Tag: Mandya

Devi Gowda’s Believers Do not Live! Some people have grown up bigger !!
ಮಂಡ್ಯ, ಮೈಸೂರು

Devi Gowda’s Believers Do not Live! Some people have grown up bigger !!

March 15, 2019

ಮಂಡ್ಯ: ‘ದೇವೇಗೌಡರನ್ನು ನಂಬಿದವರು ಯಾರೂ ಬದುಕಿಲ್ಲ’. ಮಂಡ್ಯ ಸಂಸದ ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡರು ದೇವೇ ಗೌಡರ ಮೊಮ್ಮಗ ನಿಖಿಲ್ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಿದ ಬೃಹತ್ ಸಮಾವೇಶದಲ್ಲಿ ಯಡವಟ್ಟು ಮಾತಿದು. ಮರುಕ್ಷಣವೇ ಎಚ್ಚೆತ್ತ ಶಿವರಾಮೇಗೌಡ, ಅದೇ ರೀತಿ ದೇವೇಗೌಡರ ಗರಡಿ ಯಲ್ಲಿ ಪಳಗಿದ ಅನೇಕರು ಪಕ್ಷ ಬಿಟ್ಟು ಹೋದರೂ ಕೂಡ ಉನ್ನತ ಮಟ್ಟಕ್ಕೇರಿ ದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ, ಹೆಚ್.ಸಿ. ಮಹದೇವಪ್ಪ, ಆರ್.ವಿ. ದೇಶಪಾಂಡೆ ಸೇರಿದಂತೆ ಜೆಡಿಎಸ್ ತೊರೆದ ನಂತರವೂ ರಾಜಕೀಯವಾಗಿ ಮೇಲೇರಿರುವವರನ್ನು…

ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ  ಯಾರನ್ನೂ ಕರೆತರಲ್ಲ
ಮಂಡ್ಯ

ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ ಯಾರನ್ನೂ ಕರೆತರಲ್ಲ

March 14, 2019

ಮಂಡ್ಯ: ನನ್ನ ಪರ ಚುನಾವಣಾ ಪ್ರಚಾರಕ್ಕೆ ಸ್ಯಾಂಡಲ್‍ವುಡ್‍ನಿಂದ ಯಾರನ್ನೂ ಕರೆತರುವುದಿಲ್ಲ, ನನ್ನ ಸ್ವಾರ್ಥಕ್ಕೆ ಸ್ಯಾಂಡಲ್‍ವುಡ್‍ನ ಯಾರನ್ನೂ ದುರುಪಯೋಗ ಪಡಿಸಿಕೊಳ್ಳೋದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ನನ್ನ ಸೈನಿಕರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಮದ್ದೂರು ತಾಲೂಕಿನ ಗೊಲ್ಲರ ದೊಡ್ಡಿಯ ಜುಂಜಪ್ಪ, ಚಿಕ್ಕಂಕನಹಳ್ಳಿಯ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂ ಭಿಸಿದ ಬಳಿಕ ಅವರು ಮಾತನಾಡಿದರು. ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಸ್ಯಾಂಡಲ್‍ವುಡ್‍ನ ಅನೇಕ ನಟ, ನಟಿಯರು, ನಿರ್ಮಾಪಕರು ನಿಂತಿ ದ್ದಾರೆ. ಸುಮಲತಾ ಅವರ ಪರ…

