ತೆಪ್ಪೋತ್ಸವ ಮೂಲಕ ಬೇಬಿ ಬೆಟ್ಟದ ಜಾತ್ರೆಗೆ ತೆರೆ
ಮಂಡ್ಯ

ತೆಪ್ಪೋತ್ಸವ ಮೂಲಕ ಬೇಬಿ ಬೆಟ್ಟದ ಜಾತ್ರೆಗೆ ತೆರೆ

March 14, 2019

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದಲ್ಲಿ ನಡೆದ ಬೃಹತ್ ದನಗಳ ಜಾತ್ರಾ ಮಹೋತ್ಸವು ಮಂಗಳವಾರ ಶ್ರೀಸಿದ್ದೇಶ್ವರ-ಮಹದೇಶ್ವರಸ್ವಾಮಿ ದೇವರ ತೆಪ್ಪೋತ್ಸವ ನಡೆಸುವ ಮೂಲಕ ತೆರೆಬಿದ್ದಿತ್ತು.

ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಶ್ರೀರಾಮಯೋಗಿ ಶ್ವರ ಮಠದಿಂದ ಶ್ರೀಸಿದ್ದೇಶ್ವರ-ಮಹದೇಶ್ವರಸ್ವಾಮಿ ದೇವರುಗಳ ಮೂರ್ತಿಯನ್ನು ಮಠದ ಪೀಠಾಧ್ಯಕ್ಷ ಶ್ರೀಗುರುಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಸುವ ಕೆರೆಯ ಬಳಿ ತರಲಾಯಿತು. ಬಳಿಕ ಸಂಪ್ರದಾಯದಂತೆ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಶ್ರೀಸಿದ್ದೇಶ್ವರ-ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ತೆಪ್ಪದಲ್ಲಿ ಇಡಲಾಯಿತು. ಕೆರೆಯಲ್ಲಿ ಮೂರು ತೆಪ್ಪಗಳನ್ನು ಸಿದ್ದಪಡಿಸಲಾಗಿತ್ತು. ಒಂದು ತೆಪ್ಪದಲ್ಲಿ ದೇವರ ಮೂರ್ತಿಗಳು ಹಾಗೂ ಸ್ವಾಮೀಜಿಗಳನ್ನು ಕೂರಿಸಲಾ ಯಿತು. ಮತ್ತೊಂದರಲ್ಲಿ ವಾದ್ಯವೃಂದದವರು ಮತ್ತೊಂದು ತೆಪ್ಪದಲ್ಲಿ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಾಪಂ ಇಓ ಆರ್.ಪಿ.ಮಹೇಶ್, ಉಪತಹಶೀಲ್ದಾರ್ ಸುಧಾಕರ್ ಹಾಗೂ ಜಾತ್ರಾ ಸಮಿತಿ ಸದಸ್ಯ ಶಿಂಡಭೋಗನಹಳ್ಳಿ ನಾಗಣ್ಣ ಕುಳಿತು ದೇವರ ತೆಪ್ಪೋತ್ಸವದೊಂದಿಗೆ ಸಾಗಿದರು.

ಸನ್ಮಾನ ಸಮಾರಂಭ: ಒಂಬತ್ತು ದಿನಗಳ ಕಾಲ ನಡೆಸಲಾದ ಬೇಬಿಬೆಟ್ಟದ ಭಾರಿ ದನಗಳ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಅಧಿಕಾರಿಗಳು, ಮುಖಂಡರು, ಪಿಡಿಓಗಳು, ವಾಟರ್‍ಮ್ಯಾನ್ ಗಳನ್ನು ಜಾತ್ರಾ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂಧಿಸಲಾಯಿತು.

ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕಳೆದ ಒಂಬತ್ತು ದಿನಗಳ ಕಾಲ ನಡೆದ ಬೇಬಿಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವವು ಈ ಬಾರಿ ಬಹಳ ಅದ್ದೂರಿಯಾಗಿ ನಡೆಯಿತು. ಈ ವರ್ಷ ಜಾತ್ರೆಯಲ್ಲಿ ವಿಶೇಷವಾಗಿ ಕಲ್ಯಾಣೋತ್ಸವ, ಬೇಬಿಬೆಟ್ಟಕ್ಕೆ ವಿವಿಧ ಬಗೆಯ ವಿದ್ಯುತ್ ಅಲಂಕಾರ, ತೆಪ್ಪೋತ್ಸವ ಹಾಗೂ ರಾಜ್ಯಮಟ್ಟದ ವಿವಿಧ ಕ್ರೀಡೆಗಳನ್ನು ನಡೆಸುವ ಮೂಲಕ ಭಕ್ತರು, ಸಾರ್ವಜನಿಕ ರನ್ನು ಆಕರ್ಷಿಸಲಾಯಿತು. ಮುಂದಿನ ದಿನಗಳಲ್ಲಿ ಬೇಬಿಬೆಟ್ಟದ ಜಾತ್ರಾ ಮಹೋತ್ಸವವು ಇನ್ನೂ ಅದ್ದೂರಿಯಾಗಿ ನಡೆಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಜಾತ್ರೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ನಾಗೇಶ್, ಪಿಡಿಓಗಳಾದ ನಾರಾಯಣ್, ಮಹೇಶ್, ಸ್ವಾಮೀಗೌಡ, ತಮ್ಮಣ್ಣಗೌಡ, ರಾಜು, ಕುಮಾರ, ತಾಪಂ ಸ್ವಾಮೀಗೌಡ ಸೇರಿದಂತೆ ಹಲವರು ಹಾಜರಿದ್ದರು.

Translate »