Tag: Lok Sabha Elections 2019

Devi Gowda’s Believers Do not Live! Some people have grown up bigger !!
ಮಂಡ್ಯ, ಮೈಸೂರು

Devi Gowda’s Believers Do not Live! Some people have grown up bigger !!

March 15, 2019

ಮಂಡ್ಯ: ‘ದೇವೇಗೌಡರನ್ನು ನಂಬಿದವರು ಯಾರೂ ಬದುಕಿಲ್ಲ’. ಮಂಡ್ಯ ಸಂಸದ ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡರು ದೇವೇ ಗೌಡರ ಮೊಮ್ಮಗ ನಿಖಿಲ್ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಿದ ಬೃಹತ್ ಸಮಾವೇಶದಲ್ಲಿ ಯಡವಟ್ಟು ಮಾತಿದು. ಮರುಕ್ಷಣವೇ ಎಚ್ಚೆತ್ತ ಶಿವರಾಮೇಗೌಡ, ಅದೇ ರೀತಿ ದೇವೇಗೌಡರ ಗರಡಿ ಯಲ್ಲಿ ಪಳಗಿದ ಅನೇಕರು ಪಕ್ಷ ಬಿಟ್ಟು ಹೋದರೂ ಕೂಡ ಉನ್ನತ ಮಟ್ಟಕ್ಕೇರಿ ದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ, ಹೆಚ್.ಸಿ. ಮಹದೇವಪ್ಪ, ಆರ್.ವಿ. ದೇಶಪಾಂಡೆ ಸೇರಿದಂತೆ ಜೆಡಿಎಸ್ ತೊರೆದ ನಂತರವೂ ರಾಜಕೀಯವಾಗಿ ಮೇಲೇರಿರುವವರನ್ನು…

ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸದಾನಂದಗೌಡ  ಸೇರಿದಂತೆ ಎಲ್ಲಾ ಹಾಲಿ 15 ಸಂಸದರಿಗೆ ಬಿಜೆಪಿ ಟಿಕೆಟ್
ಮೈಸೂರು

ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸದಾನಂದಗೌಡ ಸೇರಿದಂತೆ ಎಲ್ಲಾ ಹಾಲಿ 15 ಸಂಸದರಿಗೆ ಬಿಜೆಪಿ ಟಿಕೆಟ್

March 14, 2019

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪ್ರತಾಪ ಸಿಂಹ ಸೇರಿದಂತೆ ಎಲ್ಲಾ ಹಾಲಿ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆ. ಉಳಿದ ಕಡೆ ಬಿಜೆಪಿ ಅಭ್ಯರ್ಥಿ ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು, ಕಾಂಗ್ರೆಸ್ ತೊರೆದು ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷಕ್ಕೆ ಸೇರ್ಪಡೆಗೊಂಡಿರುವ ಉಮೇಶ್ ಜಾಧವ್ ರೀತಿಯಲ್ಲಿಯೇ ಇನ್ನೂ ಹಲವು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಎರಡು, 3…

ಕಣ್ಣೀರ ಧಾರೆ ನಡುವೆ ದೇವೇಗೌಡರಿಂದ ಮೊಮ್ಮಗ ಪ್ರಜ್ವಲ್‍ಗೆ ಹಾಸನ ಧಾರೆ
ಮೈಸೂರು, ಹಾಸನ

ಕಣ್ಣೀರ ಧಾರೆ ನಡುವೆ ದೇವೇಗೌಡರಿಂದ ಮೊಮ್ಮಗ ಪ್ರಜ್ವಲ್‍ಗೆ ಹಾಸನ ಧಾರೆ

March 14, 2019

ಮೂಡಲಹಿಪ್ಪೆ(ಹಾಸನ): ಕಣ್ಣೀರಧಾರೆಯ ನಡುವೆಯೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಮ್ಮ ಅಭಿಮಾನದ ಹಾಸನ ಲೋಕಸಭಾ ಕ್ಷೇತ್ರದ ಪ್ರತಿನಿಧಿತ್ವವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬುಧವಾರ ಧಾರೆ ಎರೆದರು. ಈ ಸಂದರ್ಭ ಪ್ರಜ್ವಲ್ ಅವರ ತಂದೆ ಹೆಚ್.ಡಿ.ರೇವಣ್ಣ, ತಾಯಿ ಭವಾನಿ, ಸಂಬಂಧಿಯಾದ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಅವರೂ ಕಣ್ಣೀರು ಸುರಿಸಿದರು. ಹಾಸನ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ ಎಂದು ಈ ಮೊದಲೇ ಹೇಳಿದ್ದ ಹೆಚ್.ಡಿ.ದೇವೇಗೌಡ ಇಲ್ಲಿಂದ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಹಸಿರು ನಿಶಾನೆ ತೋರಿದರು….

ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ
ಮಂಡ್ಯ

ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ

March 14, 2019

ಸಿಎಂಗೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್? ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಕೋರಿದ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯ: ದೋಸ್ತಿ ನಾಯಕರ ವಿರೋಧದ ನಡುವೆಯೂ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಇಂದು ಕೂಡ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. ತಾಯಿ ಸುಮಲತಾ ಪರ ಪುತ್ರ ಅಭಿಷೇಕ್ ಅಖಾಡಕ್ಕೆ ದುಮುಕಿದ್ದು ಪ್ರಚಾರ ನಡೆಸಿದರು. ಇವತ್ತು ಅಮ್ಮ- ಮಗನ ಜುಗಲ್ ಬಂದಿ ಜೋರಾಗಿತ್ತು. ಮಳವಳ್ಳಿ ತಾಲೂಕಿನ ಹಲಗೂರು, ಹಾಡ್ಲಿ ಸರ್ಕಲ್, ಮಳವಳ್ಳಿ ಟೌನ್ ಸೇರಿ ದಂತೆ…

ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ  ಯಾರನ್ನೂ ಕರೆತರಲ್ಲ
ಮಂಡ್ಯ

ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ ಯಾರನ್ನೂ ಕರೆತರಲ್ಲ

March 14, 2019

ಮಂಡ್ಯ: ನನ್ನ ಪರ ಚುನಾವಣಾ ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ ಯಾರನ್ನೂ ಕರೆತರುವುದಿಲ್ಲ, ನನ್ನ ಸ್ವಾರ್ಥಕ್ಕೆ ಸ್ಯಾಂಡಲ್‍ವುಡ್‍ನ ಯಾರನ್ನೂ ದುರುಪಯೋಗ ಪಡಿಸಿಕೊಳ್ಳೋದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ನನ್ನ ಸೈನಿಕರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಮದ್ದೂರು ತಾಲೂಕಿನ ಗೊಲ್ಲರ ದೊಡ್ಡಿಯ ಜುಂಜಪ್ಪ, ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂ ಭಿಸಿದ ಬಳಿಕ ಅವರು ಮಾತನಾಡಿದರು. ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಸ್ಯಾಂಡಲ್‍ವುಡ್‍ನ ಅನೇಕ ನಟ, ನಟಿಯರು, ನಿರ್ಮಾಪಕರು ನಿಂತಿ ದ್ದಾರೆ. ಸುಮಲತಾ ಅವರ ಪರ…

ಗುರುವಾರ ಇಲ್ಲವೇ ಶುಕ್ರವಾರ ದೋಸ್ತಿ ಪಟ್ಟಿ ಪ್ರಕಟ
ಮೈಸೂರು

ಗುರುವಾರ ಇಲ್ಲವೇ ಶುಕ್ರವಾರ ದೋಸ್ತಿ ಪಟ್ಟಿ ಪ್ರಕಟ

March 12, 2019

ಬೆಂಗಳೂರು: ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡು ಉಭಯ ಪಕ್ಷಗಳಿಗೆ ದೊರೆಯುವ ಕ್ಷೇತ್ರಗಳ ಪಟ್ಟಿ ಬರುವ ಗುರುವಾರ ಇಲ್ಲವೇ ಶುಕ್ರವಾರ ಪ್ರಕಟಿಸಲು ರಾಷ್ಟ್ರೀಯ ಕಾಂಗ್ರೆಸ್ ನಿರ್ಧರಿಸಿದೆ. ದೆಹಲಿಯಲ್ಲಿಂದು ಪಕ್ಷದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಅಭ್ಯರ್ಥಿಗಳ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ರಾಜ್ಯದ ಮಟ್ಟಿಗೆ ಸಂಬಂಧಪಟ್ಟಂತೆ ತಮ್ಮ ಅನಿಸಿಕೆಗಳನ್ನು ವರಿಷ್ಠರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕರ್ನಾಟಕದ ನಾಯಕರು ನೀಡಿದ ಮಾಹಿತಿ…

