ನವದೆಹಲಿ: ರಾಜ ಕೀಯ ಪಕ್ಷಗಳ ಚುನಾವಣಾ `ಪ್ರಣಾ ಳಿಕೆ’ ಮೇಲೆಯೂ ಕೇಂದ್ರ ಚುನಾ ವಣಾ ಆಯೋಗ ಈಗ ವಾರೆನೋಟ ಬೀರಿದೆ. ಮತದಾನಕ್ಕೆ 48 ಗಂಟೆಗಳ ಮುನ್ನ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವಂತಿಲ್ಲ ಎಂಬ ನಿರ್ಬಂಧ ವಿಧಿಸಿದೆ. ಈ ಸಂಬಂಧ ಶನಿವಾರ ಸಂಜೆ ಸುತ್ತೋಲೆ ಹೊರಡಿಸಿರುವ ಚುನಾ ವಣಾ ಆಯೋಗ, ಪ್ರಣಾಳಿಕೆಯೂ `ಚುನಾವಣಾ ನೀತಿ ಸಂಹಿತೆ’ ವ್ಯಾಪ್ತಿಗೇ ಒಳಪಡುತ್ತದೆ. ಹಾಗಾಗಿ, ಮತದಾನಕ್ಕೆ ಮುಂಚಿನ 48 ಗಂಟೆಗಳ ಅವಧಿಯು ಪ್ರಜಾಪ್ರತಿನಿಧಿ ಕಾಯ್ದೆ-1951ರ ಕಲಂ 126ರ ಪ್ರಕಾರ, `ನಿಶ್ಶಬ್ದದ ಅವಧಿ’. ಈ ಅವಧಿಯಲ್ಲಿ ರಾಜಕೀಯ ಪಕ್ಷ ಗಳು ಬಹಿರಂಗ ಪ್ರಚಾರ ಮಾಡು ವಂತಿಲ್ಲ.
ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಅದೇ ರೀತಿಯಲ್ಲಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. `ಪ್ರಣಾಳಿಕೆ’ ಎಂಬುದು ರಾಜಕೀಯ ಪಕ್ಷಗಳು ಮತದಾರರ ಮೇಲೆ ಪ್ರಭಾವ ಬೀರುವ ವಿಚಾರವೇ ಆಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 126 ಈ ಅಂಶವನ್ನು ಬಲವಾಗಿ ವಿರೋಧಿ ಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅದರ ಪ್ರಕಾರವೇ ಈ ಹೊಸ ಆದೇಶವನ್ನು ಹೊರಡಿಸ ಲಾಗಿದೆ. ಈ ಮೊದಲು ಪ್ರಣಾಳಿಕೆ ಪ್ರಕಟಣೆಗೆ ಇಂಥ ಸಮಯದ ನಿಬಂಧನೆ ಇರಲಿಲ್ಲ.