ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆ, ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು
ಮೈಸೂರು

ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆ, ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು

March 17, 2019

ಮೈಸೂರು: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗ ಸಿದ್ಧತೆ ನಡೆಸುತ್ತಿದ್ದರೆ, ಅತ್ತ ರಾಜ ಕೀಯ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ-ಗೆಲುವಿಗೆ ಸಂಬಂಧಿಸಿದಂತೆ ಹಲವು ಲೆಕ್ಕಾಚಾರಗಳು ಗರಿಗೆದರಿವೆ. ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆ ಜೋರಾಗಿದೆ.

ಚುನಾವಣೆ ವಿವಿಧ ಹಂತಗಳ ಕರ್ತ ವ್ಯದ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ತರಬೇತಿ ಮೂಲಕ ಸುಲಲಿತವಾಗಿ ಚುನಾವಣೆ ನಡೆಸಲು ಸಜ್ಜುಗೊಳಿಸಲಾಗು ತ್ತಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದ್ದರೆ, ಯಾವುದೇ ರೀತಿ ಪ್ರಚೋದನೆಗೆ ಒಳಗಾಗದೆ ಮತದಾನ ಮಾಡಲು ಅನುವಾಗುವಂತೆ ಸಾರ್ವಜ ನಿಕ ಸ್ಥಳದಲ್ಲಿರುವ ರಾಜಕಾರಣಿಗಳ ಜಾಹೀರಾತುಗಳನ್ನು ಮುಚ್ಚಲಾಗುತ್ತಿದೆ.

ರಾಜಕಾರಣಿಗಳ ಚಿತ್ರಕ್ಕೆ ಪರದೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಜಾಹೀರಾತು ಫಲಕ ಗಳನ್ನು ಮುಚ್ಚಿ ಅದೇ ಸ್ಥಳದಲ್ಲಿ ಮತದಾ ನದ ಅರಿವು ಮೂಡಿಸುವ ಜಾಹೀರಾತು ಅಳವಡಿಸಲಾಗುತ್ತಿದೆ. ಜೊತೆಗೆ ಮೈಸೂರು ನಗರದ ಎಲ್ಲಾ ವಾರ್ಡ್‍ಗಳ ಮಾರ್ಗ ಸೂಚಿ ಫಲಕಗಳಲ್ಲಿರುವ ಸಂಸದರು, ಶಾಸಕರು ಹಾಗೂ ವಾರ್ಡ್ ಪಾಲಿಕೆ ಸದಸ್ಯರ ಹೆಸರುಗಳನ್ನು ಬಣ್ಣ ಹಾಗೂ ಲೇಬಲ್ ಮೂಲಕ ಮರೆ ಮಾಡಲಾಗಿದೆ.

ನಗರದಲ್ಲಿರುವ ಜನ ಔಷಧ ಕೇಂದ್ರಗಳ ದ್ವಾರದಲ್ಲಿರುವ ಫಲಕಕ್ಕೂ ಇದರ ಬಿಸಿ ತಟ್ಟಿದ್ದು, ಫಲಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಮರೆ ಮಾಡಲಾಗಿದೆ.

ದೇವರಾಜ ಠಾಣೆ: ಶನಿವಾರ ಚುನಾ ವಣೆಗೆ ಸಂಬಂಧಿಸಿದ ಅನೇಕ ಚಟುವ ಟಿಕೆಗಳಿಗೆ ಮೈಸೂರು ನಗರ ಸಾಕ್ಷಿಯಾ ಯಿತು. ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಚುನಾವಣೆ ಹಿನ್ನೆಲೆ ಯಲ್ಲಿ ನಾಗರಿಕರು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ದೇವರಾಜ ಪೊಲೀಸ್ ಠಾಣೆ ವತಿಯಿಂದ ಅರಿವು ಮೂಡಿಸಲಾಯಿತು. ಠಾಣಾ ವ್ಯಾಪ್ತಿಯ ಮುಖಂಡರು ಹಾಗೂ ನಾಗರಿಕರಿಗೆ ಆಹ್ವಾನ ನೀಡಿ, ಚುನಾವಣೆ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಸಹಕಾರ ನೀಡುವಂತೆ ಮನವಿ ಮಾಡಲಾಯಿತು. ಠಾಣೆಯ ಪಿಐ ಜಿ.ಟಿ.ಶ್ರೀನಿವಾಸ್, ಪಿಎಸ್‍ಐ ಎಸ್. ರಾಜು ನೇತೃತ್ವದಲ್ಲಿ ಅರಿವು ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಮುಖಂಡ ಕೃಷ್ಣ, ಪಾಲಿಕೆ ಸದಸ್ಯ ನಾಗರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಬಿಎಲ್‍ಓಗಳಿಗೆ ತರಬೇತಿ: ಸಿದ್ಧಾರ್ಥ ನಗರದ ಜಿಲ್ಲಾ ಗುರುಭವನದಲ್ಲಿ ಮೈಸೂರು ಉತ್ತರ ವಲಯ ಬ್ಲಾಕ್ ವ್ಯಾಪ್ತಿಯ ನರಸಿಂಹರಾಜ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‍ಓ) ಚುನಾವಣೆ ಕರ್ತವ್ಯ ಸಂಬಂಧ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಮತದಾನದ ಬಗ್ಗೆ ಅರಿವು: ಸಾರ್ವಜ ನಿಕರು ಕಡ್ಡಾಯ ಮತದಾನ ಮಾಡಲು ನಗರದ ಹಲವು ಕಡೆಗಳಲ್ಲಿ ಜಿಲ್ಲಾಡಳಿತ ಜಾಹೀರಾತುಗಳನ್ನು ಅಳವಡಿಸಲಾಗು ತ್ತಿದೆ. ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಾಹಿತಿ ನೀಡುವ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.

Translate »