ಮಂಡ್ಯ ಋಣ ನಮ್ಮ ಮೇಲಿದೆ: ನಿಖಿಲ್ ಕುಮಾರಸ್ವಾಮಿ
ಮಂಡ್ಯ

ಮಂಡ್ಯ ಋಣ ನಮ್ಮ ಮೇಲಿದೆ: ನಿಖಿಲ್ ಕುಮಾರಸ್ವಾಮಿ

March 21, 2019

ಭಾರತೀನಗರ: ನಾನು ಯಾವುದೇ ಸ್ವಾರ್ಥವನ್ನಿಟ್ಟು ಕೊಂಡು ಮಂಡ್ಯಕ್ಕೆ ಬಂದಿಲ್ಲ. ನಮ್ಮ ತಾತ ಮತ್ತು ನಮ್ಮ ತಂದೆಯವರ ಹಾದಿಯಲ್ಲೇ ಜನರ ಸೇವೆ ಮಾಡಲು ಬಂದಿರುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಇಲ್ಲಿಗೆ ಸಮೀಪದ ಕರಡಕೆರೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿದ್ದೀರಿ. ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿದೆ. ಹಾಗಾಗಿ ನನ್ನನ್ನು ನಿಮ್ಮ ಮನೆಯ ಮಗ ಎಂದು ಆಯ್ಕೆ ಗೊಳಿಸಿ ನಿಮ್ಮ ಋಣ ತೀರಿಸಲು ಅವಕಾಶ ಕಲ್ಪಿಸಿಕೊಡಿ ಎಂದರು.

ರೈತರೇ ನಮಗೆ ರಿಯಲ್ ಹೀರೋ ಗಳು. ನಾನು ಚುನಾವಣೆ ಪ್ರಚಾರಕ್ಕೆ ಹೋದಕಡೆಯಲೆಲ್ಲಾ ಅಭೂತಪೂರ್ವ ಸ್ವಾಗತ ದೊರಕುತ್ತಿದೆ. ನನ್ನನ್ನು ಚುನಾ ವಣೆಯಲ್ಲಿ ಸೋಲಿಸಲು ನಮ್ಮ ವಿರೋಧಿ ಗಳು ಕುತಂತ್ರ ರಾಜಕಾರಣ ಮಾಡು ತ್ತಿದ್ದಾರೆ. ಮಂಡ್ಯ ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸಲು ಹೊರಟ್ಟಿದ್ದಾರೆ. ಇದಕ್ಕೆ ಯಾವುದೇ ಮಹತ್ವ ನೀಡಬೇಡಿ ಎಂದು ಮನವಿ ಮಾಡಿದರು.

ಕೇಬಲ್ ಕಟ್: ಜಿಲ್ಲೆಯ ವಿವಿಧೆಡೆ ಕೇಬಲ್ ನೇಟ್‍ವರ್ಕ್‍ಗಳನ್ನು ಕಟ್ ಮಾಡಿಸಿ ದ್ದಾರೆಂಬ ಆರೋಪಗಳು ಕೇಳಿಬಂದಿತು. ಅಂತಹ ಕೀಳು ರಾಜಕಾರಣ ತಮ್ಮ ತಾತ ದೇವೇಗೌಡರ ಕುಟುಂಬದಲ್ಲಿ ಬಂದಿಲ್ಲ. ಹೋರಾಟ ಮಾಡಿ ಜಯ ಗಳಿಸುತ್ತೇವೆ ಹೊರತು ಕೀಳು ರಾಜಕಾರಣಕ್ಕೆ ಇಳಿಯು ವುದಿಲ್ಲ, ನೀವು ಪ್ರಜ್ಞಾವಂತರು, ಬುದ್ದಿವಂತರು, ಕೇಬಲ್ ನೆಟ್‍ವರ್ಕ್‍ನ್ನು ಪಕ್ಷೇತರ ಅಭ್ಯರ್ಥಿಗಳ ಹಿಂಬಾಲಕರೇ ಕಡಿತಗೊಳಿಸಿ ನಮ್ಮ ಮೇಲೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸಲು ಏಕೆ ಮಾಡಿರಬಾರದು ಎಂಬುದನ್ನು ಚಿಂತಿಸಬೇಕೆಂದು ಕೋರಿದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತ ನಾಡಿ, ನಿಖಿಲ್ ಕುಮಾರಸ್ವಾಮಿ ಮೋಜು ಮಾಡುವಂತಹ ವ್ಯಕ್ತಿಯಲ್ಲ. ಅವರ ತಾತ ಮತ್ತು ತಂದೆಯವರ ಹಾದಿಯಲ್ಲೇ ರೈತರ ಸೇವೆ ಮಾಡಬೇಕೆಂದು ರಾಜಕಾರಣಕ್ಕೆ ಬಂದಿದ್ದಾರೆ. ಈಗಾಗಲೇ ರೈತರ ಸಮಸ್ಯೆ ಮತ್ತು ಸಂಕಷ್ಟಗಳನ್ನು ಅರ್ಥ ಮಾಡಿ ಕೊಂಡಿ ದ್ದಾರೆ. ಇಂತಹ ಯುವಕರನ್ನು ನಾವು ಆಯ್ಕೆ ಗೊಳಿಸಿದರೆ ಕೇಂದ್ರದಲ್ಲಿ ಹೋರಾಟ ಮಾಡಲು ಅವಕಾಶ ಸಿಕ್ಕಿದಂತಾಗುತ್ತದೆ ಎಂದರು.

ಇದೇ ವೇಳೆ ಜೆಡಿಎಸ್ ಮುಖಂಡ ಸಂತೋಷ್ ತಮ್ಮಣ್ಣ, ಜಿ.ಪಂ ಸದಸ್ಯೆ ಸುಕನ್ಯ ಹನುಮಂತೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಜೆಡಿಎಸ್ ತಾ.ಅಧ್ಯಕ್ಷ ಚಿಕ್ಕತಿಮ್ಮೇಗೌಡ, ವೆಂಕಟೇಶ್, ಎಚ್.ಎಂ.ಮರಿಮಾದೇಗೌಡ, ಕುಮಾರ್ ರಾಜು ಸೇರಿದಂತೆ ಇತರರಿದ್ದರು.

Translate »