ಧಾತ್ರಿ-ದಿಯಾ ಸಹೋದರಿಯರಿಗೆ ಚೆಸ್‍ನಲ್ಲಿ ಭರ್ಜರಿ ಗೆಲುವು
ಮೈಸೂರು

ಧಾತ್ರಿ-ದಿಯಾ ಸಹೋದರಿಯರಿಗೆ ಚೆಸ್‍ನಲ್ಲಿ ಭರ್ಜರಿ ಗೆಲುವು

May 14, 2019

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ರ್ಯಾಪಿಡ್ ಚದುರಂಗ ಸ್ಪರ್ಧೆಯಲ್ಲಿ ಮೈಸೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಚೆಸ್ ಪ್ರತಿಭೆಗಳಾದ ಧಾತ್ರಿ ಉಮೇಶ್ ಮತ್ತು ದಿಯಾ ಉಮೇಶ್ ಭರ್ಜರಿ ಗೆಲುವು ಸಾಧಿಸಿ ದ್ದಾರೆ. ಬೆಂಗಳೂರಿನ ವಿಡಿಯಾ ಪೂರ್ಣಪ್ರಜ್ಞ ದಲ್ಲಿ ನಡೆದ ರಾಜ್ಯ ಮಟ್ಟದ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸಹೋದರಿಯರಾದ ಧಾತ್ರಿ ಮತ್ತು ದಿಯಾ ಅತ್ಯುತ್ತಮ ಪ್ರದರ್ಶನ ನೀಡಿ ಕ್ರಮವಾಗಿ 13 ಮತ್ತು 7 ವರ್ಷದ ಒಳ ಗಿನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ತೀವ್ರ ಹಣಾಹಣಿ ಏರ್ಪಟ್ಟಿದ್ದ ಅಂತಿಮ ಸುತ್ತಿನಲ್ಲಿ ಇಬ್ಬರೂ ಜಯ ದಾಖಲಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನೂರೈವತ್ತಕ್ಕೂ ಹೆಚ್ಚು ಪ್ರತಿಸ್ಪರ್ಧಿಗಳು ಕರ್ನಾ ಟಕದ ಮೂಲೆ ಮೂಲೆಯಿಂದ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಭರವಸೆಯ ಕ್ರೀಡಾಪಟುಗಳಾದ ಇವರು ಮೈಸೂರು ಚೆಸ್ ಸೆಂಟರ್‍ನಲ್ಲಿ ಸುರೇಶ್ ಮತ್ತು ಅರವಿಂದ ಶಾಸ್ತ್ರಿಯವರ ಮಾರ್ಗದರ್ಶನಲ್ಲಿ ಚದುರಂಗದ ಪಟ್ಟುಗಳನ್ನು ಕಲಿಯುತ್ತಿದ್ದಾರೆ.

7 ವರ್ಷದ ಪುಟ್ಟ ಪೋರಿ ದಿಯಾ ಉಮೇಶ್ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಅಲ್ಲದೆ ಮುಂದಿನ ತಿಂಗಳು 1ನೇ ತಾರೀಖಿನಿಂದ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆಯುವ 33ನೇ ರಾಷ್ಟ್ರೀಯ ಚದುರಂಗ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾಳೆ. ಇವರು ಉಮೇಶ್ ಮತ್ತು ಬೃಂದಾ ದಂಪತಿ ಪುತ್ರಿಯರು.

Translate »