ಸುಮಲತಾ ಪರ ಅಭಿಮಾನಿಗಳ ಬೈಕ್ ರ್ಯಾಲಿ
ಮಂಡ್ಯ

ಸುಮಲತಾ ಪರ ಅಭಿಮಾನಿಗಳ ಬೈಕ್ ರ್ಯಾಲಿ

March 21, 2019

ಮದ್ದೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುತ್ತಿ ರುವ ಹಿನ್ನೆಲೆಯಲ್ಲಿ ಪಟ್ಟಣದಿಂದ ನೂರಾರು ಬೈಕ್‍ಗಳಲ್ಲಿ ಅಂಬರೀಶ್ ಅಭಿಮಾನಿಗಳು ಹಾಗೂ ಸ್ವಾಭಿಮಾನಿ ಪಡೆಯ ಯುಕವರು ಮಂಡ್ಯಕ್ಕೆ ತೆರಳಿದರು.

ಇದಕ್ಕೂ ಮುನ್ನ ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಬೈಕ್ ಜಾಥಾ ನಡೆಸಿ, ಮಂಡ್ಯಕ್ಕೆ ಬೈಕ್‍ಗಳಲ್ಲಿ ಹೊರಟರು. ಸುಮಲತಾ ಅವರನ್ನು ಬೆಂಬಲಿಸಲು ಸ್ವಾಭಿಮಾನ ಪಡೆಯ ಯುವಕರು ಅಂಬರೀಶ್ ಪರವಾಗಿ ಘೋಷಣೆಗಳನ್ನು ಕೂಗಿದರು.

ತಾಪಂ ಸದಸ್ಯ ಚಲುವರಾಜ್ ಮಾತ ನಾಡಿ, ಸ್ವಾಭಿಮಾನಿ ಪಡೆ ಯುವಕರು ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿ ಸ್ವಯಂಪ್ರೇರಿತರಾಗಿ ಮದ್ದೂರು ತಾಲೂಕಿನಾದ್ಯಂತ ಹೊರಟಿದ್ದೇವೆ, ಸುಮಲತಾ ಅವರ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಅಮ ರ್ಬಾಬು, ಮುಖಂಡರಾದ ಅರುಣ್, ವಿ.ಕೆ.ಜಗದೀಶ್, ನಂದೀಶ, ರಾಮು, ಸತೀಶ ಗೊರವನಹಳ್ಳಿ ರಾಘು, ಸಂದೀಪ, ಪ್ರಶಾಂತ ಸೇರಿದಂತೆ ಇತರರು ಇದ್ದರು.

Translate »