ಸಂಗೀತ ಕ್ಷೇತ್ರಕ್ಕೆ ರಾಜಮನೆತನದವರ ಕೊಡುಗೆ ಅಪಾರ
ಮೈಸೂರು

ಸಂಗೀತ ಕ್ಷೇತ್ರಕ್ಕೆ ರಾಜಮನೆತನದವರ ಕೊಡುಗೆ ಅಪಾರ

May 14, 2019

ಮೈಸೂರು: ಸಂಗೀತ ಕ್ಷೇತ್ರಕ್ಕೆ ರಾಜಮನೆತನ ದವರ ಕೊಡುಗೆ ಅಪಾರ, ಅಂದಿನ ಕಾಲದಲ್ಲಿ ರಾಜಮನೆ ತನದವರು ಸಂಗೀತ ವಿದ್ವಾಂಸರನ್ನು ಹಾಗೂ ಸಂಗೀತ ಪ್ರಿಯರನ್ನು ಅರಮನೆಗೆ ಕರೆಸಿ ಸಂಗೀತ ಕಛೇರಿ ನಡೆಸಿ ಬಿರುದುಗಳನ್ನು ನೀಡುತ್ತಿದ್ದದ್ದು ಅವಿಸ್ಮರಣೀಯ ಎಂದು ಶಾರದಾ ವಿಲಾಸ ಕಾಲೇಜಿನ ಕನ್ನಡ ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಅಭಿಪ್ರಾಯಪಟ್ಟರು.

ಮೈಸೂರಿನ ವೀಣೆಶೇಷಣ್ಣ ಭವನದಲ್ಲಿ ಭಾನುವಾರ ನಡೆದ ಸ್ವರಾಲಯ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಗ ದಿಂದ ರೋಗ ಮುಕ್ತಿ ಎನ್ನುವಂತೆ ಸಂಗೀತವನ್ನು ಅಭ್ಯಸಿಸಿ, ಆಲಿಸುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿ ಕೊಳ್ಳಬಹುದು ಎಂದರಲ್ಲದೆ, ಪ್ರತಿಭೆಯನ್ನು ಗುರುತಿಸು ವುದು ಸಂಗೀತ ಶಾಲೆಗಳ ಕರ್ತವ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಡಗಿರುವ ಪ್ರತಿಭೆಯನ್ನು ಹೊರ ತರೋದು ಸಂಗೀತ ಶಾಲೆಗಳ ಜವಾಬ್ದಾರಿ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೀತಾಂಜಲಿ ಸ್ಕೂಲ್ ಆಫ್ ಫೈನ್ ಆಟ್ರ್ಸ್‍ನ ನಿರ್ದೇಶಕಿ ಡಾ.ಗೀತಾ ಸೀತಾರಾಂ ಮಾತನಾಡಿ, ಸಂಗೀತಾಭ್ಯಾಸವನ್ನು ಜೀವನದ ಒಂದು ಭಾಗ ವಾಗಿ ಅಳವಡಿಸಿಕೊಂಡು ಕಲೆಯನ್ನು ಪ್ರವೃತ್ತಿಯನ್ನಾಗಿ ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಹಾಗೂ ಮನುಷ್ಯನಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವರಾ ಲಯ ಸಂಗೀತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ವಿದುಷಿ ಸುಮ ಹರಿನಾಥ್, ಸಂಗೀತಾಭ್ಯಾಸ ಮಾಡುವವರಿಗೆ ಪೋಷಕರ ಬೆಂಬಲವಿಲ್ಲದೇ ಸಂಗೀತ ಕ್ಷೇತ್ರ ಇಂದು ಸೊರಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಜೊತೆಗೆ ಸಂಗೀತಾಭ್ಯಾಸವನ್ನು ಕೂಡ ಮಾಡು ವುದು ಅತ್ಯುತ್ತಮ ಎಂದರು. ಇದೇ ಸಂದರ್ಭದಲ್ಲಿ ವಿದುಷಿ ರೇವತಿ ಶ್ರೀಕಾಂತ್ ಅವರ ‘ಮರಳಿ ಬೃಂದಾವನಕೆ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಲಾಯಿತು. ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಸಮಾಜ ಸೇವಕ ಜಿ.ಪಿ.ಹರೀಶ್ ಅವರಿಗೆ ‘ಮಿತ್ರ ಪ್ರೇಮಿ’ ಪ್ರಶಸ್ತಿ, ವಿದುಷಿ ಧರಿತ್ರಿ ಆನಂದರಾವ್ ಅವರಿಗೆ ‘ಗಾನಲೋಲೆ’, ಶಿಕ್ಷಕಿ ಸೀತಾಲಕ್ಷ್ಮಿ ಅವರಿಗೆ ‘ವಾಕ್ ಚತುರೆ’, ಗಾಯಕಿ ಅಖಿಲ ಜಿ.ಅವರಿಗೆ ‘ಮಿನುಗು ತಾರೆ’ ಹಾಗೂ ವಿದುಷಿ ವಿಬುಧ ರಾಜೇಂದ್ರ ಅವರಿಗೆ ‘ದ್ರುವತಾರೆ’ ಪ್ರಶಸ್ತಿಯನ್ನು ನೀಡಿ ವೇದಿಕೆಯಲ್ಲಿ ಸನ್ಮಾ ನಿಸಲಾಯಿತು. ಸಮಾರಂಭದಲ್ಲಿ ಕೊಳಲು ವಾದಕ ವಿದ್ವಾನ್ ಎ.ವಿ.ದತ್ತಾತ್ರೇಯ, ಸಿಟಿ ಹೈಲೈಟ್ಸ್‍ನ ವರದಿ ಗಾರರಾದ ಎಸ್.ಎಸ್.ಶ್ರೀಲಕ್ಷ್ಮಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯ ಕ್ರಮದ ಅಂಗವಾಗಿ ಸ್ವರಾಲಯ ಸಂಗೀತ ಶಾಲೆ ಮಕ್ಕಳಿಂದ ‘ರಾಗದಿಂದ ರೋಗ ಮುಕ್ತಿ’ ಎಂಬ ಸಂಗೀತ ಕಛೇರಿ ಹಾಗೂ ‘ನಮ್ಮೂರ ಶಾಲೆ’ ಎಂಬ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಸಮಾರಂಭಕ್ಕೆ ಸ್ವರಾಲಯದ ಕಾರ್ಯದರ್ಶಿ ಹೆಚ್.ಎಸ್.ಶ್ರೀಕಾಂತಾಮಣಿ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

Translate »