ಆರ್‍ಟಿ ನಗರದಲ್ಲಿ ತಲೆ ಎತ್ತಲಿದೆ ಪವರ್ ಫ್ರೆಂಡ್ಸ್ ಕ್ಲಬ್ ಕಟ್ಟಡ
ಮೈಸೂರು

ಆರ್‍ಟಿ ನಗರದಲ್ಲಿ ತಲೆ ಎತ್ತಲಿದೆ ಪವರ್ ಫ್ರೆಂಡ್ಸ್ ಕ್ಲಬ್ ಕಟ್ಟಡ

December 14, 2018

ಮೈಸೂರು: ಮುಡಾ ಅಭಿವೃದ್ಧಿಪಡಿಸಿ ರುವ ಮೈಸೂರಿನ ರವೀಂದ್ರನಾಥ ಠಾಕೂರ್ ನಗರ (ಆರ್‍ಟಿ ನಗರ) ಬಡಾವಣೆಯಲ್ಲಿ ಚೆಸ್ಕಾಂ ಇಂಜಿ ನಿಯರ್‍ಗಳ ‘ಪವರ್ ಫ್ರೆಂಡ್ಸ್ ರಿಕ್ರಿಯೇಷನ್ ಕ್ಲಬ್’ ಕಟ್ಟಡ ತಲೆ ಎತ್ತಲಿದೆ. ಮುಡಾ ಮಂಜೂರು ಮಾಡಿ ರುವ 28 ಸಾವಿರ ಚದರಡಿ ವಿಸ್ತಾರದ ಸಿಎ ನಿವೇ ಶನದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಲಾಯಿತು. ಪವರ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮೇಗೌಡ, ಕಾರ್ಯದರ್ಶಿ ಮುನಿ ಗೋಪಾಲ್ ರಾಜ್, ನಿವೃತ್ತ ರಾಜ್ಯ ಮಾಹಿತಿ ಹಕ್ಕು ಆಯುಕ್ತ ಕೆ.ಎಂ.ಚಂದ್ರೇಗೌಡ, ಸೆಸ್ಕ್ ಚೀಫ್ ಇಂಜಿನಿಯರ್ ಆಫ್ತಬ್ ಅಹಮದ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಚಂದ್ರಶೇಖರ್, ಚೀಫ್ ಫೈನಾನ್ಸ್ ಆಫೀಸರ್ ಶಿವಣ್ಣ ನೇತೃತ್ವ ದಲ್ಲಿ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸ ಲಾಗಿದೆ. ಟೆನಿಸ್, ಶೆಟಲ್‍ಕಾಕ್, ಬ್ಯಾಡ್ಮಿಂಟನ್ ಸೇರಿ ದಂತೆ ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಆಡಳಿತ ವಿಭಾಗ, ಕ್ಲಬ್ ಹೌಸ್, ಕಾಟೇಜ್‍ಗಳು, ಸಮುದಾಯ ಭವನ, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಟ್ಟಡದಲ್ಲಿ ಒದಗಿಸಲಾಗುವುದು ಎಂದು ಸಂಘದ ಕಾರ್ಯದರ್ಶಿಯೂ ಆದ ಸೆಸ್ಕ್ ಸೂಪರಿಂಟೆಂಡಿಂಗ್ ಇಂಜಿನಿಯರ್ ಮುನಿ ಗೋಪಾಲರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »