ಅಂಬಿ ನಾಮಫಲಕ ತೆಗೆಸಿದ್ದಕ್ಕೆ ಸಚಿವ ತಮ್ಮಣ್ಣ ಆಕ್ರೋಶ
ಮಂಡ್ಯ

ಅಂಬಿ ನಾಮಫಲಕ ತೆಗೆಸಿದ್ದಕ್ಕೆ ಸಚಿವ ತಮ್ಮಣ್ಣ ಆಕ್ರೋಶ

March 4, 2019

ಭಾರತೀನಗರ: ಅಂಬರೀಶ್ ಅವರ ಹುಟ್ಟೂರಿನಲ್ಲಿದ್ದ ಅಂಬಿ ನಾಮಫಲಕ ತೆರವುಗೊಳಿಸಿರುವ ಸುದ್ದಿ ತಿಳಿದ ಬಳಿಕ ಸಾರಿಗೆ ಸಚಿವ, ಡಿ.ಸಿ.ತಮ್ಮಣ್ಣ ಪಿಡಿಒ ಹಾಗೂ ಪೆÇಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿz್ದÁರೆ.

ದೊಡ್ಡ ಅರಸಿನಕೆರೆಗೆ ಭಾನುವಾರ ಭೇಟಿ ನೀಡಿ ಅಂಬರೀಷ್ ಪುತ್ಥಳಿಗೆ ಹೂ ಮಾಲೆ ಹಾಕಿದ ಅವರು, ನಾಮಫಲಕ ಕೀಳಿಸಲು ಯಾರು ಅನುಮತಿ ನೀಡಿದ ರೆಂದು ಗ್ರಾ.ಪಂ. ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.

ಅಂಬರೀಷ್ ಹಾಗೂ ನಾನು ಆತ್ಮೀಯ ಸ್ನೇಹಿತರು. ನಮ್ಮ ಹಾಗೂ ಅವರ ತಂದೆ ಕೂಡ ಆತ್ಮೀಯರು. ಅಂಬಿ ಕುಟುಂಬದ ಬಗ್ಗೆ ನನಗೆ ಗೌರವವಿದೆ. ಅನಗತ್ಯವಾಗಿ ನಮ್ಮ ನಡುವೆ ಕಂದಕ ಸೃಷ್ಟಿಸಲು ಕೆಲವರು ಮುಂದಾಗಿz್ದÁರೆ ಎಂದವರು ಕಿಡಿಕಾರಿದರು.

ದೊಡ್ಡ ಅರಸಿನಕೆರೆಯಿಂದ ಚಿಕ್ಕಮರೀ ಗೌಡನ ನಗರದ ತನಕ ರಸ್ತೆ ನಿರ್ಮಿಸಿ ಆ ರಸ್ತೆಗೆ ಅಂಬರೀಷ್ ಹೆಸರನ್ನಿಡಲು ನಿರ್ಧರಿಸಿz್ದÉೀವೆ. ಆದ್ದರಿಂದ ಅಂಬರೀಷ್ ಅಭಿಮಾನಿಗಳು, ಜನತೆ ತಪ್ಪಾಗಿ ಅರ್ಥೈಸಿ ಕೊಳ್ಳಬಾರದು ಎಂದವರು ಸ್ಪಷ್ಟಪಡಿಸಿದರು.

Translate »