ಸುಮಲತಾ ಪರ ಮತ್ತೆ  3 ಸೆಟ್ ನಾಮಪತ್ರ ಸಲ್ಲಿಕೆ
ಮಂಡ್ಯ

ಸುಮಲತಾ ಪರ ಮತ್ತೆ 3 ಸೆಟ್ ನಾಮಪತ್ರ ಸಲ್ಲಿಕೆ

March 27, 2019

ಮಂಡ್ಯ: ತೀವ್ರ ಹಣಾಹಣಿಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದ ಸುಮಲತಾ ಅಂಬರೀಶ್ ಅವರು, ಮತ್ತೆ ಮಂಗಳವಾರವೂ ನಾಮ ಪತ್ರಗಳನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಕಡೆದಿನವಾದ ಮಂಗಳವಾರ ಸುಮಲತಾ ಅವರ ಪರವಾಗಿ 3 ಸೆಟ್‍ಗಳಲ್ಲಿ ನಾಮಪತ್ರಗಳು ಸಲ್ಲಿಕೆಯಾದವು. ಅಂಬರೀಶ್ ಅಣ್ಣನ ಮಗ ಮದನ್, ಅಂಬರೀಶ್ ಅಭಿಮಾನಿ ಗಳ ಸಂಘದ ಬೇಲೂರು ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಅರವಿಂದ್, ಶಶಿಕುಮಾರ್ ಅವರ ಮೂಲಕವೂ ಸುಮ ಲತಾ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಅವರು, ಮಾ. 20ರಂದು ಭಾರೀ ಜನಸ್ತೋಮ ದೊಂದಿಗೆ ಮೆರವಣಿಗೆಯಲ್ಲಿ ಬಂದು ಮೊದಲ ನಾಮಪತ್ರ ಸಲ್ಲಿಸಿದ್ದರು.

27 ಮಂದಿಯಿಂದ 37 ನಾಮಪತ್ರ: ಮಂಡ್ಯ ಲೋಕಸಭಾ ಕ್ಷೇತ್ರದ ಒಟ್ಟು 27 ಮಂದಿಯಿಂದ 37 ನಾಮಪತ್ರಗಳು ಸಲ್ಲಿಕೆಯಾಗಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‍ನಿಂದ ಒಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ ಎಂಬುದು ಗಮನಾರ್ಹ.

ರೈತಸಂಘದ ಬೆಂಬಲದೊಂದಿಗೆ ಸುಮಲತಾ ಅಂಬರೀಶ್ ಅವರು ಪಕ್ಷೇತರ ವಾಗಿ ಒಟ್ಟು 4 ಸೆಟ್‍ಗಳಲ್ಲಿ ನಾಮಪತ್ರ ಗಳನ್ನು ಸಲ್ಲಿಸಿದ್ದಾರೆ. ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಸಹ ಒಟ್ಟು 4 ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಕೌಡ್ಲೆ ಚೆನ್ನಪ್ಪ ಎಂಬವರು 3 ನಾಮಪತ್ರ, ಉದಯ್ ಕುಮಾರ್ 1, ಐರಾ ನ್ಯಾಷನಲ್ ಪಾರ್ಟಿಯಿಂದ ಜಯಶಂಕರ್ 2, ಸಿ.ಪಿ. ದಿವಾಕರ್ 2, ಇಂಡಿಯನ್ ನ್ಯೂ ಕಾಂಗ್ರೆಸ್ ನಿಂದ ಗುರುಲಿಂಗಯ್ಯ 1, ಕುಮಾರಕ್ಷೇತ್ರ ಪ್ರೇಮ್‍ಕುಮಾರ್ 1, ಎಂಎಲ್‍ಎ ಶಶಿ ಕುಮಾರ್ 1, ಸಿ.ಎಲ್.ನಿಂಗೇಗೌಡ 1, ಸತೀಶ್ ಕುಮಾರ್ 1, ಎಚ್.ನಾರಾಯಣ್ 1, ಎಸ್.ಬಿ.ಸುರೇಶ್ 1, ನವೀನ್ ಕುಮಾರ್ 1, ಅರವಿಂದ್ ಪ್ರೇಮಾನಂದ್ 1, ಸಂತೋಷ್ ಎಚ್.ಪಿ. 1, ಬಿಎಸ್‍ಪಿ ಯಿಂದ ನಂಜುಂಡಸ್ವಾಮಿ 2, ಪಿ.ಸುಮಲತಾ 1, ಎಸ್.ಸಿ.ಪುಟ್ಟರಾಜು 1, ತುಳಸಪ್ಪ ದಾಸರ 1, ಬಿ.ಮಂಜುನಾಥ್ 1, ಎಚ್.ಕೆ. ಕೃಷ್ಣ 1, ಸುಮಲತಾ 1, ಜಿ.ಮಂಜುನಾಥ್ 1, ಶಂಭುಲಿಂಗೇಗೌಡ 1, ಎಂ.ಸುಮ ಲತಾ 1 ನಾಮಪತ್ರ ಸಲ್ಲಿಸಿದ್ದಾರೆ.

Translate »