ಶ್ರೀರಂಗಪಟ್ಟಣ ಜೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್
ಮಂಡ್ಯ

ಶ್ರೀರಂಗಪಟ್ಟಣ ಜೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್

April 18, 2019

ಶ್ರೀರಂಗಪಟ್ಟಣ: 2019ರ ಲೊಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಇಂದು ಎಲ್ಲಾ ಮತಯಂತ್ರಗಳು ಹಾಗೂ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆ ಗಳಿಗೆ ಸರದಿ ಸಾಲಿನಲ್ಲಿ ಮತಗಟ್ಟೆಗಳಿಗೆ ಮತ ಪೆಟ್ಟಿಗೆ ಸಮೇತ ನಿಯೊಜಿತ ಮತ ಕೇಂದ್ರಗಳಿಗೆ ಚುನಾವಣಾಧಿಕಾರಿಗಳನ್ನು ಕಳುಹಿಸಲಾಯಿತು, ಎರಡು ಲಕ್ಷದ ಹನ್ನೊಂದು ಸಾವಿರ ಮತದಾರ ರಿರುವ ಶ್ರೀರಂಗಪಟ್ಟಣ ವಿಧಾನಸಬಾ ಕ್ಷೇತ್ರದಲ್ಲಿ ಸುಮಾರು 249 ಮತಗಟ್ಟೆಗಳಿದ್ದು, ಅದರಲ್ಲಿ ಐವತ್ತು ಸೂಕ್ಷ್ಮ ಹಾಗೂ ಆತೀ ಸೂಕ್ಷ ಮತಗಟ್ಟೆಗಳನ್ನು ಗುರುತಿಸಲಾಗಿದೆ, ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಾಜಿ ಹಾಗೂ ಹಾಲಿ ಶಾಸಕರಿರುವ ಕಾರಣ ಅರಕೆರೆ, ಕೆಆರ್‍ಎಸ್, ಬೆಳಗೊಳ ಹಾಗೂ ಪಾಲಹಳ್ಳಿ ಗ್ರಾಮಗಳಲ್ಲಿನ ಹತ್ತು ಕಡೆ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರ ಎಂದು ಗುರುತಿಸಲಾಗಿದೆ.

ಮಹಿಳಾ ಮತದಾರರು ಮುಜುಗರವಿಲ್ಲದೆ ಮುಕ್ತ ಮತದಾನ ಮಾಡಲು ಮಹಿಳೆಯರನ್ನು ಮತದಾನದತ್ತ ಸೆಳೆಯಲು ತಾಲೂಕಿನ ಪಿ ಹೊಸಹಳ್ಳಿ, ಶ್ರೀರಂಗಪಟ್ಟಣ ಪುರಸಭೆ ಕಚೇರಿ ಹಾಗೂ ಗಂಜಾಂನಲ್ಲಿ ಮೂರು ಕಡೆ ಪಿಂಕ್ ಬೂತ್‍ಗಳ ಸ್ಥಾಪನೆ ಮಾಡಲಾಗಿದೆ ಹಾಗೂ ಪಟ್ಟಣದ ಲೋಕೋಪಯೋಗಿ ಕಚೇರಿಯಲ್ಲಿ ಅಂಗವಿಕಲರಿಗೆ ವಿಶೇಷ ಬೂತ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಬ್ರೈನ್ ಲಿಪಿಯನ್ನು ಅಂಧ ಮತದಾರರಿಗೆ ಅನುಕೂಲವಾಗುವಂತೆ ಅದರಲ್ಲಿ ಎಲ್ಲಾ 22 ಅಭ್ಯರ್ಥಿಗಳ ಮಾಹಿತಿ, ನೋಟಾ ಕೂಡ ಆ ಬ್ರೈನ್ ಲಿಪಿನಲ್ಲಿ ಮಾಹಿತಿ ಸಿಗಲಿದೆ, ಭದ್ರತೆ ಹಾಗೂ ಯಾವುದೇ ಗೊಂದಲವಿಲ್ಲದೆ ಸುಲಲಿತ ವಾಗಿ ಮತದಾನ ನಡೆಸುವ ಉದ್ದೇಶದಿಂದ ಸಂಪೂರ್ಣ ಚುನಾವಣೆಯ ವಿಡಿಯೋ ಚಿತ್ರೀಕರಣ ಮಾಡಿಸಲಾಗು ತ್ತಿದ್ದೆ ಅದರಲ್ಲೂ ಈ ಬಾರಿ ವೆಬ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಈ ವೀಡಿಯೋ ಚಿತ್ರೀಕರಣವನ್ನು ನಿಯಂತ್ರಿಸಲು ಒಬ್ಬ ನೋಡಲ್ ಅಧಿಕಾರಿಯನ್ನೂ ಕೂಡ ನೇಮಿಸಲಾಗಿದೆ. ನಾಳೆ ಬಹುತೇಕ ಶಾಂತಿಯುತ ಮತದಾನ ನಡೆಯಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ಸಮರ್ಪಕ ವಾದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಯಾವುದೇ ಲೋಪ ಉಂಟಾಗದಂತೆ ಎಚ್ಚರವಹಿಸಲಿದೆ. ಈ ಎಲ್ಲಾ ಚುನಾವಣಾ ತಯಾರಿಗಳನ್ನು ಇಂದು ಜಿಲ್ಲಾಧಿಕಾರಿ ಸಿ.ಕೆ. ಜಾಫರ್ ಪಟ್ಟಣದ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಚುನಾವಣಾಧಿಕಾರಿ ಕೃಷ್ಣಂರಾಜು ‘ಮೈಸೂರು ಮಿತ್ರ’ಗೆ ತಿಳಿಸಿದ್ದಾರೆ.

Translate »