ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ
ಕೊಡಗು

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ

March 14, 2019

ಮಡಿಕೇರಿ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಇನ್ನೂ ಅವಕಾಶವಿದ್ದು, ಇದುವರೆಗೆ ಚುನಾವಣಾ ಮತದಾರರ ಗುರುತಿನ ಚೀಟಿ ಪಡೆಯದಿರುವ 18 ವರ್ಷ ಪೂರ್ಣಗೊಂಡವರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿ ಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆನ್‍ಲೈನ್ ಮೂಲಕ ಅಥವಾ ಅರ್ಜಿ ಸಲ್ಲಿಸಿ ಮತ ದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಬಹುದಾಗಿದೆ. ಆದರೆ ಮತದಾರರ ಪಟ್ಟಿಯಿಂದ ತೆಗೆಯಲು ಅಥವಾ ಬದ ಲಾಯಿಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೆ ಪಾಸ್‍ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿ ವಿತರಿಸಿರುವ ಭಾವಚಿತ್ರ ವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ಎನ್‍ಜಿಆರ್ ಮತ್ತು ಎನ್‍ಪಿಆರ್ ಮೂಲಕ ನೀಡಿರುವ ಸ್ಮಾರ್ಟ್‍ಕಾರ್ಡ್, ಉದ್ಯೋಗ ಖಾತ್ರಿ ಗುರುತಿನ ಚೀಟಿ(ಎಂಎನ್‍ಆರ್‍ಇ ಜಿಎ ಜಾಬ್‍ಕಾರ್ಡ್), ಕಾರ್ಮಿಕ ಸಚಿ ವಾಲಯದ ಯೋಜನೆಯಡಿ ವಿತರಿಸಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಭಾವ ಚಿತ್ರವಿರುವ ಪೆನ್ಷನ್ ದಾಖಲೆಗಳು, ಎಂ.ಪಿ, ಎಂಎಲ್‍ಎ ಮತ್ತು ಎಂಎಲ್‍ಸಿ ರವರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು ಹಾಗೂ ಆಧಾರ್ ಕಾರ್ಡ್ ಹೀಗೆ ಮಾನ್ಯತೆ ಪಡೆದ 11 ಬಗೆಯ ಗುರುತಿನ ಚೀಟಿಯನ್ನು ಹಾಜರುಪಡಿಸಿ, ಮತದಾನ ಮಾಡಬ ಹುದಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ವಿವರಿಸಿದರು.

ಲೋಕಸಭಾ ಚುನಾವಣೆ ಸಂಬಂಧ ಮಾರ್ಚ್ 19 ರಂದು ಚುನಾವಣಾ ಅಧಿ ಸೂಚನೆಯನ್ನು ಚುನಾವಣಾಧಿಕಾರಿ ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಮಾರ್ಚ್ 26 ಕಡೆ ದಿನವಾಗಿದೆ. ನಾಮ ಪತ್ರ ಪರಿಶೀಲನಾ ಕಾರ್ಯವು ಮಾರ್ಚ್ 27 ರಂದು ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 29 ಕಡೆ ದಿನವಾ ಗಿದೆ. ಏಪ್ರಿಲ್ 18 ರಂದು ಮತದಾನ ನಡೆಯಲಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಅಂತರರಾಜ್ಯ ಮೂರು ಚೆಕ್‍ಪೋಸ್ಟ್‍ಗಳು ಸೇರಿದಂತೆ ಒಟ್ಟು 14 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾ ಗಿದ್ದು, ಕೊಡಗು ಜಿಲ್ಲೆಗೆ ಬರುವ ವಾಹನ ಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

50 ಸಾವಿರಕ್ಕೂ ಹೆಚ್ಚು ಹಣ ತೆಗೆದು ಕೊಂಡು ಹೋಗುವವರು ಅಗತ್ಯ ದಾಖಲೆ ಗಳನ್ನು ಇಟ್ಟುಕೊಳ್ಳಬೇಕು. 50 ಸಾವಿರದಿಂದ 10 ಲಕ್ಷ ರೂ.ವರೆಗೆ ಬ್ಯಾಂಕ್‍ನಲ್ಲಿ ಚಲಾವಣೆಯಾಗುವ ಬಗ್ಗೆ ಆದಾಯ ತೆರಿಗೆ ಇಲಾ ಖೆಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಈಗಾಗಲೇ ವೀಡಿಯೋ ವಿವಿಂಗ್ ತಂಡ, ಪ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಸ್ಟಿಕ್ ಸರ್ವೆ ಲೆನ್ಸ್ ತಂಡ, ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವಿಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಜಾಗೃತಿ ಅಭಿಯಾನ ನಡೆ ಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ 543 ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ರ್ಯಾಂಪ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ಮತ್ತಿತರ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ. ಬಾಕಿ ಇರುವ ಕಡೆ ಒಂದು ವಾರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅನೀಸ್ ಕಣ್ಮಣಿ ಜಾಯ್ ನುಡಿದರು.

ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ಮಡಿಕೇರಿ ಮತ್ತು ವಿರಾಜ ಪೇಟೆಯಲ್ಲಿ ನಡೆಯಲಿದ್ದು, ಮತ ಎಣಿಕೆಯು ಮೈಸೂರಿನಲ್ಲಿ ನಡೆಯಲಿದೆ. ರಾಜಕೀಯ ಪಕ್ಷಗಳು ಯಾವುದೇ ರೀತಿಯ ಸಭೆ ಸಮಾರಂಭಗಳಿಗೆ ಚುನಾವಣಾ ಅಧಿಕಾರಿಯಿಂದ ಅನುಮತಿ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಅನು ಮತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮದುವೆ, ಹುಟ್ಟಿದಹಬ್ಬ ಆಚರಣೆಗೆ ಅನು ಮತಿ ಪಡೆಯುವ ಅಗತ್ಯವಿಲ್ಲ. ಆದರೆ ಲಿಕ್ಕರ್ ಸಂಬಂಧ ಅನುಮತಿ ಪಡೆಯ ಬೇಕಿದೆ. ಕಾರ್ಯಕ್ರಮ ಸಂದರ್ಭದಲ್ಲಿ ಮತ ಪ್ರಚಾರ ಮಾಡುವಂತಿಲ್ಲ, ಧರ್ಮ, ಜಾತಿ ಹೆಸರಿನಲ್ಲಿ ಮತ ಕೇಳುವುದು, ಹಣ ಹಂಚುವಂತಿಲ್ಲ್ಲ ಎಂದು ಅವರು ಹೇಳಿ ದರು. ಜಾಹೀರಾತುಗಳಿಗೆ ಸಂಬಂಧಿಸಿದಂತೆ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಬಾನುಲಿ, ಸಾಮಾಜಿಕ ಮಾಧ್ಯಮಗಳು, ಪ್ರಚಾರ/ಪ್ರಸಾರ ಸಂಬಂಧ ಚುನಾವಣಾ ಧಿಕಾರಿಯವರಿಂದ ಪೂರ್ವಾನುಮತಿ ಪಡೆಯಬೇಕಿದೆ ಎಂದು ತಿಳಿಸಿದರು.

ಈಗಾಗಲೇ ಅಂತರ ರಾಜ್ಯ ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಸರಗೋಡಿನಲ್ಲಿ ಸಭೆ ನಡೆದಿದೆ. ಹಾಗೆಯೇ ವಯನಾಡು ಜಿಲ್ಲೆಯಲ್ಲಿ ಮತ್ತೊಂದು ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಲೋಕಸಭೆ ಚುನಾವಣೆಯನ್ನು ಶಾಂತಿ ಯುತವಾಗಿ ನಡೆಸಲು ಎಲ್ಲಾ ರೀತಿಯ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಜಿಪಂ ಸಿಇಒ ಹಾಗೂ ಮತದಾರರ ಶಿಕ್ಷಣ ಮತ್ತು ಸಹ ಭಾಗಿತ್ವ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿ ಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್ ಇತರರು ಇದ್ದರು.

ಕೊಡಗು ಜಿಲ್ಲೆಯಲ್ಲಿ ಒಟ್ಟು 27,356 ಬಂದೂಕುಗಳಿದ್ದು, ಈ ಪೈಕಿ 23 ಸಾವಿರ ಬಂದೂಕುಗಳನ್ನು ಚುನಾವಣಾ ನೀತಿ ಸಂಹಿತೆಯಿಂದ ಹೊರ ಗಿಡಲಾಗಿದೆ. 23 ಸಾವಿರ ಬಂದೂಕುಗಳು ಸಂವಿಧಾನಾತ್ಮಕ ಮಾನ್ಯತೆ ಹೊಂದಿರುವ ಜಮ್ಮಾ ಹಿಡುವಳಿ ಮತ್ತು ಕೊಡವ ಜನಾಂಗಕ್ಕೆ ಸೇರಿದ ಬಂದೂಕುಗಳಾಗಿವೆ. ಇನ್ನುಳಿದ 4 ಸಾವಿರಕ್ಕೂ ಹೆಚ್ಚು ಪರವಾನಗಿ ಹೊಂದಿರುವ ಬಂದೂಕುಗಳು ಜಿಲ್ಲೆಯಲ್ಲಿವೆ. ಮಾನ್ಯತೆ ಹೊಂದಿದ ಬಂದೂಕುಗಳ ಪೈಕಿ ಕಾನೂನು ವಿರೋಧಿ ಚಟುವಟಿಕೆ, ರೌಡಿ ಶೀಟರ್, ಕ್ರಿಮಿನಲ್ ಅಪರಾಧ ಸೇರಿದಂತೆ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿ ಯಾಗಿದ್ದರೆ ಅಂತಹ ಬಂದೂಕುಗಳನ್ನು ಕೂಡ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕಿದೆ. ಈಗಾಗಲೇ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಂದೂಕು ಠೇವಣಿ ಮಾಡಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಈಗಾಗಲೆ ಪ್ರಕಟಣೆಗಳನ್ನು ಕೂಡ ಹೊರಡಿಸಲಾಗಿದೆ.

Translate »