Tag: Mandya Lok Sabha polls 2019

ಮಂಡ್ಯ ಬೇರೆ ಜಿಲ್ಲೆಯವರ ಪಿತ್ರಾರ್ಜಿತ ಆಸ್ತಿಯಲ್ಲ
ಮೈಸೂರು

ಮಂಡ್ಯ ಬೇರೆ ಜಿಲ್ಲೆಯವರ ಪಿತ್ರಾರ್ಜಿತ ಆಸ್ತಿಯಲ್ಲ

March 28, 2019

ಕೆ.ಆರ್.ಪೇಟೆ: ಬೇರೆ ಜಿಲ್ಲೆಯವರು ಮಂಡ್ಯವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ವಶಪಡಿಸಿಕೊಳ್ಳಲು ಬಂದಿದ್ದಾರೆ. ಸ್ವಾಭಿಮಾನದಿಂದ ನಮ್ಮ ಆಸ್ತಿಯನ್ನು ನಾವು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಗುಡುಗಿದ ಸುಮಲತಾ, ಮಂಡ್ಯ ಜನ ಪ್ರಜ್ಞಾವಂತರು, ಸ್ವಾಭಿಮಾನಿಗಳು ಎಂಬುದನ್ನು ಇಂಡಿಯಾಗೆ ತೋರಿಸಲು ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಅವರು ಇಂದು ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ನಾನು ಸ್ಪರ್ಧಿಸುತ್ತಿರುವುದು ರಾಜ್ಯದ ಮುಖ್ಯಮಂತ್ರಿಗಳ ಮಗನ…

ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ  ಭೇಟಿ ಮಾಡಿದ ಸಚಿವ ಸಾ.ರಾ.ಮಹೇಶ್
ಮೈಸೂರು

ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಭೇಟಿ ಮಾಡಿದ ಸಚಿವ ಸಾ.ರಾ.ಮಹೇಶ್

March 28, 2019

ಮಂಡ್ಯದಲ್ಲಿ ನಿಖಿಲ್ ಗೆಲುವಿಗೆ ಸಹಕರಿಸಲು ಮನವಿ ಮೈಸೂರು: ಮಂಡ್ಯ ಲೋಕಸಭಾ ಚುನಾವಣಾ ಕಣ ಗರಿ ಗೆದರಿದ್ದು, ಜೆಡಿಎಸ್-ಕಾಂಗ್ರೆಸ್ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸುತ್ತಿದೆ. ಪ್ರವಾಸೋದ್ಯಮ ಸಚಿವ ಹಾಗೂ ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಬುಧವಾರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಅವರನ್ನು ಅವರ ಮೈಸೂರು ನಿವಾಸದಲ್ಲಿ ಭೇಟಿ ಮಾಡಿದ್ದರು. ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಅವರ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ, ಸಾ.ರಾ.ಮಹೇಶ್…

ಸುಮಲತಾ ಪರ ಮತ್ತೆ  3 ಸೆಟ್ ನಾಮಪತ್ರ ಸಲ್ಲಿಕೆ
ಮಂಡ್ಯ

ಸುಮಲತಾ ಪರ ಮತ್ತೆ 3 ಸೆಟ್ ನಾಮಪತ್ರ ಸಲ್ಲಿಕೆ

March 27, 2019

ಮಂಡ್ಯ: ತೀವ್ರ ಹಣಾಹಣಿಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದ ಸುಮಲತಾ ಅಂಬರೀಶ್ ಅವರು, ಮತ್ತೆ ಮಂಗಳವಾರವೂ ನಾಮ ಪತ್ರಗಳನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಕಡೆದಿನವಾದ ಮಂಗಳವಾರ ಸುಮಲತಾ ಅವರ ಪರವಾಗಿ 3 ಸೆಟ್‍ಗಳಲ್ಲಿ ನಾಮಪತ್ರಗಳು ಸಲ್ಲಿಕೆಯಾದವು. ಅಂಬರೀಶ್ ಅಣ್ಣನ ಮಗ ಮದನ್, ಅಂಬರೀಶ್ ಅಭಿಮಾನಿ ಗಳ ಸಂಘದ ಬೇಲೂರು ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಅರವಿಂದ್, ಶಶಿಕುಮಾರ್ ಅವರ ಮೂಲಕವೂ ಸುಮ ಲತಾ ಅವರು ಮಂಗಳವಾರ ನಾಮಪತ್ರ…

ನೀತಿ ಸಂಹಿತೆ ಉಲ್ಲಂಘನೆ: ಜೆಡಿಎಸ್ ವಿರುದ್ಧ 3 ಎಫ್‍ಐಆರ್
ಮಂಡ್ಯ

ನೀತಿ ಸಂಹಿತೆ ಉಲ್ಲಂಘನೆ: ಜೆಡಿಎಸ್ ವಿರುದ್ಧ 3 ಎಫ್‍ಐಆರ್

March 27, 2019

ಮಂಡ್ಯ: ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪುತ್ರ ನಿಖಿಲ್ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, 3 ಎಫ್‍ಐಆರ್ ದಾಖಲಾಗಿವೆ. ದೂರು 1: ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ 1 ಪ್ರಕರಣದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‍ನ ಅಧಿಕಾರಿ ರವಿ ಎಂಬವರು ನೀಡಿದ ದೂರಿನ ಮೇರೆಗೆ ಮಂಡ್ಯದ ಪಶ್ಚಿಮ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವೇರಿ ವನದಲ್ಲಿ ಹೂ ಕುಂದಗಳು, ಹೂವಿನ ಗಿಡಗಳು, ಫೌಂಟೇನ್,…

