ಕೆ.ಆರ್.ಪೇಟೆ: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ಅಕ್ಕಿಹೆಬ್ಬಾಳು ಬಳಿ ಹರಿಯುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಾಲೂಕಿನ ತೇಗನಹಳ್ಳಿ ಗ್ರಾಮದ ರೈತ ರಂಗಣ್ಣ(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ಘಟನೆ ವಿವರ: ತೇಗನಹಳ್ಳಿ ಗ್ರಾಮದಲ್ಲಿ ಸುಮಾರು ಎರಡು ಎಕರೆ ಜಮೀನು ಹೊಂದಿರುವ ರೈತ ರಂಗಣ್ಣ ಬೇಸಾಯಕ್ಕಾಗಿ ಹಾಗೂ ಜಮೀನು ಅಭಿವೃದ್ಧಿಗಾಗಿ ಸ್ಟೇಟ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಸೊಸೈಟಿಗಳಿಂದ ಸುಮಾರು ಐದಾರು ಲಕ್ಷ ಸಾಲ ಮಾಡಿದ್ದರು. ಮಳೆ ಸರಿಯಾಗಿ ಆಗದ ಕಾರಣ ಬೆಳೆದಿದ್ದ ಕಬ್ಬು ಮತ್ತು ಬಾಳೆ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿದ್ದವು ಇದರಿಂದ ಮನನೊಂದ ರೈತ ರಂಗಣ್ಣ ಕಳೆದ ಎರಡು ದಿನಗಳ ಹಿಂದೆ ಗ್ರಾಮದಿಂದ ನಾಪತ್ತೆಯಾಗಿ ಅಕ್ಕಿಹೆಬ್ಬಾಳು ಬಳಿ ಹರಿಯುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಇಂದು ರೈತನ ಮೃತ ದೇಹ ನದಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಶವವನ್ನು ನದಿಯಿಂದ ಹೊರತೆಗೆದು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು.
ಮಂಡ್ಯ