Tag: M.T. Yogesh Kumar

ಬಂಡೀಪುರ ಕಾಡಂಚಿನ ಗ್ರಾಮಸ್ಥರಿಂದ ಮಾನವ-ವನ್ಯಜೀವಿ  ಸಂಘರ್ಷದ ಬಗ್ಗೆ ಮಾಹಿತಿ ಪಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳು
ಮೈಸೂರು

ಬಂಡೀಪುರ ಕಾಡಂಚಿನ ಗ್ರಾಮಸ್ಥರಿಂದ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಮಾಹಿತಿ ಪಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳು

February 16, 2021

ಮೈಸೂರು,ಫೆ.15(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಬಂಡೀಪುರ ಕಾಡಂಚಿನ ಗ್ರಾಮಸ್ಥ ರೊಂದಿಗೆ ಸಮಾಲೋಚಿಸಿ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನುಸರಿಸುತ್ತಿರುವ ಕ್ರಮ ಕುರಿತು ಮಾಹಿತಿ ಪಡೆದರು. ಕನ್ಸರ್ವೇಷನ್ ವೈಲ್ಡ್‍ಲೈಫ್ ಫೌಂಡೇಷನ್ ವತಿ ಯಿಂದ ಆಯೋಜಿಸಿದ್ದ `ಪರಿಸರ ಜಾಗೃತಿ’ ಶಿಬಿರ ದಲ್ಲಿ ಅಂತಿಮ ವರ್ಷದ 30 ಮಂದಿ ವಿದ್ಯಾರ್ಥಿಗಳು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಂಡರು. ಇದೇ ವೇಳೆ ಫೌಂಡೇಷನ್ ಮುಖ್ಯಸ್ಥ ರಾಜ್‍ಕುಮಾರ್ ಡಿ.ಅರಸ್ ಮಾತನಾಡಿ, ವನ್ಯಸಂಪ ತ್ತಿನ ಸಂರಕ್ಷಣೆಯ ಜವಾಬ್ದಾರಿ ಕೇವಲ ಅರಣ್ಯ…

`ರಂಗನತಿಟ್ಟು’ ಪಕ್ಷಿಧಾಮದ ಪುನಶ್ಚೇತನ ಕಾಮಗಾರಿ ಆರಂಭ
ಮೈಸೂರು

`ರಂಗನತಿಟ್ಟು’ ಪಕ್ಷಿಧಾಮದ ಪುನಶ್ಚೇತನ ಕಾಮಗಾರಿ ಆರಂಭ

January 3, 2019

ಮೈಸೂರು: ಕೇರಳದ ವೈನಾಡು ಹಾಗೂ ಕಾವೇರಿ ಕಣಿವೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಆರ್‍ಎಸ್‍ಗೆ ಒಳಹರಿವು ಹೆಚ್ಚಿ ಆ.16ರಂದು ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ನೆರೆಯಿಂದಾಗಿ ಕೊಚ್ಚಿ ಹೋಗಿದ್ದ ರಂಗನ ತಿಟ್ಟು ಪಕ್ಷಿಧಾಮವನ್ನು ಪುನಶ್ಚೇತನಗೊಳಿ ಸುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಸಾವಿರಾರು ಮರಳು ಮೂಟೆಗಳನ್ನು ಬಳಸಿ ದ್ವೀಪಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಜೀವನದಿ ಕಾವೇರಿಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಹರಿದ ಭಾರಿ ಪ್ರಮಾಣದ ನೀರು ರಂಗನ ತಿಟ್ಟು ಪಕ್ಷಿಧಾಮವನ್ನು ಬಹುತೇಕ…

`ಸಿಡಿಮದ್ದು’ ಬಳಸಿ ಮೀನುಗಾರಿಕೆ
ಮೈಸೂರು

`ಸಿಡಿಮದ್ದು’ ಬಳಸಿ ಮೀನುಗಾರಿಕೆ

January 1, 2019

ಮೈಸೂರು: ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದನೆ ಮಾಡುವ ದುರಾಸೆಯಿಂದಾಗಿ ಕೆಲವು ಮೀನುಗಾರರು ವಾಮಮಾರ್ಗದಲ್ಲಿ ಮೀನುಗಾರಿಕೆಗೆ ಮುಂದಾಗಿದ್ದು, ಕಾವೇರಿ ನದಿಯಲ್ಲಿ ಸಿಡಿಮದ್ದು ಬಳಸಿ ಮೀನು ಹಿಡಿಯುತ್ತಿದ್ದಾರೆ. ಈ ಅಪಾಯಕಾರಿ ವಿಧಾನದಿಂದಾಗಿ ಕೆಲವರು ಕೈ ಕಳೆದು ಕೊಂಡು ಪರಿತಪಿಸುತ್ತಿದ್ದಾರೆ. ಕಾವೇರಿ ನದಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದ್ದು, ಆದರೆ ಕೆಲವು ಮೀನುಗಾರರು ಕಡಿಮೆ ಶ್ರಮ ಹಾಕಿ ಹೆಚ್ಚು ಸಂಪಾದಿಸಲು ವಿನಾಶಕ ಮಾರ್ಗ ಅನುಸರಿಸುವ ಮೂಲಕ ತಮ್ಮನ್ನೂ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ನದಿಯಲ್ಲಿ ಮೀನುಗಳೊಂದಿಗೆ ನೀರುನಾಯಿ ಸೇರಿದಂತೆ ಇನ್ನಿತರ ಜಲ ಚರಗಳಿಗೆ ಸಂಚಕಾರ ತಂದಿಡುತ್ತಿದ್ದಾರೆ….

ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕುಗ್ರಾಮಗಳಿಗೆ ವೈರ್‍ಲೆಸ್ ಭಾಗ್ಯ
ಮೈಸೂರು

ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕುಗ್ರಾಮಗಳಿಗೆ ವೈರ್‍ಲೆಸ್ ಭಾಗ್ಯ

November 19, 2018

ಮೈಸೂರು: ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ಜನರ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಮಗಳಿಗೆ ಪ್ರಾಣಿಗಳು ನುಗ್ಗಿದ ಮಾಹಿತಿಯನ್ನು ತ್ವರಿತಗತಿಯಲ್ಲಿ ಪಡೆದು ಕೊಳ್ಳುವುದಕ್ಕಾಗಿ ವೈರ್‍ಲೆಸ್ ಅನ್ನು ನೀಡಲು ಮುಂದಾಗಿದೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕಳೆದ ವರ್ಷ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾಗುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದ ಸುತ್ತಲೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಸುಮಾರು 35 ಗ್ರಾಮಗಳು ಸಂಪರ್ಕದ ಕೊರತೆ ಎದುರಿಸುತ್ತಿವೆ. ಚಂಗಡಿ, ಪೊನ್ನಾಚಿ,…

ಅಧಿಕ ಹಸಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿ  ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕಡ್ಡಾಯ
ಮೈಸೂರು

ಅಧಿಕ ಹಸಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿ  ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕಡ್ಡಾಯ

October 30, 2018

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಸ ನಿರ್ವಹಣೆ ಸಮಸ್ಯೆ ಉಲ್ಬಣಿಸದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ನಗರಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, 50 ಕೆಜಿಗಿಂತ ಹೆಚ್ಚಾಗಿ ಹಸಿ ಕಸ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಆದೇಶ ಹೊರಡಿಸಲು ನಿರ್ಧರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ನಿರ್ವಹಣೆಯ ಸಮಸ್ಯೆ ಸರ್ಕಾರ ಹಾಗೂ ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನವೊಂದನ್ನು ನೀಡಿದ್ದು, ಹೆಚ್ಚಾಗಿ ಕಸ ಸಂಗ್ರಹವಾಗುವ…

ಈ ಬಾರಿ ದಸರಾ ವಸ್ತುಪ್ರದರ್ಶನದ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್
ಮೈಸೂರು, ಮೈಸೂರು ದಸರಾ

ಈ ಬಾರಿ ದಸರಾ ವಸ್ತುಪ್ರದರ್ಶನದ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್

October 9, 2018

ಮೈಸೂರು:  ದಸರಾ ಹಿನ್ನೆಲೆಯಲ್ಲಿ 90 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಈ ಬಾರಿ ಚೀನಾ ಮಾದರಿಯ ಲ್ಯಾಂಟನ್ ಪಾರ್ಕ್ ಸಿದ್ಧಪಡಿಸಲಾಗುತ್ತಿದೆ. ಮೈಸೂರು ಪ್ರಾಂತ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಸೇರಿದಂತೆ ನಾಡಿನ ಪರಂಪರೆಯನ್ನು ತ್ರಿಡಿ ಶೋನಲ್ಲಿ ಬಿಂಬಿಸುವುದರೊಂದಿಗೆ 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಮುದ ನೀಡಲಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಲ್ಯಾಂಟನ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಮೈಸೂರಿನ ಡ್ರೀಮ್ ಪೆಟಲ್ಸ್ ಸಂಸ್ಥೆ ಲ್ಯಾಂಟನ್ ಪಾರ್ಕ್ ಸ್ಥಾಪಿಸುವ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಚೀನಾದ ಸಂಸ್ಥೆ…

ಸ್ವಚ್ಛ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಸ್ಥಾಪನೆಗೆ ಕ್ರಮ
ಮೈಸೂರು

ಸ್ವಚ್ಛ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಸ್ಥಾಪನೆಗೆ ಕ್ರಮ

June 4, 2018

ಕಳೆದ ವರ್ಷ 15 ಇ-ಶೌಚಾಲಯ ನಿರ್ಮಿಸಲಾಗಿತ್ತು ಬಯಲು ಶೌಚಮುಕ್ತಕ್ಕೆ ಕ್ರಮ ಬಹು ಬೇಡಿಕೆಯ ಸ್ಥಳಗಳಲ್ಲಿ ಜೋಡಣೆ – ಎಂ.ಟಿ.ಯೋಗೇಶ್ ಕುಮಾರ್ ಮೈಸೂರು:  ಮೂರನೇ ಬಾರಿಯೂ ಸ್ವಚ್ಛನಗರಿಯ ಬಿರುದು ಪಡೆದಿರುವ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹೊಸದಾಗಿ 12 ಇ-ಟಾಯ್ಲೆಟ್ ಅಳವಡಿಸುವುದಕ್ಕೆ ನಗರ ಪಾಲಿಕೆ ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸ್ವಚ್ಛ ಸರ್ವೇಕ್ಷಣೆಯ ಹಿನ್ನೆಲೆಯಲ್ಲಿ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಪಟ್ಟ ದೊರಕಿಸುವುದಕ್ಕಾಗಿ ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯ ನಿಯಮಕ್ಕನುಸಾರವಾಗಿ ಮೈಸೂರಿನ ವಿವಿಧೆಡೆ 15 ಇ-ಟಾಯ್ಲೆಟ್ ನಿರ್ಮಿಸಲಾಗಿತ್ತು. ಕಳೆದು…

Translate »