ಬೆಂಗಳೂರು ಉತ್ತರ ಸಹವಾಸ ಬೇಡ
ಮೈಸೂರು

ಬೆಂಗಳೂರು ಉತ್ತರ ಸಹವಾಸ ಬೇಡ

March 12, 2019

ಬೆಂಗಳೂರು: ಬೆಂಗಳೂರು ನಗರ ಮತದಾರರನ್ನು ನಂಬಿ ನೀವು ಉತ್ತರ ಕ್ಷೇತ್ರದಿಂದ ಸ್ಪರ್ಧಿಸ ಬೇಡಿ. ಮೈಸೂರು ಕ್ಷೇತ್ರದಿಂದ ಕಣಕ್ಕಿಳಿ ಯಿರಿ, ನಾವು ನಿಮ್ಮನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಬೇಡ ಎಂದು ಸ್ಪಷ್ಟವಾಗಿ ತಮ್ಮ ತಂದೆ ಯವರಿಗೆ ತಿಳಿಸಿರುವುದಲ್ಲದೆ, ನೀವು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಯಿರಿ ಎಂದು ಸಲಹೆ ಮಾಡಿದ್ದಾರೆ. ಆದರೆ…

ಮೋದಿ ಮತ್ತೆ ಪ್ರಧಾನಿಯಾಗ್ತಾರೆ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಭವಿಷ್ಯ
ಮೈಸೂರು

ಮೋದಿ ಮತ್ತೆ ಪ್ರಧಾನಿಯಾಗ್ತಾರೆ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಭವಿಷ್ಯ

March 12, 2019

ಬೆಂಗಳೂರು: ಪ್ರಧಾನಿ ಮೋದಿ ಮತ್ತೆ ಪ್ರಧಾನಿ ಆಗ್ತಾರೆ. ಇದು ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಶ್ವಾಸ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸ ಬೇಕೆಂದು ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಲ್ಲಿ ವಿನಂತಿಸಿಕೊಂಡಿದ್ದು, ಅದಕ್ಕೆ ಸಮ್ಮತಿಸಿದ್ದಾರೆ. ಸೋಮವಾರ ಆರ್.ಅಶೋಕ್ ಅವರು ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ತೆರಳಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಮಂಡ್ಯ, ತುಮ ಕೂರು, ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಪಕ್ಷದ ಪರ ಪಾಲ್ಗೊಳ್ಳಬೇಕೆಂದು ಮನವಿ…

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ V/s ರೋಹಿಣಿ
ಮೈಸೂರು

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ V/s ರೋಹಿಣಿ

March 12, 2019

ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದ್ದು, ಇವರ ವಿರುದ್ಧ ‘ಆಧಾರ್’ ಖ್ಯಾತಿಯ ನಂದನ್ ನಿಲೇಕಣಿ ಪತ್ನಿ ರೋಹಿಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದ ಅನಂತಕುಮಾರ್ ಅವರ ನಿಧನದ ನಂತರ ಅವರ ಪತ್ನಿ ತೇಜಸ್ವಿನಿಯವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ದಿವಂಗತ ಅನಂತಕುಮಾರ್ ಅವರ ಪ್ರಭಾವ ಹಾಗೂ…

ನಂಜರಾಜ ಬಹದ್ದೂರ್ ಛತ್ರದಲ್ಲಿ ಇವಿಎಂ, ವಿವಿ ಪ್ಯಾಟ್ ಯಂತ್ರಗಳು
ಮೈಸೂರು

ನಂಜರಾಜ ಬಹದ್ದೂರ್ ಛತ್ರದಲ್ಲಿ ಇವಿಎಂ, ವಿವಿ ಪ್ಯಾಟ್ ಯಂತ್ರಗಳು

March 12, 2019

ಮೈಸೂರು: ಮೈಸೂರು ಜಿಲ್ಲೆಯ ಲೋಕಸಭಾ ಚುನಾವಣಾ ಮತಗಟ್ಟೆಗಳಿಗೆ ಒದಗಿಸುವ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಮೈಸೂರಿನ ನಂಜರಾಜ ಬಹದ್ದೂರ್ ವೇರ್‍ಹೌಸ್‍ನಲ್ಲಿ ಇರಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಕಣ್ಗಾವಲು ಮಾಡಲಾಗಿದ್ದು, ಬಿಇಎಲ್ ಕಂಪನಿಯಿಂದ ಮೊದಲ ಹಂತದ ಪರೀಕ್ಷೆ ನಡೆಸಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಣಕು ಮತದಾನದ ಮೂಲಕ ಇವಿಎಂ ಮತ್ತು ವಿವಿ ಪ್ಯಾಟ್‍ಗಳ ಕಾರ್ಯಕ್ಷಮತೆ ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮರಾಗಳ ಮೂಲಕ ಯಂತ್ರ ಗಳನ್ನು ವೀಕ್ಷಿಸಲು ನಂಜರಾಜ ಬಹದ್ದೂರ್ ಛತ್ರದಲ್ಲಿ ಕಂಪ್ಯೂಟರ್ ಕೇಂದ್ರವನ್ನು ತೆರೆದು ವೀಕ್ಷಿಸಲು…

1 7 8 9 10 11 12
Translate »