- ‘ಸೇವಾ ಸಿಂಧು’, ‘ಸಂಪ್ರದಾನ’ ಯೋಜನೆಗೆ ಚಾಲನೆ
- ಒಂದರಲ್ಲಿ ಪ್ರಮಾಣಪತ್ರ, ಮತ್ತೊಂದರಲ್ಲಿ ದಾನ ನೀಡುವವರಿಗೆ ದಾರಿ
ಬೆಂಗಳೂರು: ಆನ್‍ಲೈನ್ ಮೂಲಕ ತ್ವರಿತ ವಾಗಿ ಸರ್ಕಾರಿ ಶಿಕ್ಷಣ ಸೇವೆಯನ್ನು ಪಡೆಯುವ ‘ಸೇವಾ ಸಿಂಧು ಯೋಜನೆ’ ಹಾಗೂ ಸರ್ಕಾರಿ ಕಾಲೇಜುಗಳಿಗೆ ದಾನ ನೀಡಲು ಅನುಕೂಲವಾಗುವಂತೆ ‘ಸಂಪ್ರದಾನ’ ಎಂಬ ಇ-ಪೋರ್ಟಲ್‍ಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರಿ ಸೇವೆಗಳಿಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೇವೆ ಪಡೆಯುವ ಅವ ಕಾಶ ಕಲ್ಪಿಸಿ, ರಾಜ್ಯ ಸರ್ಕಾರ ‘ಸೇವಾ ಸಿಂಧು ಯೋಜನೆ’ ಯನ್ನು ಜಾರಿಗೆ ತಂದಿದೆ ಎಂದರು. ಸೇವಾ ಸಿಂಧು ಯೋಜನೆ ಯಡಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿ ಯಾವ ಹಂತದಲ್ಲಿದೆ, ಯಾರ ಬಳಿ ಇದೆ, ಯಾವ ಕ್ರಮ ಕೈಗೊಳ್ಳ ಲಾಗಿದೆ ಎಂಬುದನ್ನು ಆನ್‍ಲೈನ್‍ನಲ್ಲೇ ಪತ್ತೆ ಹಚ್ಚಬಹುದು. ಇದು ಅತ್ಯಂತ ಜನಸ್ನೇಹಿ , ಪಾರದರ್ಶಕ ವ್ಯವಸ್ಥೆಯಾಗಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ 415 ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಪ್ರವೇಶಾತಿ ಸಾರಾಂಶ, ವ್ಯಾಸಂಗ ಪ್ರಮಾಣ ಪತ್ರ, ಗ್ರಂಥಾಲಯ (ನೋ ಡ್ಯೂ ಸರ್ಟಿ ಫಿಕೇಟ್) ಹಾಗೂ ತಾತ್ಕಾಲಿಕ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು. ತಾಂತ್ರಿಕ ಶಿಕ್ಷಣ ಇಲಾಖೆಯ 83 ಪಾಲಿಟೆಕ್ನಿಕ್‍ಗಳಲ್ಲಿ ಸೇವಾ ಸಿಂಧು ಯೋಜನೆ ಯಡಿ ವಿದ್ಯಾರ್ಥಿಗಳಿಗೆ ಡಿಪೆÇ್ಲಮಾ ಪ್ರಮಾಣ ಪತ್ರ, ಡಿಪೆÇ್ಲಮಾ ಅಂಕಪಟ್ಟಿ, ಅಂಕಪಟ್ಟಿ ತಿದ್ದುಪಡಿ, ಅರ್ಹತಾ ಪ್ರಮಾಣ ಪತ್ರ, ವಲಸೆ ಪ್ರಮಾಣಪತ್ರ, ಪಠ್ಯಕ್ರಮ ದೃಢೀಕರಿಸುವುದು, ಅಂಕಪಟ್ಟಿ ಗಳ ನೈಜತೆ ಪ್ರಮಾಣಪತ್ರ, ಉತ್ತರ ಪತ್ರಿಕೆಗಳ ಫೆÇೀಟೋ ಪ್ರತಿ, ಮರುಮೌಲ್ಯಮಾಪನ ಹಾಗೂ ಡ್ಯೂಪ್ಲಿಕೇಟ್ ಅಂಕಪಟ್ಟಿ ನೀಡುವ ಸೇವೆಯನ್ನು ಪಡೆಯಬಹುದಾಗಿದೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಈ ಯೋಜನೆಯಡಿ, ಪದವಿ ಪ್ರಮಾಣ ಪತ್ರ, ಅಂಕಪಟ್ಟಿ ನೈಜತೆ ಪ್ರಮಾಣ ಪತ್ರ, ವಲಸೆ ಪ್ರಮಾಣ ಪತ್ರ, ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಪಾಲಿಟ್ನೆಕಿಕ್ ಕಾಲೇಜುಗಳಲ್ಲಿ ಮೂಲ ಸೌಕರ್ಯವನ್ನು ನಾಗರಿಕ ರಿಂದ ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಸಂಪ್ರದಾನ ಇ-ಪೋರ್ಟಲ್ ಪ್ರಾರಂಭಿಸಲಾಗಿದೆ. ಹಳೆಯ ವಿದ್ಯಾರ್ಥಿಗಳು ಕಾಪೆರ್Çೀರೇಟ್ ಕಂಪನಿಗಳು, ಸರ್ಕಾರೇತರ ಸಂಸ್ಥೆಗಳು, ದಾನಿಗಳು ಹಣ, ಜಮೀನು, ಕಟ್ಟಡ, ಪ್ರಯೋಗಾಲಯ ಉಪಕರಣ, ಪುಸ್ತಕ, ಕಂಪ್ಯೂಟರ್, ಮತ್ತಿತರ ವಸ್ತುಗಳನ್ನು ದಾನ ಮಾಡಲು ಇಚ್ಛಿಸಿದ್ದಲ್ಲಿ, ‘ಸಂಪ್ರದಾನ’ ಮೂಲಕ ಕೊಡುಗೆಗಳನ್ನು ನೀಡಬಹುದಾಗಿದೆ. ದಾನ ಮಾಡಿದವರಿಗೆ ಸೆಕ್ಷನ್ 80ಜಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಸೌಲಭ್ಯವೂ ದೊರೆಯುತ್ತದೆ. ಅಲ್ಲದೆ ಸ್ವೀಕೃತಿ ಪತ್ರ, ಪ್ರಶಂಸನಾ ಪತ್ರ ಇ-ಮೇಲ್ ಮೂಲಕ ಒದಗಿಸುವುದಲ್ಲದೆ ಇ-ಪೋರ್ಟಲ್ ನಲ್ಲೂ ಪ್ರದರ್ಶಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಖಾಸಗಿ ಇಂಜಿನಿಯರಿಂಗ್ ಕಾಲೇಜು ಶುಲ್ಕ ಶೇ.10 ಹೆಚ್ಚಳ
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದರು.
ಕಾಮೆಡ್-ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜು ಗಳ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾಪವಾಗಿತ್ತು. ಆದರೆ ನ್ಯಾ. ಶೈಲೇಂದ್ರಕುಮಾರ್ ನೇತೃತ್ವದ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ನಿಗದಿ ಸಮಿತಿ ಶೇ.8 ರಷ್ಟು ಹೆಚ್ಚಳಕ್ಕೆ ಸೀಮಿತಗೊಳಿಸಿತ್ತು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
ಆದರೆ ಸರ್ಕಾರಿ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಶುಲ್ಕ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ ಎಂದರು. ಮೊದಲನೇ ಸ್ಲ್ಯಾಬ್‍ನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಸೀಟುಗಳಿಗೆ 2018-19ನೇ ಸಾಲಿನಲ್ಲಿ 53,460 ರೂ. ನಿಗದಿ ಯಾಗಿತ್ತು. ಅದನ್ನು 2019-20ನೇ ಸಾಲಿಗೆ 58,800 ರೂ.ಗೆ ಪರಿಷ್ಕರಿಸಲಾಗಿದೆ. 2ನೇ ಸ್ಲ್ಯಾಬ್ 2018-19ನೇ ಸಾಲಿನಲ್ಲಿ 59,400ರೂ. ಇದ್ದ ಶುಲ್ಕವನ್ನು 65,340 ರೂ.ಗೆ ಪರಿಷ್ಕರಿಸ ಲಾಗಿದೆ. ಹಾಗೆಯೇ ಕಾಮೆಡ್-ಕೆ ಸೀಟುಗಳನ್ನು ಮೊದಲ ಸ್ಲ್ಯಾಬ್‍ನಲ್ಲಿ 2018-19ರಲ್ಲಿ 1,30,680 ರೂ. ಶುಲ್ಕವನ್ನು 1,43,748 ರೂ.ಗೆ ಹೆಚ್ಚಿಸಲಾಗಿದೆ. 2ನೇ ಸ್ಲ್ಯಾಬ್‍ನಲ್ಲಿ 1,83,600 ರೂ. ಇದ್ದ ಶುಲ್ಕವನ್ನು 2,01,960 ರೂ.ಗೆ ಹೆಚ್ಚಿಸಲು ತೀರ್ಮಾ ನಿಸಲಾಗಿದೆ. ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡವಿಲ್ಲ. ಆದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇಂಜಿನಿಯ ರಿಂಗ್ ಕೋರ್ಸ್‍ಗಳ ಪ್ರವೇಶಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶುಲ್ಕ ನಿಗದಿಪಡಿಸಲಾಗಿದೆ. ಸದ್ಯಕ್ಕೆ ಯಾವುದೇ ಶುಲ್ಕ ನಿಗದಿ ಸಮಿತಿಗಳನ್ನು ರಚಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.