ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ವರ್ಣರಂಜಿತ ಕಾರ್ಯಕ್ರಮ `ಆಯಿಷ್ ಆವಾಜ್’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಬಗ್ಗೆ ಪ್ರಚುರಪಡಿಸಲು ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯಿಷ್ ಸಂಸ್ಥೆ ವಿದ್ಯಾರ್ಥಿಗಳು ಭಾನುವಾರ ಜುಂಬ ನೃತ್ಯ ಸಾದರಪಡಿಸಿ ಸಂಭ್ರಮಿಸಿದರು. ಮೈಸೂರು ವಿವಿಯ ಫುಟ್‍ಬಾಲ್ ಮೈದಾನದಲ್ಲಿ ಸಂಸ್ಥೆಯ ಆಯಿಷ್ ಜಿಮ್ಖಾನ ವತಿಯಿಂದ ಇಂದು ಬೆಳಿಗ್ಗೆ 7ರಿಂದ 10ರವರೆಗೆ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಆಯಿಷ್ ಸಂಸ್ಥೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾತ್ರ ವಲ್ಲದೆ, ಎನ್‍ಐಇ, ಜೆಸಿ ಕಾಲೇಜು ಸೇರಿ…
ಮೈಸೂರು ಪಾಲಿಕೆಯಿಂದ ಪೌರಕಾರ್ಮಿಕರಿಗೆ ಸನ್ಮಾನ
March 11, 2019ಮೈಸೂರು: ಸ್ವಚ್ಛ ಸರ್ವೇಕ್ಷಣ-2019ರಲ್ಲಿ `ಮೈಸೂರು’ ದೇಶದ `3ನೇ ಸ್ವಚ್ಛ ನಗರ’ ಹಾಗೂ ತ್ಯಾಜ್ಯ ಮುಕ್ತ ನಗರದಲ್ಲಿ `5 ಸ್ಟಾರ್’ ಬಿರುದು ಪಡೆದ ಹಿನ್ನೆಲೆಯಲ್ಲಿ ಇದಕ್ಕೆ ಪ್ರಮುಖ ಕಾರಣ ಕರ್ತರಾದ ಪೌರಕಾರ್ಮಿಕರನ್ನು ಭಾನು ವಾರ ಮಹಾನಗರ ಪಾಲಿಕೆ ವತಿಯಿಂದ ಅಭಿನಂದಿಸಿ ಔತಣಕೂಟ ನೀಡಲಾಯಿತು. ಮೈಸೂರಿನ ರಾಜೇಂದ್ರ ಕಲಾಮಂದಿರ ದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲಿಕೆಯ 9 ವಲಯ ಕಚೇರಿಗಳ ತಲಾ ಒಬ್ಬರು ಪೌರಕಾರ್ಮಿಕರಂತೆ ಆಯ್ದ 9 ಮಂದಿ ಪೌರಕಾರ್ಮಿಕರನ್ನು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ…
`ಕಾವೇರಿ ಕಣಿವೆಗೆ ನೇಣು’ ಪುಸ್ತಕ ಬಿಡುಗಡೆ
March 11, 2019ಮೈಸೂರು: ಅರ್ಜುನ ಹಳ್ಳಿ ಪ್ರಸನ್ನಕುಮಾರ್ ರಚಿಸಿರುವ `ಕಾವೇರಿ ಕಣಿವೆಗೆ ನೇಣು’ ಪುಸ್ತಕವನ್ನು ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮೈಸೂ ರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಭಾನುವಾರ ಬಿಡುಗಡೆ ಮಾಡಿದರು. ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಕಾವೇರಿ ವಿಚಾರ ದಲ್ಲಿ ಕರ್ನಾಟಕಕ್ಕೆ ಬರೀ ಅನ್ಯಾಯವೇ ಆಗುತ್ತಾ ಬಂದಿದೆ. ನ್ಯಾಯಾಂಗಕ್ಕೆ ಕಣ್ಣಿಲ್ಲ. ಹೀಗಾಗಿ ನ್ಯಾಯಾಂಗದ ಕಾವೇರಿ ತೀರ್ಪು ಗಳಿಂದ ರಾಜ್ಯಕ್ಕೆ ