ಕೆ.ಆರ್.ನಗರ: ಜನಾಭಿಪ್ರಾಯವನ್ನು ಕಲೆ ಹಾಕಿ ಅವರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ನಿಮ್ಮ ಅಶೀರ್ವಾದ ನನ್ನ ಮೇಲಿರಲಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕೋರಿದರು. ಶುಕ್ರವಾರ ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಸಲಹೆ ನೀಡಿದ್ದರಿಂದ ಸ್ವತಂತ್ರವಾಗಿ ನಿಂತಿದ್ದೇನೆ. ನಾಮಪತ್ರ ಸಲ್ಲಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಕೆ.ಆರ್.ನಗರ…
ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ಸಿಗರ ಅಗತ್ಯ ನನಗಿಲ್ಲ: ಕುಮಾರಸ್ವಾಮಿ
March 22, 2019ಬೆಂಗಳೂರು: ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದು, ಅಂತಹವರ ಅವಶ್ಯ ಕತೆ ನನಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿ ಗರು ನಿಖಿಲ್‍ಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಹಿಂಬಾಗಿಲಿನಿಂದ ಬಂದವರು ಬಹಳ ಮುಂದುವರೆದಿದ್ದಾರೆ ಎಂದು ಎನ್. ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಚುನಾವಣೆ ಎದುರಿಸಲು ನಮ್ಮ ಕಾರ್ಯ ಕರ್ತರೇ ಸಮರ್ಥರಿದ್ದಾರೆ. ನಮ್ಮ ಬೆನ್ನಿಗೆ ಚೂರಿ ಹಾಕುತ್ತಿರುವ ಕಾಂಗ್ರೆಸ್…
ಜೆಡಿಎಸ್ ಶಾಸಕರಿಗೆ ದರ್ಶನ್, ಯಶ್ ಸವಾಲ್
March 21, 2019ಮಂಡ್ಯ: ಸುಮಲತಾ ಪರ ನಿಂತಿರುವುದಕ್ಕೆ ಜೆಡಿಎಸ್ ಶಾಸಕ ನಾರಾಯಣಗೌಡ ನೀಡಿದ್ದ “ಸರ್ಕಾರ ನಮ್‍ದಿದೆ ಏನ್ ಬೇಕಾದರೂ ಮಾಡ್ತೀವಿ, ಹಳೆ ಕೇಸ್‍ನೆಲ್ಲಾ ಓಪನ್ ಮಾಡ್ತೀವಿ’’ ಎನ್ನುವ ಮೂಲಕ ನೀಡಿದ ಎಚ್ಚರಿಕೆಗೆ ಸಿನಿಮಾ ನಟರು ಟಾಂಗ್ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮಾತನಾಡಿ ಇವತ್ತು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲನ್ನು ತೊಳೆದರೂ ಅದು ಕಡಿಮೆನೇ. ಯಾಕೆಂದರೆ ಈ ಉರಿ ಬಿಸಿಲಲ್ಲಿ ಅಲ್ಲಿಂದ ನಮ್ಮ ಜೊತೆ ನಡೆದು ಕೊಂಡು ಬಂದಿದ್ದೀರಿ. ನಾನು ತಲಾ ಇಷ್ಟಿಷ್ಟು…
ಸುಮಲತಾ ಪರ ಅಭಿಮಾನಿಗಳ ಬೈಕ್ ರ್ಯಾಲಿ
March 21, 2019ಮದ್ದೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುತ್ತಿ ರುವ ಹಿನ್ನೆಲೆಯಲ್ಲಿ ಪಟ್ಟಣದಿಂದ ನೂರಾರು ಬೈಕ್‍ಗಳಲ್ಲಿ ಅಂಬರೀಶ್ ಅಭಿಮಾನಿಗಳು ಹಾಗೂ ಸ್ವಾಭಿಮಾನಿ ಪಡೆಯ ಯುಕವರು ಮಂಡ್ಯಕ್ಕೆ ತೆರಳಿದರು. ಇದಕ್ಕೂ ಮುನ್ನ ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಬೈಕ್ ಜಾಥಾ ನಡೆಸಿ, ಮಂಡ್ಯಕ್ಕೆ ಬೈಕ್‍ಗಳಲ್ಲಿ ಹೊರಟರು. ಸುಮಲತಾ ಅವರನ್ನು ಬೆಂಬಲಿಸಲು ಸ್ವಾಭಿಮಾನ ಪಡೆಯ ಯುವಕರು ಅಂಬರೀಶ್ ಪರವಾಗಿ ಘೋಷಣೆಗಳನ್ನು ಕೂಗಿದರು. ತಾಪಂ ಸದಸ್ಯ ಚಲುವರಾಜ್…
