ಇಂದಿನಿಂದ ಬೇಬಿ ಬೆಟ್ಟದಲ್ಲಿ ದನಗಳ ಜಾತ್ರೆ
ಮಂಡ್ಯ

ಇಂದಿನಿಂದ ಬೇಬಿ ಬೆಟ್ಟದಲ್ಲಿ ದನಗಳ ಜಾತ್ರೆ

March 4, 2019

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದಲ್ಲಿ ಮಾ.4ರಿಂದ 12ರವರೆಗೆ ನಡೆಯಲಿರುವ ಬೃಹತ್ ದನ ಗಳ ಜಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟ ರಾಜು ಸೋಮವಾರ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

9 ದಿನ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ರೂ.ಬೆಲೆ ಬಾಳುವ ಜೋಡೆತ್ತುಗಳು ಅದಾಗಲೇ ಜಾತ್ರೆಗೆ ಆಗಮಿಸಿವೆ. ವಸ್ತುಪ್ರದರ್ಶನ ಹಾಗೂ ಜಾತ್ರಾ ಮಹೋ ತ್ಸವಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಚಿವ ಸಿ.ಎಸ್.ಪುಟ್ಟ ರಾಜು ಚಾಲನೆ ನೀಡಲಿದ್ದಾರೆ. ಬೇಬಿಗ್ರಾಮದ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಬೇಬಿಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀಗುರುಸಿದ್ದೇಶ್ವರ ಸ್ವಾಮೀಜಿ, ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ತ್ಯಾಗರಾಜು, ಶಾಂತಲ, ಅನುಸೂಯ, ತಾಪಂ ಅಧ್ಯಕ್ಷೆ ಸುಮಲತ, ಎಸಿ ವಿ.ಆರ್.ಶೈಲಜಾ, ತಹಶೀಲ್ದಾರ್ ಪ್ರಮೋದ್ ಎಲ್. ಪಾಟಿಲ್ ಸೇರಿದಂತೆ ಎಲ್ಲಾ ತಾಪಂ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ರೇಷ್ಮೆ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ರಾಸುಗಳಿಗೆ ಬಹುಮಾನ: ಜಾತ್ರೆಯಲ್ಲಿ ಭಾಗವಹಿಸುವ ಅತ್ಯುತ್ತಮ ರಾಸುಗಳಿಗೆ ಮಾ.11ರಂದು ಚಿನ್ನದ ಬಹುಮಾನ ನೀಡಲಾಗುವುದು. ಮೂರು ವಿಭಾಗಗಳಲ್ಲಿ 45ಕ್ಕೂ ಅಧಿಕ ಜೋಡಿಗಳಿಗೆ ಚಿನ್ನದ ಬಹುಮಾನವನ್ನು ನೀಡಲು ಜಾತ್ರಾ ಸಮಿತಿ ಸಿದ್ಧತೆ ಮಾಡಿಕೊಂಡಿದೆ.

11ಕ್ಕೆ ರಥ, 12ಕ್ಕೆ ತೆಪ್ಪೋತ್ಸವ: ಜಾತ್ರಾಮಹೋತ್ಸವದಲ್ಲಿ ಮಾ.11ರಂದು ಸಿದ್ದಲಿಂಗೇಶ್ವರ ರಥೋತ್ಸವ ನಡೆಯಲಿದೆ. ಮಾ.12ರಂದು ತೆಪ್ಪೋತ್ಸವ ನಡೆಯಲಿದೆ. 5 ವರ್ಷದ ಬಳಿಕ ತೆಪ್ಪೋತ್ಸವ ನಡೆಸಲಾಗುತ್ತಿದೆ ಎಂದು ಜಾತ್ರಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

Translate »