ಮನೆ ಮೇಲೆ ದಾಳಿ; ಸ್ಪೋಟಕ ವಶ
ಮಂಡ್ಯ

ಮನೆ ಮೇಲೆ ದಾಳಿ; ಸ್ಪೋಟಕ ವಶ

March 14, 2019

ಶ್ರೀರಂಗಪಟ್ಟಣ: ತಾಲೂಕಿನ ಕಡೇನಹಳ್ಳಿ ಶೆಡ್ ಗ್ರಾಮದ ಮನೆಯೊಂದರ ಮೇಲೆ ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ಶ್ರೀರಂಗ ಪಟ್ಟಣ ಪೊಲೀಸರು ಜಂಟಿ ದಾಳಿ ನಡೆಸಿ, ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಪುನೀತ್ ಮತ್ತು ಜಿಲ್ಲಾ ಅಪರಾಧ ದಳದ ಪೊಲೀಸರು ಗ್ರಾಮದ ಪಾಪಮ್ಮ ಎಂಬವರ ಮನೆ ಮೇಲೆ ದಾಳಿ ನಡೆಸಿ ಮೂರು ಸಾವಿರಕ್ಕೂ ಹೆಚ್ಚು ಡಿಟೋನೇಟರ್‍ಗಳು ಸ್ಪೋಟಕ್ಕೆ ಬಳಸುವ 8 ಚೀಲ ಉಪ್ಪು, ಮತ್ತು 12 ಬಂಡಲ್ ವಯರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪಾಪಮ್ಮ ಮತ್ತು ಅವರಿಗೆ ಸ್ಪೋಟಕ ಸರಬರಾಜು ಮಾಡುತ್ತಿದ್ದ ಶ್ರೀನಿವಾಸ್ ಎಂಬವರ ವಿರುದ್ಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »