Devi Gowda’s Believers Do not Live! Some people have grown up bigger !!
ಮಂಡ್ಯ, ಮೈಸೂರು

Devi Gowda’s Believers Do not Live! Some people have grown up bigger !!

March 15, 2019

ಮಂಡ್ಯ: ‘ದೇವೇಗೌಡರನ್ನು ನಂಬಿದವರು ಯಾರೂ ಬದುಕಿಲ್ಲ’. ಮಂಡ್ಯ ಸಂಸದ ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡರು ದೇವೇ ಗೌಡರ ಮೊಮ್ಮಗ ನಿಖಿಲ್ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಿದ ಬೃಹತ್ ಸಮಾವೇಶದಲ್ಲಿ ಯಡವಟ್ಟು ಮಾತಿದು.

ಮರುಕ್ಷಣವೇ ಎಚ್ಚೆತ್ತ ಶಿವರಾಮೇಗೌಡ, ಅದೇ ರೀತಿ ದೇವೇಗೌಡರ ಗರಡಿ ಯಲ್ಲಿ ಪಳಗಿದ ಅನೇಕರು ಪಕ್ಷ ಬಿಟ್ಟು ಹೋದರೂ ಕೂಡ ಉನ್ನತ ಮಟ್ಟಕ್ಕೇರಿ ದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ, ಹೆಚ್.ಸಿ. ಮಹದೇವಪ್ಪ, ಆರ್.ವಿ. ದೇಶಪಾಂಡೆ ಸೇರಿದಂತೆ ಜೆಡಿಎಸ್ ತೊರೆದ ನಂತರವೂ ರಾಜಕೀಯವಾಗಿ ಮೇಲೇರಿರುವವರನ್ನು ಪಟ್ಟಿ ಮಾಡಿದರು.

ಸಮಾವೇಶದಲ್ಲಿ ವೀರಾವೇಶದಿಂದ ಮಾತು ಆರಂಭಿಸಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ನಡೆಯುತ್ತಿದೆ. ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗೇ ಎದುರಿಸುತ್ತಿವೆ ಎಂಬುದನ್ನು ಮರೆತು ಜೆಡಿಎಸ್‍ಗೆ ಕಾಂಗ್ರೆಸ್‍ನ ಅನಿವಾರ್ಯವಿಲ್ಲ. ಆದರೆ ಕಾಂಗ್ರೆಸ್‍ಗೆ ಜೆಡಿಎಸ್‍ನ ಅನಿವಾರ್ಯ ವಿದೆ. ಹೆಚ್.ಡಿ. ದೇವೇಗೌಡರ ಶಕ್ತಿ ಏನೆಂಬುದು ದೆಹಲಿಯಲ್ಲಿರುವ ರಾಹುಲ್‍ಗಾಂಧಿ ಅವರಿಗೆ ಗೊತ್ತಿದೆ. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ಸಿಗರಿಗೆ ದೇವೇಗೌಡರ ಶಕ್ತಿ ಅರ್ಥವಾಗುತ್ತಿಲ್ಲ ಎಂದು ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ಭಾಣ ಬಿಟ್ಟರು.

ದೇವೇಗೌಡರು ನನ್ನನ್ನು ಕರೆದು ಲೋಕಸಭಾ ಉಪಚುನಾವಣೆಯಲ್ಲಿ ಟಿಕೆಟ್ ನೀಡಿದರು. ಅವರ ಆಶೀರ್ವಾದದಿಂದ ಸಂಸದನಾದೆ. ಬೇರೆ ಬೇರೆ ಕಾರಣಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ನನಗಿಂತ ಹೆಚ್ಚಿನ ಮತಗಳನ್ನು ನೀಡಿ ನಿಖಿಲ್ ಅವರನ್ನುಗೆಲ್ಲಿಸಿ ಎಂದು ಮನವಿ ಮಾಡಿದರು. ದೇವೇಗೌಡರದು ಕುಟುಂಬ ರಾಜಕಾರಣ ಎಂದು ಬಿಂಬಿಸಲಾಗಿದೆ. ಆದರೆ ಅವರದು ಕುಟುಂಬ ರಾಜಕಾರಣ ಅಲ್ಲ. ಅವರು ಸ್ವಂತಕ್ಕಾಗಿ ಆಸ್ತಿ ಮಾಡಿಕೊಳ್ಳಲಿಲ್ಲ ಎಂದ ಶಿವರಾಮೇಗೌಡರು, ನಾನು ಮಂಡ್ಯ ಕ್ಷೇತ್ರವನ್ನು ನಿಖಿಲ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಕಿಂಚಿತ್ತು ನೋವಿಲ್ಲ ಎಂದರು. ಶಿವರಾಮೇ ಗೌಡರ ಯಡವಟ್ಟು ಮಾತುಗಳನ್ನು ಗಮನಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ತಮ್ಮ ಭಾಷಣದಲ್ಲಿ ‘ಶಿವರಾಮೇ ಗೌಡರು ಮಾತಿನ ಭಾರದಲ್ಲಿ ಕೆಲವು ಮಾತುಗಳನ್ನಾಡಿದ್ದಾರೆ. ಆದರೆ ಮಾಧ್ಯಮದವರು ಇಂತಹ ಸಣ್ಣ ಸಣ್ಣ ವಿಷಯಗಳನ್ನೇ ದೊಡ್ಡದಾಗಿ ಬಿಂಬಿಸಿಬಿಡುತ್ತೀರಿ. ಇನ್ನು ದೇವೇಗೌಡರು ರಾಜ ಕೀಯ ಆರಂಭಿಸಿದಾಗ ಇಲ್ಲಿರುವ ಹಲವಾರು ಮಾಧ್ಯಮ ದವರು ಇನ್ನೂ ಹುಟ್ಟೇ ಇರಲಿಲ್ಲ ಅನ್ನಿಸುತ್ತದೆ. ನೀವು ದೇವೇಗೌಡರನ್ನು ಬಿಡದೆ ಟೀಕಿಸುತ್ತೀರಿ. ಇದು ಮನಸ್ಸಿಗೆ ಬಹಳ ನೋವಾಗಿದೆ. ದಯವಿಟ್ಟು ಸಣ್ಣ ವಿಷಯಗಳನ್ನು ದೊಡ್ಡದು ಮಾಡಬೇಡಿ’ ಎಂದು ಮನವಿ ಮಾಡಿದರು.

Translate »