ಮೇಲುಕೋಟೆಯಲ್ಲಿ ಸಂಭ್ರಮದ ಕಲ್ಯಾಣೋತ್ಸವ
ಮಂಡ್ಯ

ಮೇಲುಕೋಟೆಯಲ್ಲಿ ಸಂಭ್ರಮದ ಕಲ್ಯಾಣೋತ್ಸವ

March 14, 2019

ಮೇಲುಕೋಟೆ: ವಿಳಂಬಿ ನಾಮ ಸಂವತ್ಸರದ ರೋಹಿಣಿ ನಕ್ಷತ್ರದ ಶುಭದಿನವಾದ ಬುಧವಾರ ಸಂಜೆ ಆರಾದ್ಯ ದೈವ ಶ್ರೀ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಕಲ್ಯಾಣೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಲೋಕ ಕಲ್ಯಾಣಾರ್ಥವಾಗಿ ಕಲ್ಯಾಣಿಯ ದಾರಾಮಂಟಪದಲ್ಲಿ ಮಹಾಲಕ್ಷ್ಮಿ ಕಲ್ಯಾಣ ನಾಯಕಿ ಅಮ್ಮನವರೊಂದಿಗೆ ಸಂಜೆ ನಡೆದ ಕಲ್ಯಾಣೋತ್ಸವ ವೈಭವ ವನ್ನು ಸಾವಿರಾರು ಭಕ್ತರು ದರ್ಶನ ಮಾಡಿ ಪುನೀತ ಭಾವನೆ ಹೊಂದಿದರು. ವೇದ ಘೋಷ ಮಂಗಳವಾದ್ಯದೊಂದಿಗೆ ಸಮನ್ಮಾಲೆ, ಲಾಜಹೋಮ ಮುಂತಾದ ಶಾಸ್ತ್ರೋಕ್ತ ವಿಧಿ ವಿಧಾನಗಳು ನೆರವೇರಿದವು. ಇದಕ್ಕೂ ಮುನ್ನ ದೇವಾಲಯದಲ್ಲಿ ದೇವಸೇನ…

ಮನೆ ಮೇಲೆ ದಾಳಿ; ಸ್ಪೋಟಕ ವಶ
ಮಂಡ್ಯ

ಮನೆ ಮೇಲೆ ದಾಳಿ; ಸ್ಪೋಟಕ ವಶ

March 14, 2019

ಶ್ರೀರಂಗಪಟ್ಟಣ: ತಾಲೂಕಿನ ಕಡೇನಹಳ್ಳಿ ಶೆಡ್ ಗ್ರಾಮದ ಮನೆಯೊಂದರ ಮೇಲೆ ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಶ್ರೀರಂಗ ಪಟ್ಟಣ ಪೊಲೀಸರು ಜಂಟಿ ದಾಳಿ ನಡೆಸಿ, ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಪುನೀತ್ ಮತ್ತು ಜಿಲ್ಲಾ ಅಪರಾಧ ದಳದ ಪೊಲೀಸರು ಗ್ರಾಮದ ಪಾಪಮ್ಮ ಎಂಬವರ ಮನೆ ಮೇಲೆ ದಾಳಿ ನಡೆಸಿ ಮೂರು ಸಾವಿರಕ್ಕೂ ಹೆಚ್ಚು ಡಿಟೋನೇಟರ್‍ಗಳು ಸ್ಪೋಟಕ್ಕೆ ಬಳಸುವ 8 ಚೀಲ ಉಪ್ಪು, ಮತ್ತು 12 ಬಂಡಲ್ ವಯರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪಾಪಮ್ಮ…

ತೆಪ್ಪೋತ್ಸವ ಮೂಲಕ ಬೇಬಿ ಬೆಟ್ಟದ ಜಾತ್ರೆಗೆ ತೆರೆ
ಮಂಡ್ಯ

ತೆಪ್ಪೋತ್ಸವ ಮೂಲಕ ಬೇಬಿ ಬೆಟ್ಟದ ಜಾತ್ರೆಗೆ ತೆರೆ

March 14, 2019

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದಲ್ಲಿ ನಡೆದ ಬೃಹತ್ ದನಗಳ ಜಾತ್ರಾ ಮಹೋತ್ಸವು ಮಂಗಳವಾರ ಶ್ರೀಸಿದ್ದೇಶ್ವರ-ಮಹದೇಶ್ವರಸ್ವಾಮಿ ದೇವರ ತೆಪ್ಪೋತ್ಸವ ನಡೆಸುವ ಮೂಲಕ ತೆರೆಬಿದ್ದಿತ್ತು. ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಶ್ರೀರಾಮಯೋಗಿ ಶ್ವರ ಮಠದಿಂದ ಶ್ರೀಸಿದ್ದೇಶ್ವರ-ಮಹದೇಶ್ವರಸ್ವಾಮಿ ದೇವರುಗಳ ಮೂರ್ತಿಯನ್ನು ಮಠದ ಪೀಠಾಧ್ಯಕ್ಷ ಶ್ರೀಗುರುಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಸುವ ಕೆರೆಯ ಬಳಿ ತರಲಾಯಿತು. ಬಳಿಕ ಸಂಪ್ರದಾಯದಂತೆ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಶ್ರೀಸಿದ್ದೇಶ್ವರ-ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ತೆಪ್ಪದಲ್ಲಿ ಇಡಲಾಯಿತು. ಕೆರೆಯಲ್ಲಿ ಮೂರು ತೆಪ್ಪಗಳನ್ನು ಸಿದ್ದಪಡಿಸಲಾಗಿತ್ತು. ಒಂದು ತೆಪ್ಪದಲ್ಲಿ ದೇವರ ಮೂರ್ತಿಗಳು…

ಮಾ.18ಕ್ಕೆ ನನ್ನ ನಿರ್ಧಾರ
ಮೈಸೂರು

ಮಾ.18ಕ್ಕೆ ನನ್ನ ನಿರ್ಧಾರ

March 12, 2019

ಮಂಡ್ಯ: ರಾಜಕೀಯದಲ್ಲಿ ಕೊನೆ ಗಳಿಗೆವರೆಗೂ ಏನು ಬೇಕಾದರೂ ಆಗಬಹುದು. ನನ್ನ ನಿರ್ಧಾರ ಏನು ಎನ್ನುವುದನ್ನು ಮಾರ್ಚ್ 18 ರಂದು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು. ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಈಗಾಗಲೇ ಊಹಾಪೋಹಗಳು ಬರುತ್ತಿವೆ. ಅವುಗಳನ್ನೆಲ್ಲಾ ನಂಬಬೇಡಿ. ಇವತ್ತು ಸಹ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ನಾನು ಹೋದ ಕಡೆಯಲ್ಲೆಲ್ಲ ಅಭಿಮಾನಿ ಗಳು ಸೇರಿದಂತೆ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಯಲ್ಲಿ…

ಗಂಡ ಸತ್ತ ತಿಂಗಳಲ್ಲೇ ಎಲೆಕ್ಷನ್‍ಗೆ ಬರುವ ಅಗತ್ಯವಿತ್ತಾ…!
ಮಂಡ್ಯ, ಮೈಸೂರು

ಗಂಡ ಸತ್ತ ತಿಂಗಳಲ್ಲೇ ಎಲೆಕ್ಷನ್‍ಗೆ ಬರುವ ಅಗತ್ಯವಿತ್ತಾ…!

March 9, 2019

ಮಂಡ್ಯ: ಕೆಲ ತಿಂಗಳ ಹಿಂದೆ ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಅವರು ಆಂಧ್ರದವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪೀಠಿಕೆ ಹಾಕಿದ್ದರು. ಈಗ ಅಂಬರೀಷ್ ಶಾಸಕರು ಹಾಗೂ ಸಚಿವರಾಗಿದ್ದಾಗ ಅವರ ಮನೆಗೆ ಹೋದವರಿಗೆ ಸುಮಲತಾ ಒಂದು ಗ್ಲಾಸ್ ನೀರು ಕೊಟ್ಟಿದ್ದಾರಾ? ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ ನಡೆಸಿದ ಬೆನ್ನಲ್ಲೇ `ಗಂಡ ಸತ್ತ ಒಂದು ತಿಂಗಳು, ಎರಡು ತಿಂಗಳಲ್ಲೇ ಚಾಲೆಂಜ್ ಮಾಡಿಕೊಂಡು ಎಲೆಕ್ಷನ್‍ಗೆ ಬರುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡುವ…

ಕಾಂಗ್ರೆಸ್-ಜೆಡಿಎಸ್ ನಡೆ ನೋಡಿಕೊಂಡು ಬಿಜೆಪಿ ಅಭ್ಯರ್ಥಿ ಘೋಷಣೆ
ಮಂಡ್ಯ

ಕಾಂಗ್ರೆಸ್-ಜೆಡಿಎಸ್ ನಡೆ ನೋಡಿಕೊಂಡು ಬಿಜೆಪಿ ಅಭ್ಯರ್ಥಿ ಘೋಷಣೆ

March 4, 2019

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ಯಲ್ಲಿ ಬಿಎಸ್‍ವೈ ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಅಂತಿಮಗೊಳಿಸಿದ ಬಳಿಕವೇ ನಮ್ಮ ಅಭ್ಯರ್ಥಿಯನ್ನು ಪ್ರಕಟಿಸಲಾಗು ವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಭಾನುವಾರ `ಮೋದಿ ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ ಅವರು, ಸುಮಲತಾ ಸ್ಪರ್ಧೆ ವಿಚಾರವೇ ಇನ್ನೂ ಅಂತಿಮವಾಗಿಲ್ಲ. ಅವರು ಯಾವ ಪಕ್ಷದಲ್ಲಿ ನಿಲ್ಲುತ್ತಾರೆ? ಅಥವಾ…

ಅಂಬಿ ನಾಮಫಲಕ ತೆಗೆಸಿದ್ದಕ್ಕೆ ಸಚಿವ ತಮ್ಮಣ್ಣ ಆಕ್ರೋಶ
ಮಂಡ್ಯ

ಅಂಬಿ ನಾಮಫಲಕ ತೆಗೆಸಿದ್ದಕ್ಕೆ ಸಚಿವ ತಮ್ಮಣ್ಣ ಆಕ್ರೋಶ

March 4, 2019

ಭಾರತೀನಗರ: ಅಂಬರೀಶ್ ಅವರ ಹುಟ್ಟೂರಿನಲ್ಲಿದ್ದ ಅಂಬಿ ನಾಮಫಲಕ ತೆರವುಗೊಳಿಸಿರುವ ಸುದ್ದಿ ತಿಳಿದ ಬಳಿಕ ಸಾರಿಗೆ ಸಚಿವ, ಡಿ.ಸಿ.ತಮ್ಮಣ್ಣ ಪಿಡಿಒ ಹಾಗೂ ಪೆÇಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿz್ದÁರೆ. ದೊಡ್ಡ ಅರಸಿನಕೆರೆಗೆ ಭಾನುವಾರ ಭೇಟಿ ನೀಡಿ ಅಂಬರೀಷ್ ಪುತ್ಥಳಿಗೆ ಹೂ ಮಾಲೆ ಹಾಕಿದ ಅವರು, ನಾಮಫಲಕ ಕೀಳಿಸಲು ಯಾರು ಅನುಮತಿ ನೀಡಿದ ರೆಂದು ಗ್ರಾ.ಪಂ. ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಅಂಬರೀಷ್ ಹಾಗೂ ನಾನು ಆತ್ಮೀಯ ಸ್ನೇಹಿತರು. ನಮ್ಮ ಹಾಗೂ ಅವರ ತಂದೆ ಕೂಡ ಆತ್ಮೀಯರು. ಅಂಬಿ ಕುಟುಂಬದ ಬಗ್ಗೆ ನನಗೆ…

ಪಿಎಸ್‍ಎಸ್‍ಕೆ ಮೇನಲ್ಲಿ ಕಾರ್ಯಾರಂಭ: ಸಿಎಸ್‍ಪಿ
ಮಂಡ್ಯ

ಪಿಎಸ್‍ಎಸ್‍ಕೆ ಮೇನಲ್ಲಿ ಕಾರ್ಯಾರಂಭ: ಸಿಎಸ್‍ಪಿ

March 4, 2019

ಪಾಂಡವಪುರ: ಪಟ್ಟಣದ ಪಿಎಸ್‍ಎಸ್‍ಕೆ ಕಾರ್ಖಾನೆಯನ್ನು ಮೇ-ಜೂನ್ ತಿಂಗಳಲ್ಲಿ ಆರಂಭಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ಪುಟ್ಟರಾಜು ಪ್ರಕಟಿಸಿದರು. ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಯೋಜನೆಯಡಿ 2.75 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿದ ಅವರು, ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ 4 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಚಿಕ್ಕಾಡೆ ಜಿಲ್ಲಾ ಪಂಚಾ ಯಿತಿ ಸದಸ್ಯ ತಿಮ್ಮೇಗೌಡ, ಚಿಕ್ಕಾಡೆ ಜಿಪಂ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ…

1 22 23 24 25 26 56
Translate »