`ಕೈ’ ನಾಯಕರ ಮೊರೆ ಹೋದ ತಾಯಿ-ಮಗ
ಮಂಡ್ಯ, ಮೈಸೂರು

`ಕೈ’ ನಾಯಕರ ಮೊರೆ ಹೋದ ತಾಯಿ-ಮಗ

March 17, 2019

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ರಾಜಕೀಯ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವಿನ ಸ್ಪರ್ಧೆ ಜಿಲ್ಲೆಯಲ್ಲಿ ಹೈ ವೊಲ್ಟೇಜ್ ಸೃಷ್ಟಿ ಮಾಡಿದೆ. ಜಿಲ್ಲೆಯಲ್ಲಿ ಇಬ್ಬರೂ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಪುತ್ರ ನಿಖಿಲ್ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಘೋಷಣೆಯಾಗುತ್ತಿದ್ದಂತೆ ಸಖತ್ ಆಕ್ಟೀವ್ ಆಗಿದ್ದಾರೆ. ಇದರ ಭಾಗವಾಗಿ ಇಂದು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವ ರೊಟ್ಟಿಗೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸು ವಂತೆ ಮನವಿ ಮಾಡಿದರು.

ಅಮ್ಮನೇ ಹೊಣೆ: ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತನ್ನ ಚುನಾವಣಾ ಹೊಣೆಯನ್ನು ಅಮ್ಮನ ಹೆಗಲಿಗೆ ವಹಿಸಿದ್ದಾರೆ. ಅಂತೆಯೇ ಪುತ್ರನ ಬೆನ್ನಿಗೆ ನಿಂತಿರುವ ಅಮ್ಮ ಅನಿತಾ ಕುಮಾರ ಸ್ವಾಮಿ, ಇಂದು ಅತೃಪ್ತರ ಮನವೊಲಿಕೆ, ದೋಸ್ತಿ ಪಕ್ಷದ ನಾಯಕರ ಜತೆ ಸಂಧಾನದ ಪ್ರಯತ್ನ ಮಾಡಿದರು. ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಡಾ.ಜಿ. ಮಾದೇಗೌಡ ಅವರ ಬಂದೀಗೌಡ ಬಡಾವಣೆಯ ನಿವಾಸಕ್ಕೆ ಅನಿತಾ ಕುಮಾರ ಸ್ವಾಮಿ ಮತ್ತು ನಿಖಿಲ್ ಭೇಟಿ ನೀಡಿ ಬೆಂಬ ಲಿಸುವಂತೆ ಮನವಿ ಮಾಡಿದರು. ಈ ವೇಳೆ ನಿಖಿಲ್ ಅವರು ಜಿ.ಮಾದೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಆತ್ಮಾನಂದ ಮನೆಗೆ ಭೇಟಿ: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎಸ್.ಆತ್ಮಾನಂದ ಅವರ ಮನೆಗೂ ನಿಖಿಲ್ ಮತ್ತು ಅನಿತಾ ಕುಮಾರಸ್ವಾಮಿ ಭೇಟಿ ನೀಡಿ ಆತ್ಮಾನಂದರ ಬೆಂಬಲ ಕೋರಿ, ಉಭಯ ಕುಶಲೋಪರಿ ವಿಚಾರಿಸಿದರು. ಅನಿತಾ ಮತ್ತು ನಿಖಿಲ್‍ಗೆ ಸಂಸದ ಶಿವ ರಾಮೇಗೌಡ, ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ ಸಾಥ್ ನೀಡಿದರು.

ಮಾದೇಗೌಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ ಕುಮಾರ ಸ್ವಾಮಿ, ನಿಖಿಲ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ, ಹೀಗಾಗಿ ಕಾಂಗ್ರೆಸ್ ಹಿರಿಯ ರನ್ನು ಭೇಟಿ ಮಾಡಿದ್ದೇವೆ. ಎಲ್ಲಾ ಕಡೆ ರೆಸ್ಪಾನ್ಸ್ ಉತ್ತಮವಾಗಿದೆ. ಮೈತ್ರಿ ಅಭ್ಯರ್ಥಿ ಆಗಿರೋದ್ರಿಂದ ಕಾಂಗ್ರೆಸ್ಸಿಗರ ಬೆಂಬಲ ಕೂಡ ಇದೆ ಎಂದರು. ನಿಖಿಲ್ ಮಾತನಾಡಿ, ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನು ಘೋಷಣೆ ಮಾಡಿ ದ್ದಾರೆ. ಹೀಗಾಗಿ ಕಾಂಗ್ರೆಸ್‍ನ ಹಿರಿಯರನ್ನು ಭೇಟಿ ಮಾಡಿದ್ದೇನೆ. ತಾತನ ಸ್ಥಾನದಲ್ಲಿ ರೋದರಿಂದ ಅವರ ಆಶೀರ್ವಾದ ಪಡೆದಿ ದ್ದೇನೆ. ಸಾಕಷ್ಟು ಅವರ ರಾಜಕೀಯದ ಅನುಭವ ಹಂಚಿಕೊಂಡಿ ದ್ದಾರೆ. ಮುಂದೆಯೂ ಅವರ ಜೊತೆ ಬಂದು ಚರ್ಚೆ ಮಾಡುತ್ತೇನೆ ಎಂದರು.

ಗುಡ್ ಲಕ್ ಹೇಳಿದ ಗೌಡರು: ಬೆಂಬಲ ಕೋರಿ, ಆಶೀರ್ವಾದ ಪಡೆದ ನಿಖಿಲ್‍ಗೆ ಮಾದೇಗೌಡರು ಗುಡ್ ಲಕ್ ಹೇಳಿ ನಿಖಿಲ್ ಜೊತೆ ತಮ್ಮ ಸುದೀರ್ಘ ರಾಜಕೀಯ ಅನುಭವ ಹಂಚಿಕೊಂಡರು. ನಿಖಿಲ್ ಭೇಟಿ ಬಳಿಕ ಮಾತನಾಡಿದ ಡಾ.ಜಿ.ಮಾದೇಗೌಡರು, ನಾನು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಬಂದವನು. ಇವತ್ತು ಒಳ್ಳೆಯ ರೀತಿ ರಾಜ ಕಾರಣ ಮಾಡ್ಬೇಕು. ಹಿಂದೆ ಸುಮಲತಾ ಕೂಡ ಬಂದಿದ್ದರು. ಸುಮಲತಾಗೆ ನನ್ನ ಬೆಂಬಲ ಇಲ್ಲ ಅಂದಿದ್ದೆ. ಇವರು ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ನಾನು ಬೆಂಬಲಿಸ್ತೀನಿ. ಯೋಚನೆ ಮಾಡ್ಬೇಡ, ಧೈರ್ಯವಾಗಿ ಹೋಗು ಎಂದಿದ್ದೇನೆ ಎಂದರು.

Translate »