ಬೆಂಗಳೂರು: ಕೊಡಗಿನ ಇಬ್ಬನಿ ರೆಸಾರ್ಟ್‍ನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ರಾಂತಿ ಪಡೆದರೋ ಅಥವಾ ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ತಂತ್ರಗಾರಿಕೆ ಅಸ್ತ್ರ ರೂಪಿಸಿದರೋ ಎಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ನಡುಕ ಆರಂಭವಾಗಿದೆ. ಈ ವಾಸ್ತವ್ಯದ ನಂತರವೇ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಸಂಸದ ಕುಪೇಂದ್ರ ರೆಡ್ಡಿ ಮತ್ತು ಕುಮಾರಸ್ವಾಮಿ ಬೆಂಬಲಿಗರು, ಕಾಂಗ್ರೆಸ್ ಮತ್ತು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಮಾತಿನ ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ. ಕಳೆದ 1 ವರ್ಷದ ಮೈತ್ರಿ ಆಡಳಿತಾವಧಿಯಲ್ಲಿ ತಮ್ಮ ನಾಯಕ ಕುಮಾರಸ್ವಾಮಿ ವಿರುದ್ಧ ಹಾದಿಬೀದಿಯಲ್ಲಿ ಕಾಂಗ್ರೆಸ್‍ನ…
ಉದ್ಘಾಟನೆಗೊಂಡು ವರ್ಷವಾದರೂ ಕಾರ್ಯಾರಂಭವಾಗದ ಮೈಸೂರು ಹೊಸ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ
May 14, 2019ಮೈಸೂರು: ಮಹದುದ್ದೇಶ ಹಾಗೂ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸ ಲಾದ ಬಹುಕೋಟಿ ವೆಚ್ಚದ ಮೈಸೂರು ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ ಬೃಹತ್ ಕಟ್ಟಡ ಉದ್ಘಾಟನೆಗೊಂಡು 14 ತಿಂಗಳಾದರೂ, ಬಳಕೆಯಾಗದೇ ಖಾಲಿ ಬಿದ್ದಿದೆ. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಾಗಿದ್ದಾಗ ತವರು ಜಿಲ್ಲೆಗೆ ಸುಸ ಜ್ಜಿತ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣ ಕಟ್ಟಡವನ್ನು ನಿರ್ಮಿಸಿ ಮೈಸೂರಿನ ಪಾರಂ ಪರಿಕ ಕಟ್ಟಡದಲ್ಲಿರುವ ಹಾಲಿ ಜಿಲ್ಲಾಧಿ ಕಾರಿ ಕಚೇರಿ ಹಾಗೂ ಮೈಸೂರಿನ ವಿವಿಧೆಡೆ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ನಾನಾ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಿ…
ಮೇ 23ರ ಬಳಿಕ ಬಿಜೆಪಿ ಶಾಸಕರೇ ಕಾಂಗ್ರೆಸ್ ಸೇರಲಿದ್ದಾರೆ
May 14, 2019ಕಲಬುರಗಿ: ಬಿಜೆಪಿ ನಾಯ ಕರು ನಿರೀಕ್ಷಿಸಿದಂತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಬದಲಾಗಿ ಬಿಜೆಪಿ ಶಾಸಕರೇ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೋಮವಾರ ಹೊಸ ಬಾಂಬ್ ಸಿಡಿಸಿದ್ದಾರೆ. ಇಂದು ಕಲಬುರಗಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಲಿದ್ದು, ಮೇ 23ರ ಬಳಿಕ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಯಿಲ್ಲ. ಮೈತ್ರಿ ಸರ್ಕಾರ ಐದು ವರ್ಷ ಅವಧಿ…
ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ಸ್ಥಗಿತ
