ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರಿಗೆ ಹೈದರಾಬಾದ್‍ನಲ್ಲಿಂದು ಲಘು ಹೃದಯಾಘಾತವಾಗಿದ್ದು, ಅಲ್ಲಿನ ಓಜೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇದೀಗ ಅವರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಶುಕ್ರವಾರ ತಮ್ಮ ಸಮುದಾಯ ದವರ ಸಮಾವೇಶದಲ್ಲಿ ಭಾಗವಹಿ ಸಲು ವಿಶ್ವನಾಥ್ ಹೈದರಾಬಾದ್‍ಗೆ ತೆರಳಿದ್ದರು. ಈ ವೇಳೆ ಅವರಿಗೆ ಲಘು ಹೃದಯಾಘಾತವಾಗಿದೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜು ನಾಥ್ ಅವರು ಓಜೋನ್ ಆಸ್ಪತ್ರೆಯ ವೈದ್ಯರೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದು, ಚಿಕಿತ್ಸೆಗೆ ಸಹಕರಿಸಿದರು.