ಶರವೇಗದಲ್ಲಿ ಬೆಳೆಯುತ್ತಿದೆ ಆರ್‍ಟಿ ನಗರ
ಮೈಸೂರು

ಶರವೇಗದಲ್ಲಿ ಬೆಳೆಯುತ್ತಿದೆ ಆರ್‍ಟಿ ನಗರ

May 14, 2019

ಮೈಸೂರು: ಮೈಸೂರಿನ ರವೀಂದ್ರನಾಥ ಠಾಗೂರ್ ನಗರ (ಆರ್‍ಟಿ ನಗರ) ವಸತಿ ಬಡಾವಣೆ ಅತೀ ವೇಗವಾಗಿ ಬೆಳೆಯುತ್ತಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಅಭಿವೃದ್ಧಿ ಪಡಿಸಿರುವ ಆರ್‍ಟಿ ನಗರ ಬಡಾವಣೆಯಲ್ಲಿ ರಚನೆ ಯಾಗಿರುವ ವಿವಿಧ ವರ್ಗದ 20ಘಿ30, 30ಘಿ40, 40ಘಿ60, 50ಘಿ80 ಅಳತೆಯ 2,472 ನಿವೇಶನಗಳನ್ನು ನಗರಾಭಿವೃದ್ಧಿ ಕಾಯ್ದೆ, ನಿವೇಶನ ಹಂಚಿಕೆ ನಿಯಮಾ ವಳಿ ಪ್ರಕಾರ ಅರ್ಹ ಫಲಾನುಭವಿಗಳಿಗೆ ಮುಡಾ ಅಧ್ಯಕ್ಷರಾಗಿದ್ದ ಡಿ.ಧ್ರುವಕುಮಾರ್ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಿದರು.

ದೊಡ್ಡ ಸಂಪರ್ಕ ರಸ್ತೆಗಳು, ಉದ್ಯಾನ ವನ, ಕುಡಿಯುವ ನೀರು, ಒಳಚರಂಡಿ, ಮಳೆ ನೀರು ಚರಂಡಿ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಗಳೊಂದಿಗೆ ಅಭಿವೃದ್ಧಿಪಡಿಸಿರುವ ಆರ್‍ಟಿ ನಗರ ಬಡಾವಣೆ ದಟ್ಟಗಳ್ಳಿ ಬಳಿ ರಿಂಗ್ ರೋಡ್‍ಗೆ ನೇರ ಸಂಪರ್ಕವಿದ್ದು, ಎತ್ತರದ ಪ್ರದೇಶವಾದ ಕಾರಣ ಅಲ್ಲಿ ಮನೆ ನಿರ್ಮಿಸಿ ವಾಸಕ್ಕೆ ಬರಲು ನಿವೇಶನ ಮಂಜೂರಾತಿ ದಾರರು ತೀವ್ರ ಆಸಕ್ತಿ ತೋರುತ್ತಿದ್ದಾರೆ.

ಈಗಾಗಲೇ 2 ಮನೆಗಳ ಗೃಹ ಪ್ರವೇಶ ವಾಗಿ ಅವುಗಳ ಮಾಲೀಕರೇ ವಾಸ ಮಾಡುತ್ತಿದ್ದರೆ, 20 ಮನೆಗಳು ನಿರ್ಮಾಣ ಹಂತದಲ್ಲಿವೆ. 100 ಮನೆಗಳ ನಿರ್ಮಾ ಣಕ್ಕೆ ಈಗಾಗಲೇ ಮಂಜೂರಾತಿದಾರರು ನಕ್ಷೆ ಅನುಮೋದನೆಗೆ ಮೈಸೂರು ನಗರಾ ಭಿವೃದ್ದಿ ಪ್ರಾಧಿಕಾರ(ಮುಡಾ)ದ ನಗರ ಯೋಜನಾ ಶಾಖೆಗೆ ಅರ್ಜಿ ಸಲ್ಲಿಸಿ ಕಾಯು ತ್ತಿದ್ದಾರೆ. ಕಬಿನಿ ಕುಡಿಯುವ ನೀರಿನ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿ ಸಲು ಕರ್ನಾಟಕ ನಗರ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿ (ಏUWSSಃ)ಗೆ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವು ಈಗಾಗಲೇ 2.4 ಕೋಟಿ ರೂ.ಗಳ ಠೇವಣಿ ಇರಿಸಿದೆ.