May 14, 2019ಮಂಡ್ಯ: ಭಾರೀ ಮಳೆ, ಬಿರುಗಾಳಿಗೆ ವಿದ್ಯುತ್ ತಂತಿ ತುಂಡರಿಸಿ ರೈಲ್ವೆ ಹಳಿ ಮೇಲೆ ಬಿದ್ದ ಪರಿಣಾಮ ಇಂದು ಸಂಜೆ ಸುಮಾರು 1 ಗಂಟೆ ಕಾಲ ಮೈಸೂರು-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿತ್ತು. ಮದ್ದೂರು-ಚನ್ನಪಟ್ಟಣ ನಡುವೆ ವಿದ್ಯುತ್ ತಂತಿ ಹಳಿ ಮೇಲೆ ಬಿದ್ದ ಪರಿ ಣಾಮವಾಗಿ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಎಲ್ಲಾ ರೈಲುಗಳನ್ನು ಅಲ್ಲಲ್ಲೇ ನಿಲ್ಲಿಸಲಾಯಿತು. ಚನ್ನಪಟ್ಟಣ, ಮದ್ದೂರು ಮುಂತಾದ ನಿಲ್ದಾಣಗಳಲ್ಲಿ ಬೆಂಗ ಳೂರು, ಮೈಸೂರಿಗೆ ತೆರಳಬೇಕಾಗಿದ್ದ ರೈಲುಗಳನ್ನು ನಿಲ್ಲಿಸಲಾಗಿತ್ತು. ಮದ್ದೂರಿಗೆ 7.30ಕ್ಕೆ ಬರಬೇಕಿದ್ದ ಚಾಮುಂಡಿ ಎಕ್ಸ್‍ಪ್ರೆಸ್ ರೈಲು…
ಕೇಂದ್ರ, ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಸಾಕಷ್ಟು ಅಂತರ
May 14, 2019ಮೈಸೂರು: ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಮತ್ತು ಅಧಿಕಾರಿಗಳಿಗೆ ನೀಡು ತ್ತಿರುವ ವೇತನದ (1:10)ಅಂತರ ಸಾಕಷ್ಟು ಹೆಚ್ಚಾಗಿದೆ. ಆದರೆ, ಈ ಅಂತರ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ಅಧ್ಯಯನ ನಡೆಸಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗ ವಾರ ಅಭಿಪ್ರಾಯಪಟ್ಟರು. ಮೈಸೂರು ಕುವೆಂಪುನಗರದ ಗಾನ ಭಾರತೀ ಸಭಾಂಗಣದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಮಡಿ ಕೇರಿ ಜಿಲ್ಲೆಗಳ ಪೊಲೀಸ್ ಇಲಾಖೆ ಗುಪ್ತ ವಾರ್ತೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ…
ಕೆಆರ್‍ಎಸ್ ರೈಲು ನಿಲ್ದಾಣ – ಸಾಗರಕಟ್ಟೆ ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರ ಪ್ರತಿಭಟನೆ
May 14, 2019ಮೈಸೂರು: ಕೆ.ಆರ್. ಸಾಗರ ರೈಲ್ವೆ ನಿಲ್ದಾಣದಿಂದ ಸಾಗರಕಟ್ಟೆವರೆಗೆ ಇರುವ ಟರ್ಕಿ ಟ್ರಾವೆಲ್ಸ್ ರೋಡ್ ತೀರಾ ಹಾಳಾಗಿದ್ದು, ದ್ವಿಚಕ್ರ ವಾಹನಗಳು ಸಹ ಸಂಚರಿಸಲಾಗದಷ್ಟು ಅಧ್ವಾನದಿಂದ ಕೂಡಿದೆ. ಈ ರಸ್ತೆಯನ್ನು ಅಗಲೀಕರಿಸಿ, ದುರಸ್ತಿ ಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಮೈಸೂರು ತಾಲೂಕು ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಇನ್ನಿತರರ ನೇತೃತ್ವದಲ್ಲಿ…
ಕ್ಷಯ ಮುಕ್ತ ಜಿಲ್ಲೆ ಯೋಜನೆಗೆ ಮೈಸೂರು ಆಯ್ಕೆ
May 14, 2019ಮೈಸೂರು: ಮೈಸೂರು ಜಿಲ್ಲೆ ಸೇರಿದಂತೆ ದೇಶದ 10 ಜಿಲ್ಲೆಗಳನ್ನು 2035ರೊಳಗೆ ಕ್ಷಯ ಮುಕ್ತ ಜಿಲ್ಲೆಯಾಗಿ ಮಾಡಲು ಆರ್‍ಎನ್‍ಟಿಸಿಪಿ ಯೋಜನೆಯಡಿ ಕಾರ್ಯಕ್ರಮ ರೂಪಿಸ ಲಾಗುತ್ತಿದ್ದು, ಜಿಲ್ಲೆಯ ಜನತೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪರಿಷ್ಕøತ ರಾಷ್ಟ್ರೀಯ ಕ್ಷಯ ನಿಯಂತ್ರಣ (ಆರ್‍ಎನ್‍ಟಿಸಿಪಿ) ಕಾರ್ಯ ಕ್ರಮದಡಿ `ಕ್ಷಯ ಮಕ್ತ ಜಿಲ್ಲೆ’ ಯೋಜನೆಗೆ ಕೇಂದ್ರ ಸÀರ್ಕಾರ ಮೈಸೂರು ಜಿಲ್ಲೆ ಸೇರಿ ದಂತೆ ದೇಶದ ಹತ್ತು ಜಿಲ್ಲೆಗಳನ್ನು…
