ಪಿಎಸ್‍ಎಸ್‍ಕೆ ಮೇನಲ್ಲಿ ಕಾರ್ಯಾರಂಭ: ಸಿಎಸ್‍ಪಿ
ಮಂಡ್ಯ

ಪಿಎಸ್‍ಎಸ್‍ಕೆ ಮೇನಲ್ಲಿ ಕಾರ್ಯಾರಂಭ: ಸಿಎಸ್‍ಪಿ

March 4, 2019

ಪಾಂಡವಪುರ: ಪಟ್ಟಣದ ಪಿಎಸ್‍ಎಸ್‍ಕೆ ಕಾರ್ಖಾನೆಯನ್ನು ಮೇ-ಜೂನ್ ತಿಂಗಳಲ್ಲಿ ಆರಂಭಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ಪುಟ್ಟರಾಜು ಪ್ರಕಟಿಸಿದರು.

ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಯೋಜನೆಯಡಿ 2.75 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿದ ಅವರು, ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ 4 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಚಿಕ್ಕಾಡೆ ಜಿಲ್ಲಾ ಪಂಚಾ ಯಿತಿ ಸದಸ್ಯ ತಿಮ್ಮೇಗೌಡ, ಚಿಕ್ಕಾಡೆ ಜಿಪಂ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ತಲಾ 4 ಕೋಟಿ ರೂ. ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಆ ಅಭಿವೃದ್ಧಿ ಕಾಮಗಾರಿ ಗಳಿಗೂ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.

ಮಂಡ್ಯ ಜಿಲ್ಲೆಗೆ ಸಂಪೂರ್ಣವಾಗಿ ಶಾಶ್ವತವಾದ ಕುಡಿ ಯುವ ನೀರು ಕೊಡಬೇಕು ಎನ್ನುವ ಮಹತ್ವದ ಯೋಜನೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದು, ನಮ್ಮ ಕ್ಷೇತ್ರದ ಎಲ್ಲಾ ಗ್ರಾಮಗಳೂ ಸೇರ್ಪಡೆಗೊಂಡಿವೆ. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ರೂಪಿಸುವುದಕ್ಕಾಗಿ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆನ್ನಾಳು ಸರಕಾರಿ ಶಾಲೆ ಅಭಿವೃದ್ಧಿಗೆ ಸರಕಾರದಿಂದ ಹಣ ಬಿಡುಗಡೆ ಮಾಡಿಸಿಕೊಡುತ್ತೇನೆ. ಪ್ರತಿ ಹೋಬಳಿಗೆ ಒಂದು ಇಂಗ್ಲಿಷ್ ಪಬ್ಲಿಕ್ ಶಾಲೆ ಮಂಜೂರು ಮಾಡಿಸ ಬೇಕು ಎಂದು ನಿರ್ಧರಿಸಿದ್ದೇವೆ. ಯಾವ ಹಳ್ಳಿಗೆ ಶಾಲೆ ಬೇಕು ಎನ್ನುವುದನ್ನು ಸ್ಥಳೀಯರೇ ತೀರ್ಮಾನಿಸಿ ಎಂದರು. ಕೆನ್ನಾಳಿ ಈಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೂ ಹಣ ಬಿಡುಗಡೆ ಮಾಡಿಸÀಲಾಗು ವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ತಿಮ್ಮೇಗೌಡ, ಸಿ.ಅಶೋಕ್, ತಾಪಂ ಸದಸ್ಯ ಪದ್ಮರಾಜು, ಗ್ರಾಪಂ ಅಧ್ಯಕ್ಷ ವಿಶ್ವನಾಥ್, ಮಾಜಿ ಅಧ್ಯಕ್ಷರಾದ ಆರ್.ರುದ್ರೇಶ್, ವೇಣು, ಪಿಡಿಓ ಎಂ.ಬಸವೇಗೌಡ, ಕಾವೇರಿ ನೀರಾವರಿ ನಿಗಮದ ಇಇ ಬಸವರಾಜೇಗೌಡ, ಎಇಇ ಜಯರಾಮಯ್ಯ, ಎಇಗಳಾದ ಅಜಯ್, ಮಹದೇವು, ಕೃಷ್ಣರಾಜು, ಜಿಪಂ ಎಇಇ ಶಿವರಾಮು, ಜೆಡಿಎಸ್ ತಾ.ಅಧ್ಯಕ್ಷ ಧರ್ಮರಾಜು, ತಾಪಂ ಮಾಜಿ ಅಧ್ಯಕ್ಷರಾದ ಕೆ.ಜಿ.ರಾಮಕೃಷ್ಣ, ಎಚ್.ಎಂ.ರಾಮಕೃಷ್ಣ, ಗೃಹ ನಿರ್ಮಾಣ ಮಾಜಿ ಅಧ್ಯಕ್ಷ ಈಶ್ವರಯ್ಯ, ಮುಖಂಡರಾದ ರಾಮಣ್ಣ, ಬಾಲಣ್ಣ, ಸ್ವಾಮಿ, ಯ.ನಂಜುಂಡೇಗೌಡ, ಶ್ರೀಕಂಠೇ ಗೌಡ, ಶಾಂತಮ್ಮ, ನಂದೀಶ್, ಮಂಜು, ಲೋಕೇಶ್, ದೇವರಾಜು ಸೇರಿದಂತೆ ಹಲವರು ಹಾಜರಿದ್ದರು.

Translate »