ಕೆ.ಆರ್.ಪೇಟೆಯಲ್ಲಿ ಮನೆ ಮನೆ ಮತಯಾಚನೆ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮನೆ ಮನೆ ಮತಯಾಚನೆ

April 18, 2019

ಕೆ.ಆರ್.ಪೇಟೆ: ಮತ ಕೇಂದ್ರದಲ್ಲಿ ಎರಡು ಮತ ಯಂತ್ರಗಳಿದ್ದು ಆತುರ ಪಡದೆ ನಿಧಾನವಾಗಿ ಪರಿಶೀಲಿಸಿ ಮತದಾನ ಮಾಡಬೇಕು ಎಂದು ಪುರಸಭಾ ಮಾಜಿ ಸದಸ್ಯ ಕೆ.ಕೆ.ರಮೇಶ್ ಮನವಿ ಮಾಡಿದರು.

ಅವರು ಪಟ್ಟಣ ಅಗ್ರಹಾರ ಬಡಾವಣೆ, ಹೇಮಾವತಿ ಬಡಾವಣೆ ಸೇರಿಸದಂತೆ ವಿವಿಧ ಬಡಾವಣೆಗಳಲ್ಲಿ ಸಂಚಾರ ನಡೆಸಿ ಮನೆ ಮನೆ ಪ್ರಚಾರ ಮಾಡಿದರು. ಯಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ವಿನೂತನ ಮಾದರಿಯಲ್ಲಿ ಸುಮಲತಾ ಅಂಬರೀಶ್ ಪರವಾಗಿ ಮತಯಾಚನೆ ಮಾತನಾಡಿದರು.

ವಿಪಕ್ಷದವರು ಮೂವರು ಸುಮಲತಾಗಳನ್ನು ಕಣಕ್ಕೆ ಇಳಿಸಿರುವುದರಿಂದ ಕೆಲವರಿಗೆ ಮತದಾನ ಮಾಡಲು ತೊಂದರೆಯಾಗುತ್ತಿದೆ. ಆದುದರಿಂದ ನಾವುಗಳು ಮನೆ ಮನೆ ಬಾಗಿಲಿಗೆ ಹೋಗಿ ಮತಗಟ್ಟೆಯಲ್ಲಿ ಎರಡು ಮತ ಯಂತ್ರಗಳು ಇರುತ್ತವೆ ಎರಡನೆ ಯಂತ್ರದಲ್ಲಿ ಕ್ರಮಸಂಖ್ಯೆ ಇಪ್ಪತ್ತು ಇರುತ್ತದೆ ಅದರ ಪಕ್ಕ ಇರುವ ಬಟನ್ ಒತ್ತಿದರೆ ಸಾಕು ಸುಮಲತಾ ಅಂಬರೀಶ್ ಅವರಿಗೆ ಮತ ನೀಡಬಹುದು ಎಂದು ತಿಳಿಹೇಳುತ್ತಿz್ದÉೀವೆ. ಸಾರ್ವಜನಿಕರಿಂದಲೂ ನಮಗೆ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ನಾವು ವಿನೂತನ ರೀತಿಯಲ್ಲಿ ಸುಮಲತ ಪರವಾಗಿ ಮತಯಾಚನೆ ಮಾಡುವ ಜೊತೆಗೆ ಇವಿಎಂ ಮತ ಯಂತ್ರಗಳ ಬಳಕೆಯ ಬಗ್ಗೆಯೂ ಸಾರ್ವಜನಿಕರಿಕೆ ಮಾಹಿತಿ ನೀಡುತ್ತಿz್ದÉೀವೆ ಎಂದು ತಿಳಿಸಿದರು.

ಈ ಸಂದ`ರ್Àದಲ್ಲಿ ಪುರಸಭೆಯ ಮಾಜಿ ಸದಸ್ಯರಾದ ಟಾಕೀಸ್ ಚಂದ್ರಣ್ಣ, ಮಾಜಿ ಸದಸ್ಯ ರಾಜಾನಾಯಕ್, ಸುರೇಶ್, ಆನಂದ್, ಸಿದ್ದು ಹಾಜರಿದ್ದು ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರಿಗೆ ಮತ ಯಂತ್ರದ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

Translate »