ಮೂವರು ಸುಮಲತಾ ತಂತ್ರಕ್ಕೆ ವ್ಯಾಪಕ ಟೀಕೆ
ಮಂಡ್ಯ

ಮೂವರು ಸುಮಲತಾ ತಂತ್ರಕ್ಕೆ ವ್ಯಾಪಕ ಟೀಕೆ

March 27, 2019

ಮಂಡ್ಯ: ಹೈವೋಲ್ಟೇಜ್ ಸ್ಪರ್ಧಾಕಣ ಎನಿಸಿಕೊಂಡು ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೀಗ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ದಳಪತಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. `ಸುಮಲತಾ’ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತ ಹಾಕುವವರಲ್ಲಿ ಗೊಂದಲ ಮೂಡಿಸಲೆಂದೇ ಈ ಕುತಂತ್ರ ಮಾಡಲಾಗಿದೆ. ನಟ ನೀನಾಸಂ ಸತೀಶ್ ಅಭಿನಯದ `ಅಯೋಗ್ಯ’ ಸಿನಿಮಾದಲ್ಲಿ `ಬಚ್ಚೇಗೌಡ’ ಹೆಸರಿನ ಹಲವರಿಂದ ನಾಮಪತ್ರ ದಾಖಲಿಸಿ ನೈಜ ಅಭ್ಯರ್ಥಿಯನ್ನು ಸೋಲಿಸುವ ಹುನ್ನಾರದ ಮಾದರಿಯಲ್ಲೇ…

ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ಸಿಗರ ಅಗತ್ಯ ನನಗಿಲ್ಲ: ಕುಮಾರಸ್ವಾಮಿ
ಮೈಸೂರು

ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ಸಿಗರ ಅಗತ್ಯ ನನಗಿಲ್ಲ: ಕುಮಾರಸ್ವಾಮಿ

March 22, 2019

ಬೆಂಗಳೂರು: ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದು, ಅಂತಹವರ ಅವಶ್ಯ ಕತೆ ನನಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿ ಗರು ನಿಖಿಲ್‍ಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಹಿಂಬಾಗಿಲಿನಿಂದ ಬಂದವರು ಬಹಳ ಮುಂದುವರೆದಿದ್ದಾರೆ ಎಂದು ಎನ್. ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಚುನಾವಣೆ ಎದುರಿಸಲು ನಮ್ಮ ಕಾರ್ಯ ಕರ್ತರೇ ಸಮರ್ಥರಿದ್ದಾರೆ. ನಮ್ಮ ಬೆನ್ನಿಗೆ ಚೂರಿ ಹಾಕುತ್ತಿರುವ ಕಾಂಗ್ರೆಸ್…

ಸುಮಲತಾ ನಾಮಪತ್ರ ಸಲ್ಲಿಕೆ
ಮೈಸೂರು

ಸುಮಲತಾ ನಾಮಪತ್ರ ಸಲ್ಲಿಕೆ

March 21, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿ ಸಿದ ಸುಮಲತಾ ಅಂಬರೀಷ್ ಅವರು, ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರು, ಅಂಬರೀಷ್ ಅಭಿಮಾನಿ ಗಳಲ್ಲದೆ ಎಲ್ಲಾ ಸಮಾಜದ ಜನಸಾಗರದ ನಡುವೆ ಬೃಹತ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ, ಬೆಳಿಗ್ಗೆ 11.20ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು….

ಮಂಡ್ಯದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ
ಮೈಸೂರು

ಮಂಡ್ಯದಿಂದ ಸುಮಲತಾ ಸ್ವತಂತ್ರ ಸ್ಪರ್ಧೆ

March 19, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮಾರ್ಚ್ 20ರ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಇದರೊಂದಿಗೆ ಸುಮ ಲತಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ಇಂದು ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಿಕ್ಕಿ ರಿದ ಪತ್ರಿಕಾಗೋಷ್ಠಿಯಲ್ಲಿ ಅವರು ತೆರೆ ಎಳೆದರು. ಮಂಡ್ಯದ ಮತದಾರರ ಹಾಗೂ ಅಂಬರೀಷ್ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ…

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ
ಮಂಡ್ಯ, ಮೈಸೂರು

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ

March 17, 2019

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ರಾಜಕೀಯ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವಿನ ಸ್ಪರ್ಧೆ ಜಿಲ್ಲೆಯಲ್ಲಿ ಹೈ ವೊಲ್ಟೇಜ್ ಸೃಷ್ಟಿ ಮಾಡಿದೆ. ಜಿಲ್ಲೆಯಲ್ಲಿ ಇಬ್ಬರೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಪುತ್ರ ನಿಖಿಲ್ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಘೋಷಣೆಯಾಗುತ್ತಿದ್ದಂತೆ ಸಖತ್ ಆಕ್ಟೀವ್ ಆಗಿದ್ದಾರೆ. ಇದರ ಭಾಗವಾಗಿ ಇಂದು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವ ರೊಟ್ಟಿಗೆ ಕಾಂಗ್ರೆಸ್ ನಾಯಕರನ್ನು…

1 2 3 4
Translate »