ಸಂಗೀತ ಕ್ಷೇತ್ರಕ್ಕೆ ರಾಜಮನೆತನದವರ ಕೊಡುಗೆ ಅಪಾರ
May 14, 2019ಮೈಸೂರು: ಸಂಗೀತ ಕ್ಷೇತ್ರಕ್ಕೆ ರಾಜಮನೆತನ ದವರ ಕೊಡುಗೆ ಅಪಾರ, ಅಂದಿನ ಕಾಲದಲ್ಲಿ ರಾಜಮನೆ ತನದವರು ಸಂಗೀತ ವಿದ್ವಾಂಸರನ್ನು ಹಾಗೂ ಸಂಗೀತ ಪ್ರಿಯರನ್ನು ಅರಮನೆಗೆ ಕರೆಸಿ ಸಂಗೀತ ಕಛೇರಿ ನಡೆಸಿ ಬಿರುದುಗಳನ್ನು ನೀಡುತ್ತಿದ್ದದ್ದು ಅವಿಸ್ಮರಣೀಯ ಎಂದು ಶಾರದಾ ವಿಲಾಸ ಕಾಲೇಜಿನ ಕನ್ನಡ ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಅಭಿಪ್ರಾಯಪಟ್ಟರು. ಮೈಸೂರಿನ ವೀಣೆಶೇಷಣ್ಣ ಭವನದಲ್ಲಿ ಭಾನುವಾರ ನಡೆದ ಸ್ವರಾಲಯ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಗ ದಿಂದ ರೋಗ ಮುಕ್ತಿ ಎನ್ನುವಂತೆ ಸಂಗೀತವನ್ನು ಅಭ್ಯಸಿಸಿ, ಆಲಿಸುವುದರಿಂದ…
ಧಾತ್ರಿ-ದಿಯಾ ಸಹೋದರಿಯರಿಗೆ ಚೆಸ್‍ನಲ್ಲಿ ಭರ್ಜರಿ ಗೆಲುವು
May 14, 2019ಮೈಸೂರು: ಕರ್ನಾಟಕ ರಾಜ್ಯ ಮುಕ್ತ ರ್ಯಾಪಿಡ್ ಚದುರಂಗ ಸ್ಪರ್ಧೆಯಲ್ಲಿ ಮೈಸೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಚೆಸ್ ಪ್ರತಿಭೆಗಳಾದ ಧಾತ್ರಿ ಉಮೇಶ್ ಮತ್ತು ದಿಯಾ ಉಮೇಶ್ ಭರ್ಜರಿ ಗೆಲುವು ಸಾಧಿಸಿ ದ್ದಾರೆ. ಬೆಂಗಳೂರಿನ ವಿಡಿಯಾ ಪೂರ್ಣಪ್ರಜ್ಞ ದಲ್ಲಿ ನಡೆದ ರಾಜ್ಯ ಮಟ್ಟದ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸಹೋದರಿಯರಾದ ಧಾತ್ರಿ ಮತ್ತು ದಿಯಾ ಅತ್ಯುತ್ತಮ ಪ್ರದರ್ಶನ ನೀಡಿ ಕ್ರಮವಾಗಿ 13 ಮತ್ತು 7 ವರ್ಷದ ಒಳ ಗಿನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ತೀವ್ರ ಹಣಾಹಣಿ ಏರ್ಪಟ್ಟಿದ್ದ ಅಂತಿಮ ಸುತ್ತಿನಲ್ಲಿ…
ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ನೀರು ಸೋರಿಕೆ: ಸಾರ್ವಜನಿಕರಲ್ಲಿ ಆತಂಕ
May 14, 2019ಮೈಸೂರು: ಮೈಸೂರಿಗರ ನೆಚ್ಚಿನ ವಾಯು ವಿಹಾರ ತಾಣವೂ ಆಗಿರುವ ಪ್ರೇಕ್ಷಣಿಯ ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಬೋಗಾದಿ ರಸ್ತೆಯಲ್ಲಿರುವ ಮಾಚೀದೇವರ ದೇವಸ್ಥಾನದ ಎದುರಿಗೆ ಕೆರೆಯ ಏರಿ ಮಧ್ಯಭಾಗದಿಂದ ಮೂರ್ನಾಲ್ಕು ದಿನಗಳಿಂದ ನೀರು ಹರಿಯುತ್ತಿದ್ದು, ಇದರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿರಬಹುದೆಂಬ ಆತಂಕ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಆದರೆ ಏರಿಗೆ ಹೊಂದಿಕೊಂಡಂತಿರುವ ನೀರಿನ ಪೈಪ್ ಒಡೆದು ಹೀಗೆ ನೀರು ಸೋರಿಕೆಯಾಗುತ್ತಿದೆ ಎಂದು ನಿತ್ಯ ಇಲ್ಲಿಗೆ ವಾಯು ವಿಹಾರಕ್ಕೆ ಬರುವವರು ತಿಳಿಸಿದ್ದಾರೆ….