ಕೇಂದ್ರ, ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಸಾಕಷ್ಟು ಅಂತರ
ಮೈಸೂರು

ಕೇಂದ್ರ, ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಸಾಕಷ್ಟು ಅಂತರ

May 14, 2019

ಮೈಸೂರು: ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಮತ್ತು ಅಧಿಕಾರಿಗಳಿಗೆ ನೀಡು ತ್ತಿರುವ ವೇತನದ (1:10)ಅಂತರ ಸಾಕಷ್ಟು ಹೆಚ್ಚಾಗಿದೆ. ಆದರೆ, ಈ ಅಂತರ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ಅಧ್ಯಯನ ನಡೆಸಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗ ವಾರ ಅಭಿಪ್ರಾಯಪಟ್ಟರು.

ಮೈಸೂರು ಕುವೆಂಪುನಗರದ ಗಾನ ಭಾರತೀ ಸಭಾಂಗಣದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಮಡಿ ಕೇರಿ ಜಿಲ್ಲೆಗಳ ಪೊಲೀಸ್ ಇಲಾಖೆ ಗುಪ್ತ ವಾರ್ತೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಕುಟುಂಬದಲ್ಲಿ ಎಸ್‍ಎಸ್ ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಸಮಾ ರಂಭದಲ್ಲಿ ಮಾತನಾಡಿದರು.

ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ (ಯುಜಿಸಿ ಸಂಬಳ ಪಡೆಯುವವರು) ದವರೆಗೆ ಹಾಗೂ ಐಎಎಸ್, ಐಪಿಎಸ್, ಐಆರ್‍ಎಸ್, ಐಎಫ್‍ಎಸ್ ಅಧಿಕಾರಿ ಗಳು ಸೇರಿದಂತೆ ಇತರೆ ಉನ್ನತ ಹುದ್ದೆಯಿಂದ `ಡಿ’ ಗ್ರೂಪ್ ನೌಕರ ವರ್ಗದವರಿಗೆ ನೀಡು ತ್ತಿರುವ ವೇತನದ ಅಂತರ ಸರಾಸರಿ 1:10 ಅಂತರದಿಂದ ಕೂಡಿದೆ. ಇದು ನೌಕರರಲ್ಲಿ ಅಸಮಾನತೆ ಮೂಡಲು ಕಾರಣವಾಗಿದೆ. ಇದನ್ನು ಸರಿಪಡಿಸುವಂತೆ ಅನೇಕ ಹೋರಾಟ ಗಳು ನಡೆಯುತ್ತಿವೆ ಎಂದರು.

ಅದರಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೆ ನೀಡುವ ವೇತನದಲ್ಲಿನ ವ್ಯತ್ಯಾಸ ತುಂಬಾ ಇರಬಾರದು. ಏಕೆಂದರೆ ಇವೆರಡು ಇಲಾಖೆಗಳು ಸಮಾಜದ ಜೀವ ನಾಡಿ. ಶಿಕ್ಷಣ ಇಲಾಖೆಯ ಪ್ರಾಥಮಿಕ ಹಂತದ ಸಿಬ್ಬಂದಿಗೂ ಪ್ರಾಧ್ಯಾಪಕರ ನಡುವೆ 1:3 ವ್ಯತ್ಯಾಸ ಇದ್ದರೆ ಸಾಕು. ಇದರಲ್ಲಿ ಯಾವುದೇ ಅಸಮಾನತೆ ಇರುವುದಿಲ್ಲ. ಇದೇ ಪಾಲಿಸಿ, ಪೊಲೀಸ್ ಇಲಾಖೆಗೂ ಅನ್ವಯವಾದರೆ ಒಳ್ಳೆಯದು ಎಂದರು.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಚರ್ಚಿಸಿ ಸರಿಪಡಿಸಬೇಕಾದ ಜನಪ್ರತಿನಿಧಿ ಗಳು ಇದರ ಬಗ್ಗೆ ಸರಿಯಾಗಿ ಅಧ್ಯಯನ ನಡೆಸುತ್ತಿಲ್ಲ. ಪರಿಣಾಮ ಕಾರ್ಯಾಂಗ ದಲ್ಲಿ ಅಸಮಾನತೆ ಹೆಚ್ಚಾಗಲು ಕಾರಣವಾಗಿ ರುವ ಅಂಶ ಎಂದು ಬೇಸರ ವ್ಯಕ್ತಪಡಿ ಸಿದರು. ಹಲವು ವರ್ಷಗಳ ಹಿಂದೆ ರಾಜ ಕೀಯ ಕ್ಷೇತ್ರ, ಸೇವಾವಲಯವಾಗಿತ್ತು. ಆ ದಿನಗಳಲ್ಲಿ ವಿಷಯ ತಜ್ಞರು, ಬರಹಗಾ ರರು, ವಕೀಲರು ಹಾಗೂ ವಿವಿಧ ಕ್ಷೇತ್ರ ತಜ್ಞರು ಜನಪ್ರತಿನಿಧಿಗಳಾಗಿ ಆಯ್ಕೆಯಾಗು ತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಗೂಂಡಾ ಮನಸ್ಥಿತಿಯವರು, ಪಿಶಾಚಿ ಮನಸ್ಥಿತಿಯ ಜನಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡುತ್ತಿರುವುದರಿಂದ ಜನರ ಸಮಸ್ಯೆಗಳು ಸರಿಯಾಗಿ ಚರ್ಚೆಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಭಾಗದ ಜನಪ್ರತಿನಿಧಿಗಳಾದ ಎನ್.ರಾಚಯ್ಯ, ವಿ.ಶ್ರೀನಿವಾಸಪ್ರಸಾದ್, ಬಸಲಿಂಗಪ್ಪ, ಎಂ.ರಾಜಶೇಖರ ಮೂರ್ತಿ ಸೇರಿದಂತೆ ಇತರೆ ಜನಪ್ರತಿನಿಧಿಗಳು ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರವನ್ನು ಬಲ್ಲವ ರಾಗಿದ್ದರು. ಅಂದಿನ ರಾಜಕಾರಣಿಗಳು ಸಾಹಿತಿಗಳು ಹೇಳುವ ಮಾತಿಗೆ ಬೆಲೆ ನೀಡುತ್ತಿದ್ದರು. ಆದರೆ, ಇಂದಿನ ರಾಜ ಕಾರಣಿಗಳಲ್ಲಿ ಅಂತಹ ಮನಸ್ಥಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಗುಪ್ತವಾರ್ತೆ ಮೈಸೂರು ವಿಭಾ ಗದ ಪೊಲೀಸ್ ಅಧೀಕ್ಷಕಿ ಕವಿತಾ ಅವರು, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ಗಳಿಗೆ ನೆಪ ಮಾತ್ರಕ್ಕೆ ನೆನಪಿನ ಕಾಣಿಕೆ ನೀಡಿ ಸುಮ್ಮನಾಗಬಹುದಿತ್ತು. ಅವರು ಹಾಗೆ ಮಾಡದೇ ಹೆಸರಾಂತ ಸಾಹಿತಿಗಳ ಪುಸ್ತಕ ಗಳನ್ನು ನೀಡಿ, ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಪೊಲೀಸ್ ಇಲಾಖೆಯ ಎಲ್ಲಾ ವಿಭಾಗ ದಲ್ಲೂ ನಡೆದರೆ ಉತ್ತಮ ಎಂದು ಸಲಹೆ ನೀಡಿದರು. ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪುಟ್ಟ ಯ್ಯರ ಪುತ್ರಿ ಪಿ.ಪ್ರಕೃತಿ (ಶೇ.83), ನಾರಾ ಯಣ ಶೆಟ್ಟಿರ ಪುತ್ರ ಹೆಚ್.ಎನ್.ಶಶಾಂಕ್ (ಶೇ.65), ಎಂ.ಕೆ.ರಾಜು ಪುತ್ರಿ ಎಂ.ಆರ್. ರಕ್ಷಿತಾ (ಶೇ.62), ಶಿವಕುಮಾರ್ ಪುತ್ರಿ ಕೆ.ಎಸ್.ಭಾನುಪ್ರಿಯಾ(ಶೇ.58) ಅವರನ್ನು ಅಭಿನಂದಿಸಲಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪಿ.ಮಹೇಶ್ ಪುತ್ರಿ ವಿಂದ್ಯಾ ಎಂ.ಮಹೇಶ್ವರಿ(ಶೇ.94), ನವೀನ್ ರೋಷನ್ ಪುತ್ರಿ ಎನ್.ಜಾನವಿ(ಶೇ.91), ನಾರಾಯಣ ಶೆಟ್ಟಿ ಪುತ್ರ ಧನುಷ್ (ಶೇ.82), ಜಯಕುಮಾರ್ ಪುತ್ರ ಶಶಾಂಕ್ (ಶೇ. 80), ಶಶಿಧರ್ ಪುತ್ರ ಆಕಾಶ್‍ಗೌಡ (ಶೇ.81), ಸಾಜನ್ ಪುತ್ರಿ ದೋಷ್ನ ಮರಿಯ (ಶೇ.76), ಪುತ್ರ ಕ್ಯಾಲ್ವಿನ್ ಬೆನೆಟಿಕ್ (ಶೇ.70) ಕೆ.ಬಿ.ಮೋಹನ್‍ಕುಮಾರ್ ಪುತ್ರ ಶಶಾಂಕ್‍ಗೌಡ, ವಿ.ರವಿಚಂದ್ರ ಪುತ್ರ ಆರ್.ಪಿ.ಉಲ್ಲಾಸ್ (ಶೇ.47) ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಗುಪ್ತವಾರ್ತೆ ವಿಭಾಗದ ಪೊಲೀಸ್ ಅಧೀಕ್ಷಕಿ ಬಿ.ಟಿ.ಕವಿತಾ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಪ್ರಾಧ್ಯಾಪಕಿ ಎನ್.ಕೆ.ಲೋಲಾಕ್ಷಿ, ಇನ್ಸ್‍ಪೆಕ್ಟರ್‍ಗಳಾದ ಮೇದಪ್ಪ, ಪ್ರಕಾಶ್, ವೆಂಕಟೇಶ್, ಪ್ರಕಾಶ್, ಪಿಎಸ್‍ಐ ಬೆಳ್ಳಿಯಪ್ಪ, ಉಮಾ, ಶಿಲ್ಪ ಸೇರಿದಂತೆ ಇತರರಿದ್ದರು.

Translate »