ಸುಮಲತಾ ರ್ಯಾಲಿಯಲ್ಲಿ ಕಾಂಗ್ರೆಸ್ಸಿಗರು; ಸಿಎಂ ಅಸಮಾಧಾನ ಡಿಕೆಶಿಯಿಂದ ಕಾಂಗ್ರೆಸ್ ಮುಖಂಡರ ಸಭೆ
March 21, 2019ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ ನಂತರ ನಡೆದ ರ್ಯಾಲಿ ಮತ್ತು ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಕಾಣಿಸಿಕೊಂಡಿರುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿದ ಕುಮಾರಸ್ವಾಮಿ, ತಾವು ಈಗಾಗಲೇ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ಕರೆದು ಸುಮಲತಾ ಅವರಿಗೆ ಬೆಂಬಲ ನೀಡಬಾರದೆಂದು ತಿಳಿಸಿದ್ದರೂ ಕೂಡ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಸುಮಲತಾ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ…
ಮಂಡ್ಯ ಋಣ ನಮ್ಮ ಮೇಲಿದೆ: ನಿಖಿಲ್ ಕುಮಾರಸ್ವಾಮಿ
March 21, 2019ಭಾರತೀನಗರ: ನಾನು ಯಾವುದೇ ಸ್ವಾರ್ಥವನ್ನಿಟ್ಟು ಕೊಂಡು ಮಂಡ್ಯಕ್ಕೆ ಬಂದಿಲ್ಲ. ನಮ್ಮ ತಾತ ಮತ್ತು ನಮ್ಮ ತಂದೆಯವರ ಹಾದಿಯಲ್ಲೇ ಜನರ ಸೇವೆ ಮಾಡಲು ಬಂದಿರುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇಲ್ಲಿಗೆ ಸಮೀಪದ ಕರಡಕೆರೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿದ್ದೀರಿ. ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ. ಹಾಗಾಗಿ ನನ್ನನ್ನು ನಿಮ್ಮ ಮನೆಯ ಮಗ ಎಂದು…
ಸಾಲಬಾಧೆ; ನದಿಗೆ ಹಾರಿ ರೈತ ಆತ್ಮಹತ್ಯೆ
March 21, 2019ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ಅಕ್ಕಿಹೆಬ್ಬಾಳು ಬಳಿ ಹರಿಯುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ ತೇಗನಹಳ್ಳಿ ಗ್ರಾಮದ ರೈತ ರಂಗಣ್ಣ(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಘಟನೆ ವಿವರ: ತೇಗನಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಮೀನು ಹೊಂದಿರುವ ರೈತ ರಂಗಣ್ಣ ಬೇಸಾಯಕ್ಕಾಗಿ ಹಾಗೂ ಜಮೀನು ಅಭಿವೃದ್ಧಿಗಾಗಿ ಸ್ಟೇಟ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸೊಸೈಟಿಗಳಿಂದ ಸುಮಾರು ಐದಾರು ಲಕ್ಷ ಸಾಲ ಮಾಡಿದ್ದರು. ಮಳೆ ಸರಿಯಾಗಿ ಆಗದ ಕಾರಣ ಬೆಳೆದಿದ್ದ ಕಬ್ಬು ಮತ್ತು…
