ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ
ಹಾಸನ

ಅರಣ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ

December 3, 2018

ಹಾಸನ: ನಗರದ ಆರ್.ಸಿ. ರಸ್ತೆ ಬಳಿ ಇರುವ ಶ್ರೀಗಂಧದ ಕೋಠಿ ಆವ ರಣದಲ್ಲಿ ರಾಜ್ಯ ಅರಣ್ಯ ಇಲಾಖೆ, ಮಲೆ ನಾಡು ಇಕೋ ಕ್ಲಬ್, ಎಂಸಿಇ ಕಾಲೇಜು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 63ನೇ ವನ್ಯಜೀವಿ ಸಪ್ತಾಹ ಅಂಗವಾಗಿ ವನ್ಯ ಚೈತನ್ಯ ಹೆಸರಿನಲ್ಲಿ ತಾಲೂಕು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು.

ಕಾಡಿನಲ್ಲಿ ವಾಸ ಮಾಡುವ ಪ್ರಾಣಿಗಳ ಕುರಿತು ವೇಷಭೂಷಣ ಸ್ಪರ್ದೆ, ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆ ಕುರಿತು ಬಿಂಬಿ ಸುವ ಬೀದಿ ನಾಟಕ ಪ್ರದರ್ಶನ, ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ, ಆಶುಭಾಷಣ ಸ್ಪರ್ದೆ ಸೇರಿದಂತೆ ವಿವಿಧ ಸ್ಪರ್ದೆಗಳಲ್ಲಿ ಶಾಲಾ ಮಕ್ಕಳು ಸಂತೋಷದಿಂದ ಪ್ರಾಲ್ಗೊಂಡಿ ದ್ದರು. ಸ್ಪರ್ಧಾ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಸಿಸಿಎಫ್ ಎ.ಕೆ. ಸಿಂಹ ಉದ್ಘಾಟಿಸಿ ಮಾತನಾಡಿದ ಅವರು, ಕಾಡು ಇದ್ದರೇ ನಾಡು. ಆದರೇ ಇಂದು ಕಾಡನ್ನೆಲ್ಲಾ ಕಡಿದು ಮರಗಳಿಲ್ಲದೇ ನಾಡಿಗೆ ಮಳೆ ಆಗುತ್ತಿಲ್ಲ.

ನೀರಿಲ್ಲದೇ ಮತ್ತು ಆಹಾರವಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿವೆ ಎಂದರು. ನಾಡನ್ನು ಹೇಗೆ ರಕ್ಷಣೆ ಮಾಡುತ್ತೀರ ಹಾಗೆ ಕಾಡಿನ ರಕ್ಷಣೆ ಕೂಡ ಮಾಡಬೇಕು ಎಂದು ಸಲಹೆ ನೀಡಿದರು. ಮಕ್ಕಳಿಂದಲೇ ಶಾಲೆಯಲ್ಲಿ ಮತ್ತು ಮನೆಯಲ್ಲಿ ಗಿಡ ನೆಟ್ಟು ಪೋಷಿ ಸುವ ಬಗ್ಗೆ ಅರಿವು ಮೂಡಿಸಬೇಕು. ಹಾಗೆ ಪ್ರಾಣಿಗಳ ಕೊಲ್ಲದ ಹಾಗೆ ಜಾಗೃತಿ ಮೂಡಿಸುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಬಿಸಿಎಫ್ ಶಿವರಾಂ ಬಾಬು, ಎಸಿಎಫ್ ಹರೀಶ್, ಆರ್.ಎಫ್ ಹೇಮಂತ್, ವಿನಯಚಂದ್ರ ಇತರರು ಉಪಸ್ಥಿತರಿದ್ದರು.

Translate »