ನೀತಿ ಸಂಹಿತೆ ಉಲ್ಲಂಘನೆ: ಜೆಡಿಎಸ್ ವಿರುದ್ಧ 3 ಎಫ್‍ಐಆರ್
ಮಂಡ್ಯ

ನೀತಿ ಸಂಹಿತೆ ಉಲ್ಲಂಘನೆ: ಜೆಡಿಎಸ್ ವಿರುದ್ಧ 3 ಎಫ್‍ಐಆರ್

March 27, 2019

ಮಂಡ್ಯ: ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪುತ್ರ ನಿಖಿಲ್ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, 3 ಎಫ್‍ಐಆರ್ ದಾಖಲಾಗಿವೆ.

ದೂರು 1: ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ 1 ಪ್ರಕರಣದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‍ನ ಅಧಿಕಾರಿ ರವಿ ಎಂಬವರು ನೀಡಿದ ದೂರಿನ ಮೇರೆಗೆ ಮಂಡ್ಯದ ಪಶ್ಚಿಮ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವೇರಿ ವನದಲ್ಲಿ ಹೂ ಕುಂದಗಳು, ಹೂವಿನ ಗಿಡಗಳು, ಫೌಂಟೇನ್, ವಿದ್ಯುತ್ ಸಂಪರ್ಕ, ಲಾನ್ ತುಳಿದು ಹಾಳು ಮಾಡಿರುವುದು, ಕಾಂಪೌಂಡ್ ನಿರ್ಮಾಣ ಹಂತದಲ್ಲಿದ್ದ ಪೆÇೀಲ್ಸ್ ಕೆಡವಿದ್ದು, ಒಟ್ಟು 8 ಲಕ್ಷ ರೂ.ಗಳಷ್ಟು ಹಾನಿಯಾಗಿದೆ ಎಂದು ದೂರು ನೀಡಲಾಗಿದೆ. ಐಪಿಸಿಯ ಕಲಂ 427 ಮತ್ತು ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್-1984ರ ಕಲಂ 3ರ ಅಡಿ ಈ ಪ್ರಕರಣ ದಾಖಲಿಸಲಾಗಿದೆ.
ದೂರು 2: ನಗರದ ಸಂಜಯ ವೃತ್ತದಲ್ಲಿ ಅನುಮತಿ ಪಡೆಯದೆ ಹಸಿರು, ಬಿಳಿ ಬಣ್ಣದ ಪೇಪರ್ ಚೂರುಗಳನ್ನ ಸಿಡಿಸಿ ಮನರಂಜನೆ ಕೊಟ್ಟು ಮತದಾರರನ್ನು ಸೆಳೆಯಲು ಆಮಿಷವೊಡ್ಡಿದ್ದಾರೆ ಎಂದು ಕಸಬಾ 1ರ ಫ್ಲೈಯಿಂಗ್ ಸ್ಕ್ವಾಡ್‍ನ ಸುಧಾಮ ಅವರು ದೂರು ಸಲ್ಲಿಸಿದ್ದು, ಐಪಿಸಿ ಕಲಂ 143 ಮತ್ತು 342, ರೆಡ್ ವಿತ್ ಐಪಿಸಿ ಸೆಕ್ಷನ್ 149 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ದೂರು 3: ನಗರದ ಕಾವೇರಿ ವನದೆದುರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ 2.30ರಿಂದ ಸಂಜೆ 4ರವರೆಗೂ ಮೆರವಣಿಗೆ ನಿಲ್ಲಿಸಿಕೊಂಡು ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿ ಮಾಡಿರುವುದರಿಂದ ಜೆಡಿಎಸ್ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸುಧಾಮ ಅವರು ದೂರು ನೀಡಿದ್ದು, ಐಪಿಸಿ ಕಲಂ 171 (ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ.

Translate »