ಮಂಡ್ಯ ಲೋಕಸಭೆ ಕ್ಷೇತ್ರ ಮೊದಲ ದಿನ 3 ನಾಮಪತ್ರ
March 20, 2019ಮಂಡ್ಯ: ಮಂಡ್ಯ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಅದಾಗಲೇ ಅಧಿ ಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದ್ದು, ಮೂರು ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಮೊದಲ ದಿನ ವಾದ ಇಂದು ಕೌಡ್ಲೆ ಚನ್ನಪ್ಪ ಎಂಬವರು ಪಕ್ಷೇತರ ಅಭ್ಯರ್ಥಿಯಾಗಿ ಒಂದು, ಸಂಯುಕ್ತ ಜನತಾ ದಳ ಪಕ್ಷದಿಂದ ಒಂದು ಹಾಗೂ ಸಮಾಜವಾದಿ ಪಕ್ಷದಿಂದ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. ಅಭ್ಯರ್ಥಿ ನಟರ ಸಿನಿಮಾ ನಿರ್ಬಂಧ: ಚಿತ್ರ ನಟರು ಚುನಾವಣಾ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿರುವುದರಿಂದ…
ಮಳವಳ್ಳಿಯಲ್ಲಿ ನಿಖಿಲ್ ರೋಡ್‍ಶೋ
March 20, 2019ಅಪ್ಪನಂತೆ ಅಭಿವೃದ್ಧಿ ಕೆಲಸ ಮಾಡುವೆ, ಒಂದು ಅವಕಾಶ ಕೊಡಿ ಪ್ರಚಾರ ವೇಳೆ `ಯಶ್, ದರ್ಶನ್ ಗೋ ಬ್ಯಾಕ್’ ಘೋಷಣೆ ಯಾರಿಗೇ ಆಗಲಿ ಗೋಬ್ಯಾಕ್ ಎನ್ನುವುದು ಸರಿಯಲ್ಲ: ನಿಖಿಲ್ ಮಂಡ್ಯ: ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಮಂಗಳವಾರ ರೋಡ್ ಶೋ ನಡೆಸಿ ಮತ ಯಾಚಿಸಿದರು. ಮಳವಳ್ಳಿ ತಾಲೂಕಿನ ದೇವಿರಳ್ಳಿ ಬಳಿ ಜೆಡಿಎಸ್ ಕಾರ್ಯಕರ್ತರಿಂದ ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ ದೊರೆಯಿತು. ಗಡಿ ಭಾಗದಿಂದ ಮಳವಳ್ಳಿ ಪಟ್ಟಣದವರೆಗೂ ಬೈಕ್‍ಗಳ ಮೆರವಣಿಗೆ ನಡೆಯಿತು. ದಳವಾಯಿ ಕೋಡಿಹಳ್ಳಿ,…
ನನ್ನ ದಾರಿ ಸುಗಮವಾಗಿಲ್ಲ ಎಂಬುದರ ಅರಿವಿದೆ: ಸುಮಲತಾ
March 20, 2019ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಮಂಡ್ಯ,: ಜಿಲ್ಲೆಯ ಜನರನ್ನು ಉದ್ದೇಶಿಸಿ ಪಕ್ಷೇತರ ಅಭ್ಯರ್ಥಿ ನಟಿ ಸುಮ ಲತಾ ಅಂಬರೀಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದಿದ್ದು, ಮಂಗಳವಾರ ವೈರಲ್ ಆಗಿದೆ. `ಮಂಡ್ಯದ ಜನತೆಯಲ್ಲಿ ನನ್ನ ಮನ ದಾಳದ ಒಂದು ಮಾತು ಹಂಚಿಕೊಳ್ಳಲು ಬಯಸುತ್ತೇನೆ. ಅಂಬರೀಷ್ ನಮ್ಮೆಲ್ಲರನ್ನು ಅಗಲಿ ಹೋದ ದಿನಗಳಿಂದ ನನ್ನ ಜೀವನದಲ್ಲಿ ಬಿರು ಗಾಳಿ ಎಬ್ಬಿಸಿ ಕತ್ತಲಿನೆಡೆಗೆ ತಳ್ಳಿತ್ತು. ಇಂತಹ ಸಂದರ್ಭ ದಲ್ಲಿ ಜನರ ಶಕ್ತಿ ಮತ್ತು ಪ್ರೀತಿ ಕತ್ತಲಿನಿಂದ…