ಯೋಜನೆಗೆ ಮಂಡಳಿಯು ಟೆಂಡರ್ ಪ್ರಕ್ರಿಯೆ ನಡೆಸುತ್ತಿದೆ. ಕಬಿನಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದಲ್ಲಿ ನಿವೇಶನ ಮಂಜೂರಾತಿದಾರರು ಮನೆ ಕಟ್ಟಲು ಹೆಚ್ಚಾಗಿ ಮುಂದೆ ಬರುತ್ತಾರೆ ಎಂದು ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿ ನಿಯರ್ ಟಿ.ಕೆ.ರವಿ ತಿಳಿಸಿದ್ದಾರೆ.

ಕೇರ್ಗಳ್ಳಿ, ದಟ್ಟಗಳ್ಳಿ, ಮೈಸೂರು ವಿಶ್ವ ವಿದ್ಯಾನಿಲಯ ಬಡಾವಣೆ, ಸರ್ಕಾರಿ ನೌಕ ರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆ, ಮೈಸೂರು ಜಿಲ್ಲಾ ಪತ್ರ ಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆ ಸೇರಿದಂತೆ ವಿವಿಧ ವಸತಿ ಬಡಾ ವಣೆಗಳಿಗೆ ಆರ್.ಟಿ.ನಗರ ಅತೀ ವೇಗ ವಾಗಿ ಬೆಳವಣಿಗೆಯಾಗಲು ಕಾರಣ ಎಂದು ಹೇಳಲಾಗಿದೆ.
20-30 ವರ್ಷಗಳ ಹಿಂದೆ ನಿರ್ಮಾಣ ವಾದ ದೇವ ನೂರು 1,2, 3ನೇ ಹಂತ, ವಸಂತನಗರ, ರಾಜೀವನಗರ 2ನೇ ಹಂತ ಬಡಾವಣೆಗಳಲ್ಲಿ ಇನ್ನೂ ಶೇ.20 ರಷ್ಟು ನಿವೇಶನಗಳಲ್ಲಿ ಮಾತ್ರ ವಸತಿ ಮನೆ ನಿರ್ಮಿಸಲಾಗಿದ್ದು, ಶೇ.80ರಷ್ಟು ನಿವೇಶನಗಳು ಖಾಲಿ ಬಿದ್ದಿದ್ದು ಗಿಡ ಗಂಟಿ ಬೆಳೆದುಕೊಂಡು ರಸ್ತೆ, ಚರಂಡಿಗಳೇ ಮುಚ್ಚಿಹೋಗಿವೆ.
ಎಸ್.ಬಂಗಾರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಆಗ ಮುಡಾ ಅಧ್ಯಕ್ಷ ರಾಗಿದ್ದ ಪಿ.ಗೋವಿಂದರಾಜ್ ಅಧಿಕಾರಾವಧಿ ಯಲ್ಲಿ 1000 ಎಕರೆ ಪ್ರದೇಶದಲ್ಲಿ ನಿರ್ಮಾಣ ಗೊಂಡ ವಿಜಯನಗರ 4ನೇ ಹಂತ ಬಡಾವಣೆಯಲ್ಲಿ ಒಟ್ಟು 12,000 ನಿವೇ ಶನಗಳನ್ನು ರಚಿಸಲಾಗಿತ್ತಾದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಮನೆ ಕಟ್ಟಿಲ್ಲ.

ಲಲಿತಾದ್ರಿನಗರ 1ನೇ ಹಂತದಲ್ಲೂ ಇನ್ನೂ ಶೇ.90ರಷ್ಟು ನಿವೇಶನಗಳು ಖಾಲಿ ಉಳಿದಿವೆ. ಎಲ್ಲಾ ಮೂಲಸೌಲಭ್ಯ ಒದಗಿ ಸಿದ್ದರೂ, ಮಂಜೂರಾತಿದಾರರು ಅಲ್ಲಿ ಮನೆ ನಿರ್ಮಿಸಿ ವಾಸಕ್ಕೆ ಹೋಗಲು ಆಸಕ್ತಿ ತೋರುತ್ತಿಲ್ಲ. ಆದರೆ 2017ರ ನವೆಂಬರ್ ಮಾಹೆಯಲ್ಲಿ ಹಂಚಿಕೆಯಾದ ರವೀಂದ್ರ ನಾಥ ಠಾಗೂರ್ ನಗರದಲ್ಲಿ ವಾಸಕ್ಕೆ ಬರಲು ನಿವೇಶನ ಮಂಜೂರಾತಿದಾರರು ಉತ್ಸುಕರಾಗಿದ್ದಾರೆ.

ಆರ್‍ಟಿ ನಗರದಿಂದಾಗಿ ಸುತ್ತಮುತ್ತ ಲಿನ ಖಾಸಗಿ ಬಡಾವಣೆಗಳಿಗೂ ಮಹತ್ವ ಬಂದಿದ್ದು, ಅವುಗಳೂ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿವೆ.

Translate »