ಹೈವೊಲ್ಟೇಜ್ ಕಣ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ
ಮಂಡ್ಯ

ಹೈವೊಲ್ಟೇಜ್ ಕಣ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ

April 18, 2019

ಸಿಎಂ ಪುತ್ರ ನಿಖಿಲ್- ಅಂಬರೀಶ್ ಪತ್ನಿ ಸುಮಲತಾ ಭವಿಷ್ಯ ನಿರ್ಧರಿಸಲಿರುವ ಮತದಾರ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ನಡೆಯಲಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿಯೂ ಮತ್ತು ಮಾಜಿ ಸಚಿವ, ನಟ ಅಂಬರೀಶ್ ಪತ್ನಿ ಸುಮ ಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ರುವುದು ಇಡೀ ದೇಶದ ಗಮನ ಸೆಳೆ ಯಲು ಕಾರಣವಾಗಿದೆ.

ಕಳೆದ 20 ದಿನಗಳಿಂದ ಜಿದ್ದಾಜಿದ್ದಿನ ಪ್ರಚಾರದ ಹೋರಾಟ ನಡೆಸಿದ ಮೈತ್ರಿ ಅಭ್ಯರ್ಥಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರೂ ಸೇರಿ ದಂತೆ ಕಣದಲ್ಲಿರುವ 22 ಮಂದಿಯ ಭವಿಷ್ಯವನ್ನು 17,12,012 ಮತದಾರರು ಗುರುವಾರ ಬರೆಯಲಿದ್ದಾರೆ.

ಒಟ್ಟು 22 ಅಭ್ಯರ್ಥಿಗಳ ಪೈಕಿ 18 ಮಂದಿ ಪುರುಷರು ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸೇರಿದಂತೆ ಇದೇ ಮೊದಲ ಬಾರಿಗೆ ನಾಲ್ಕು ಮಹಿಳಾ ಅಭ್ಯರ್ಥಿಗಳ ಹೆಸರು ಸುಮಲತಾ ಆಗಿರು ವುದು ವಿಶೇಷವಾಗಿದೆ.

ಸಿಎಂ-ಬಂಡಾಯ ನಾಯಕರಿಗೆ ಪ್ರತಿಷ್ಠೆ; ಸದ್ಯದ ಗ್ರೌಂಡ್ ರಿಪೋರ್ಟ್ ಪ್ರಕಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರೂ ಅದೂ ಮೇಲ್ಮಟ್ಟದ ನಾಯಕರಿಗಷ್ಟೇ ಸೀಮಿತ, ಸ್ಥಳೀಯ ಮಟ್ಟಕ್ಕೆ ಅದು ಅನ್ವಯವಲ್ಲ ಎಂಬ ಪರಿಸ್ಥಿತಿ ಮಂಡ್ಯದಲ್ಲಿ ಕಂಡು ಬಂದಿದೆ, ಕಾಂಗ್ರೆಸ್‍ನ ಕಳೆದ ಬಾರಿ ಸೋತ ಬಂಡಾಯ ಶಾಸಕರ್ಯಾರೂ ಸಹ ಮೈತ್ರಿ ಅಭ್ಯರ್ಥಿ ಪರವಾಗಿ ಕಡೆಗಳಿಗೆಯವರೆಗೂ ಕೆಲಸ ಮಾಡದೆ ಇರುವುದೂ ಕೂಡ ಈ ಬಾರಿಯ ಚುನಾವಣೆಯ ಮೇಲೆ ಪರಿ ಣಾಮ ಬೀರುವುದ ನಿಶ್ಚಿತ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸತಾಯಗತಾಯ ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲೇ ಬೇಕೆಂದು ಇನ್ನಿಲ್ಲದ ತಂತ್ರ ಎಣೆದಿರು ವುದು ಒಂದೆಡೆಯಾದರೆ ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಬಂಡಾಯ ನಾಯಕರಾದ ಎನ್.ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಪಿ.ಎಂ. ನರೇಂದ್ರಸ್ವಾಮಿ ಅವರ ನ್ನೊಳಗೊಂಡ 6 ಮಂದಿಯ ತಂಡಕ್ಕೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಮಂಡ್ಯದ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬದನ್ನು ಕಾದುನೋಡಬೇಕಿದೆ.
2.60 ಲಕ್ಷ ರೂ. ವಶ: ಅಕ್ರಮವಾಗಿ ಸಾಗಿಸುತ್ತಿದ್ದ 2,60,500 ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಗಮಂಗಲ ತಾಲೂಕಿನ ಬೆಂಗಳೂರು- ಮಂಗಳೂರು ಹೆದ್ದಾರಿಯ ಕದಬಹಳ್ಳಿ ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದ್ದು, ಚುನಾವಣಾ ಅಧಿಕಾರಿಗಳು ಆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗುರುವಾರ ಮತದಾನ ಇರುವುದರಿಂದ ಚುನಾವಣಾ ಅಧಿಕಾರಿಗಳು ಮಂಡ್ಯ ಜಿಲ್ಲೆ ಯಲ್ಲಿ ಹದ್ದಿನ ಕಣ್ಣನ್ನು ಇಟ್ಟಿದ್ದಾರೆ. ಮಂಡ್ಯ ದಲ್ಲಿ ಅಕ್ರಮ ಕಡಿವಾಣಕ್ಕೆ ಐಟಿ ಹಾಗೂ ಚುನಾವಣಾಧಿಕಾರಿಗಳು ಚಕ್ರವ್ಯೂಹ ರಚಿಸಿದ್ದಾರೆ. ಸುಮಾರು 50 ಕಡೆಗಳಲ್ಲಿ ಐಟಿ ತಂಡ ಸಿಸಿಟಿವಿ ಅಳವಡಿಸಿದ್ದು, ಮಂಗಳವಾರ ರಾತ್ರಿಯೇ ಐಟಿ ಅಧಿಕಾರಿ ಗಳ ತಂಡ ಮಂಡ್ಯಕ್ಕೆ ಶಿಫ್ಟ್ ಆಗಿದೆ.

ಒಟ್ಟು 15ಕ್ಕೂ ಹೆಚ್ಚು ಕೇಂದ್ರಗಳ ಮೇಲೆ ಐಟಿ ತಂಡ ಹದ್ದಿನ ಕಣ್ಣನ್ನು ಇಟ್ಟಿದೆ. ತೋಟದ ಮನೆ, ಸಿನಿಮಾ ಥಿಯೇಟರ್, ರೈಸ್ ಮಿಲ್, ಸಾ ಮಿಲ್, ಕಲ್ಯಾಣ ಮಂಟಪ ಗಳು, ಗೋಡೌನ್‍ಗಳು, ನಿರ್ಮಾಣ ಹಂತದ ಕಟ್ಟಡಗಳು, ಅಕ್ರಮ ಹಣ ಸಾಗಾಣಿಗೆ, ಹಂಚಿಕೆ ನಡೆಯುವ ಜಾಗಗಗಳ ಗುರುತಿಗೆ ಐಟಿ ಮಾಸ್ಟರ್ ಪ್ಲಾನ್ ಮಾಡಿದೆ. ಚುನಾ ವಣಾ ವೀಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಕ್ಕೆ ಶಿಫ್ಟ್ ಆಗಿದ್ದಾರೆ ಆದರೂ ಇಂದು ಇಂದು ಬೆಳಿಗ್ಗೆಯಿಂದಲೇ ಹಣ ಹಂಚಿಕೆ ನಡೆದಿರುವುದರಿಂದ ಈ ಐಟಿ ತಂಡ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಎದ್ದಿದೆ.

Translate »