ್ಯಾರ ಥಾನ್ ಶೋಭಾಯಾತ್ರೆ ಹಾಸನದಲ್ಲಿ ಆಯೋ ಜಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆ ಒಳಗೆ ಯೋಗ ಯಾತ್ರೆಯನ್ನು ಮಾಡಲಾಗಿದೆ ಎಂದರು. ಯುವಕರ ಸಮಾ ವೇಶವನ್ನು ಮಾಡಲಾಗಿದ್ದು, ಹಾಸನವನ್ನು ಸಂಪೂರ್ಣ ಯೋಗಮಯ ಮಾಡ ಬೇಕೆಂದು ಹೊರಟಿದ್ದೇವೆ. ಇಡೀ ಜಗತ್ತನ್ನು ಶ್ರೇಷ್ಟವನ್ನಾಗಿ ಮಾಡಬೇಕಾದರೇ ನಮ್ಮ ಭಾರತ ದೇಶ ಶ್ರೇಷ್ಟವಾಗಿರಬೇಕು. ನಮ್ಮ ರಾಜ್ಯ ಜಿಲ್ಲೆ ನಾವೆಲ್ಲಾ ಯೋಗವಂತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯೋಗದ ಪ್ರಮುಖ ಉದ್ದೇಶ ನಮ್ಮನ್ನು ಆರೋಗ್ಯವಾಗಿ ಇಟ್ಟು ಕೊಳ್ಳುವುದರ ಜೊತೆಗೆ ಜೀವನವನ್ನು ಆನಂದವನ್ನಾಗಿ ಇಟ್ಟುಕೊಳ್ಳಬೇಕು ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆಯನ್ನು ಇಡೋಣ ಎಂದು ತಿಳಿಸಿದರು.

ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಬಸವರಾಜು ಮಾತ ನಾಡಿ, ಮನೆ ಮನೆಯಲ್ಲೂ ಯೋಗಿ ಇರಬೇಕು. ಪ್ರತಿಯೊಬ್ಬ ಭಾರತೀಯನು ಯೋಗಿ ಆಗಬೇಕು ಎನ್ನುವ ಕನಸನ್ನು ಋಷಿಮುನಿಗಳಾದ ಮತ್ತು ಯೋಗದ ಪ್ರವರ್ತಕರಾದ ಪೂಜ್ಯ ರಾಮದೇವ್ ಬಾಬುರವರದ್ದಾಗಿದೆ. ಅದನ್ನು ಸಾಕಾರ ಗೊಳಿಸಲು ಹಾಸನದಲ್ಲಿ ನಡಿಗೆ ಮತ್ತು ಓಟದ ಮೂಲಕ ಜನೆತೆಗೆ ಅರಿವು ಮೂಡಿ ಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಆರೋಗ್ಯವೇ ಭಾಗ್ಯ. ಆರೋಗ್ಯ ಎಂದರೇ ಕೇವಲ ಖಾಯಿಲೆ ಒಂದೆ ಆಗಿರುವುದಿಲ್ಲ. ಭೌತಿಕ ಮತ್ತು ಮಾನಸಿಕವಾಗಿ, ಸಾಮಾ ಜಿಕವಾಗಿ, ಆಧ್ಯಾತ್ಮಿಕವಾಗಿ ನಾವು ಪರಿ ಪೂರ್ಣರಾಗಿ ಸಧೃಡರಾಗುವುದು ಎಂದು ಕಿವಿಮಾತು ಹೇಳಿದರು.

ಯೋಗ ಮ್ಯಾರಥಾನ್ ನಡಿಗೆಯು ಹೇಮಾವತಿ ಪ್ರತಿಮೆಯ ಮುಂಭಾಗದಲ್ಲಿ ಬೆಳಿಗ್ಗೆ ಸರಿಯಾಗಿ 6-30ಕ್ಕೆ ಪ್ರಾರಂಭ ವಾಗಿ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ದೇವಿಗೆರೆ ವೃತ,್ತ ನರಸಿಂಹರಾಜ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಬಿ.ಎಂ ರಸ್ತೆ, ಶಂಕರ ಮಠ ರಸೆ,್ತ ಮಹಾತ್ಮ ಗಾಂಧೀಜಿ ವೃತ್ತ, ಬಸಟ್ಟಿ ಕೊಪ್ಪಲು ರಸ್ತೆ, ಸಹ್ಯಾದ್ರಿ ವೃತ್ತ, ಕಲಾಭವನ ಮುಂಭಾಗ ಸಂಚರಿಸಿ ಹೇಮಾವತಿ ಪ್ರತಿಮೆಯ ಮುಂಭಾಗದಲ್ಲಿ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಪತಂಜಲಿ ಹಿರಿಯ ಸದಸ್ಯರು ರಂಗನಾಥ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಜಿಲ್ಲಾ ಪ್ರಭಾರಿ ಗಿರೀಶ್, ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಮಂಜುನಾಥ್, ದೊರೆಸ್ವಾಮಿ, ನಾಗೇಶ್, ಕಲಾವತಿ ಮಧು ಸೂದನ್, ಹೇಮಲತಾ, ಮಂಜುಳಾ ಹಾಗೂ ಇತರರು ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »