ಲೋಕಸಭಾ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಜ್ಜು
ಮಂಡ್ಯ

ಲೋಕಸಭಾ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಜ್ಜು

April 18, 2019
  •  17,12,012 ಮತದಾರರಿಂದ ಮತದಾನ
  • 8 ಕ್ಷೇತ್ರಗಳಲ್ಲಿ ಒಟ್ಟು 2046 ಮತಗಟ್ಟೆಗಳನ್ನು ಸ್ಥಾಪನೆ.
  • ಚುನಾವಣೆಯಲ್ಲಿ ಕಣದಲ್ಲಿದ್ದಾರೆ ಒಟ್ಟು 22 ಅಭ್ಯರ್ಥಿಗಳು
  • ಚುನಾವಣಾ ಕಾರ್ಯಕ್ಕೆ 9904 ಸಿಬ್ಬಂದಿಗಳ ನೇಮಕ

ಮಂಡ್ಯ: ಗುರುವಾರ (ಏ.18 ರಂದು) ನಡೆಯುವ ಮಂಡ್ಯ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ.
ಗುರುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿ ಕಾರಿಯೂ ಆದ ಚುನಾವಣಾಧಿಕಾರಿ ಪಿ.ಸಿ.ಜಾಫರ್ ಮನವಿ ಮಾಡಿದ್ದಾರೆ.

ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣೆ ಗಾಗಿ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಕೈ ಗೊಂಡಿದ್ದು ನಾಳಿನ ಚುನಾವಣಾ ಕಾರ್ಯ ಗಳಿಗೆ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿ ವರ್ಗ ಸಜ್ಜಾಗಿದ್ದರು.ಮಂಡ್ಯ ಲೋಕಸಭಾ ವ್ಯಾಪ್ತಿಯ ಎಂಟು ಕ್ಷೇತ್ರದ ತಾಲೂಕು ಕೇಂದ್ರಗಳಿಗೆ ತೆರಳಲು ಮತಗಟ್ಟೆ ಸಿಬ್ಬಂದಿ ಕಾರ್ಯ ನಿರತರಾಗಿದ್ದರು.ಜಿಲ್ಲಾ ಕೇಂದ್ರ ಮಂಡ್ಯದ ಬಾಲಕಿಯರ ಮಹಾ ವಿದ್ಯಾ ಲಯದಲ್ಲಿ ಅಧಿಕಾರಿಗಳ ತಂಡ ಸಿದ್ದತೆ ಮಾಡಿಕೊಂಡು ಇಂದು ಸಂಜೆ ಮತಯಂತ್ರ ಗಳನ್ನು ಹೊತ್ತು ಚುನಾವಣಾ ಕಾರ್ಯ ನಿಯೋಜಿತ ಸಿಬ್ಬಂದಿ ಮತಗಟ್ಟೆಗೆ ತೆರಳುತ್ತಿದ್ದುದು ಕಂಡುಬಂತು.

2046 ಮತಗಟ್ಟೆಗಳು: ಮಂಡ್ಯ ಲೋಕ ಸಭಾ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಒಟ್ಟು 2046 ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದೆ. ಇದರಲ್ಲಿ ನಗರ ಪ್ರದೇಶದಲ್ಲಿ 295 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1751 ಮತಗಟ್ಟೆಗಳಿವೆ.

17,12,012 ಮತದಾರರು: 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 17,12,012 ಮತ ದಾರರಿದ್ದಾರೆ. 8,54,758 ಪುರುಷರು ಹಾಗೂ 8,56,285 ಮಹಿಳಾ ಮತದಾರರಿ ದ್ದಾರೆ. ಮಳವಳ್ಳಿ 2,42,223 ಮತದಾರರು, ಮದ್ದೂರು 2,08,226, ಮೇಲುಕೋಟೆ 1,97,048, ಮಂಡ್ಯ 2,27,784, ಶ್ರೀರಂಗಪಟ್ಟಣ 2,11,691, ನಾಗಮಂಗಲ 2,10,144, ಕೃಷ್ಣರಾಜಪೇಟೆ 2,08,473 ಹಾಗೂ ಕೃಷ್ಣರಾಜಸಾಗರ 2,06,423 ಮತದಾರರಿದ್ದಾರೆ. ಇದರಲ್ಲಿ 147 ಇತರೆ ಮತದಾರರು ಹಾಗೂ 822 ಸೇವಾ ಮತದಾರರು ಒಳಗೊಂಡಿದ್ದಾರೆ.
ಒಂದೇ ಹೆಸರಿನ ನಾಲ್ಕು ಮಂದಿ ಮಹಿಳಾ ಅಭ್ಯರ್ಥಿಗಳು: ಮಂಡ್ಯ ಲೋಕಸಭಾ ಚುನಾ ವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 18 ಮಂದಿ ಪುರುಷರು ಹಾಗೂ 4 ಮಂದಿ ಮಹಿಳಾ ಅಭ್ಯರ್ಥಿಗಳಿ ದ್ದಾರೆ. ಇದೇ ಮೊದಲ ಬಾರಿಗೆ ನಾಲ್ಕು ಮಹಿಳಾ ಅಭ್ಯರ್ಥಿಗಳ ಹೆಸರೂ ಸುಮ ಲತಾ ಎಂಬುದು ವಿಶೇಷವಾಗಿದೆ.

ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್: ಚುನಾವಣೆಯ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್‍ಗೆ ಸ್ಥಳ ನಿಗದಿಪಡಿಸಲಾಗಿದೆ. ಮಳವಳ್ಳಿಯ ಶಾಂತಿ ಕಾಲೇಜು, ಮದ್ದೂರಿನ ಎಚ್.ಕೆ.ವೀರಣ್ಣಗೌಡ ಕಾಲೇಜು, ಮೇಲು ಕೋಟೆಯ ಪಿಎಸ್‍ಎಸ್‍ಕೆ ಪ್ರೌಢಶಾಲೆ, ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೃಷ್ಣರಾಜಪೇಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೃಷ್ಣ ರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ನಡೆಯಲಿದೆ.
324 ಸಾರಿಗೆ ಬಸ್‍ಗಳು: ಚುನಾವಣಾ ಕಾರ್ಯಕ್ಕಾಗಿ 324 ಕೆಎಸ್‍ಆರ್‍ಟಿಸಿ ಬಸ್ ಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 61 ಮ್ಯಾಕ್ಸಿ, ಕ್ಯಾಬ್, ಮಿನಿಬಸ್ ಗಳು ಹಾಗೂ 55 ಜೀಪುಗಳು ಕಾರ್ಯ ನಿರ್ವಹಿಸಲಿವೆ. ಮತಗಟ್ಟೆ ಸಿಬ್ಬಂದಿಗಳ ತುರ್ತು ಚಿಕಿತ್ಸೆಗಾಗಿ ಅಗತ್ಯ ಸಾಮಾಗ್ರಿ ಹಾಗೂ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ.

30 ಸಖಿ ಮತಗಟ್ಟೆಗಳು: ಮಹಿಳಾ ಮತದಾರರನ್ನು ಸೆಳೆಯಲು ಆಯ್ದ ಮತಗಟ್ಟೆಗಳಲ್ಲಿ ಪಿಂಕ್ ಮತಗಟ್ಟೆಗಳನ್ನಾಗಿ ಮಾಡಲಾಗಿದೆ. ಮಳವಳ್ಳಿಯಲ್ಲಿ 3, ಮದ್ದೂರಿ ನಲ್ಲಿ 3, ಮೇಲುಕೋಟೆ 2, ಮಂಡ್ಯ 10, ಶ್ರೀರಂಗಪಟ್ಟಣ 3, ನಾಗಮಂಗಲ 3, ಕೃಷ್ಣರಾಜಪೇಟೆ 4, ಕೃಷ್ಣರಾಜಸಾಗರ 2 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾ ವಣೆಯಲ್ಲಿ ವಿಶೇಷ ಚೇತನ ಸಿಬ್ಬಂದಿ ಗಳಿಗಾಗಿ 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಳವಳ್ಳಿ 2, ಮದ್ದೂರು 2, ಮೇಲು ಕೋಟೆ 2, ಮಂಡ್ಯ 4, ಶ್ರೀರಂಗಪಟ್ಟಣ 1, ನಾಗಮಂಗಲ 2, ಕೃಷ್ಣರಾಜಪೇಟೆ 2, ಕೃಷ್ಣರಾಜಸಾಗರ 1 ಮತಗಟ್ಟೆಗಳಲ್ಲಿ ವಿಶೇಷ ಚೇತನರು ಕಾರ್ಯನಿರ್ವಹಿಸಲಿದ್ದಾರೆ. ಇದರ ಜೊತೆಗೆ 20 ಮಾದರಿ ಮತಗಟ್ಟೆ ಗಳನ್ನೂ ಸ್ಥಾಪಿಸಲಾಗಿದೆ.

576 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಗಳು: ಜಿಲ್ಲೆಯಲ್ಲಿರುವ 2046 ಮತಗಳ ಪೈಕಿ 576 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸ ಲಾಗಿದೆ. ಇದರಲ್ಲಿ 444 ಸೂಕ್ಷ್ಮ ಹಾಗೂ 132 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರು ತಿಸಲಾಗಿದ್ದು, ಹೆಚ್ಚಿನ ಭದ್ರತೆ ಕೈಗೊಳ್ಳ ಲಾಗಿದೆ. 351 ಮತಗಟ್ಟೆಗಳಲ್ಲಿ ಕೇಂದ್ರದ ಅಧಿಕಾರಿಗಳು ಮೈಕ್ರೋ ಅಬ್ಸರ್‍ವರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. 110 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, ಸಿಸಿಟಿವಿ ಅಳವಡಿಸಲಾಗುವುದು. 36 ಮತಗಟ್ಟೆ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಕೇಂದ್ರ ಅರೆಸೇನಾ ಪಡೆ ನಿಯೋಜಿಸಲಾಗಿದೆ.

ವಿಶೇಷ ಚೇತನ ಮತದಾರರಿಗೆ ಸೌಲಭ್ಯ: ಜಿಲ್ಲೆಯಲ್ಲಿ ಒಟ್ಟು 19,789 ವಿಶೇಷಚೇತನ ಮತದಾರರಿದ್ದು, ಅವರಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಮತಕೇಂದ್ರದ ಬಳಿ ಸ್ವಯಂ ಸೇವಕರು ಸಹಾಯ ಮಾಡಲಿದ್ದಾರೆ. ಅಂಧ ಮತದಾರರಿಗೆ ಬ್ರೈಲ್‍ಲಿಪಿಯ ಬ್ಯಾಲೆಟ್ ಪೇಪರ್‍ಗಳನ್ನು ಒದಗಿಸಲಾಗುವುದು. ದೃಷ್ಟಿದೋಷವುಳ್ಳ ಹಾಗೂ ಹಿರಿಯ ವೃದ್ಧರಿಗೆ ಪ್ರತಿ ಮತಗಟ್ಟೆಗಳಲ್ಲಿ ಬೂದು ಗನ್ನಡಿ ಒದಗಿಸಲಾಗುವುದು. ವಿಶೇಷ ಚೇತನರನ್ನು ಮತಗಟ್ಟೆಗೆ ಕರೆತರಲು ಸುಮಾರು 465 ವಾಹನಗಳನ್ನು ನಿಯೋಜಿಸಲಾಗಿದೆ.

Translate »