ದ್ವಿತೀಯ ಪಿಯುಸಿ ಜೀವಶಾಸ್ತ್ರ ಪತ್ರಿಕೆ ಗೊಂದಲ: ಸಮಿತಿ ರಚನೆ
ಮೈಸೂರು

ದ್ವಿತೀಯ ಪಿಯುಸಿ ಜೀವಶಾಸ್ತ್ರ ಪತ್ರಿಕೆ ಗೊಂದಲ: ಸಮಿತಿ ರಚನೆ

March 17, 2019

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಜೀವ ಶಾಸ್ತ್ರ ವಿಷಯಕ್ಕೆ ಸಂಬಂಧಪಡದ ಮತ್ತು ಗೊಂದಲ ಮೂಡಿಸುವ ಪ್ರಶ್ನೆ ಗಳ ಬಗ್ಗೆ ವಿದ್ಯಾರ್ಥಿಗಳು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಅರಿಯಲು ಪದವಿ ಪೂರ್ವ ಶಿಕ್ಷಣ ಮಂಡಳಿ ಮೂವರು ಸದಸ್ಯರ ಸಮಿತಿ ರಚಿಸಿ, ವರದಿ ನೀಡುವಂತೆ ತಜ್ಞರಿಗೆ ಸೂಚಿಸಿದೆ.

ಗುರುವಾರ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆದಿತ್ತು, ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂದು ವಿದ್ಯಾರ್ಥಿ ಗಳು ಸಹಾಯವಾಣಿ ಮೂಲಕ ಪಿಯುಸಿ ಮಂಡಳಿಗೆ ದೂರು ನೀಡಿದ್ದರು. ಪ್ರಶ್ನೆ ಗಳು ಪಠ್ಯದ ಒಳಗೆ ನೀಡಲಾಗಿದೆಯೇ ಅಥವಾ ಪಠ್ಯ ಬಿಟ್ಟು ನೀಡಲಾಗಿದೆಯೇ ಎಂಬ ಬಗ್ಗೆ ಸಮಿತಿ ಪರಿಶೀಲಿಸಲಿದೆ. ಸಮಿತಿ ವರದಿ ಬಳಿಕ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪಿಗೆ ಗ್ರೇಸ್ ಮಾಕ್ರ್ಸ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಠ್ಯದ ಒಳಗೆ ಪ್ರಶ್ನೆಗಳು ಕೇಳಿದ್ದರೆ ಗ್ರೇಸ್ ಮಾಕ್ರ್ಸ್ ಅವಶ್ಯಕತೆ ಇರುವುದಿಲ್ಲ, ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ವರದಿ ನಂತರವೇ ಎಂದು ಪಿಯುಸಿ ಮಂಡಳಿ ನಿರ್ದೇಶಕ ಜಾಫರ್ ಸ್ಪಷ್ಟಪಡಿಸಿದ್ದಾರೆ.

Translate »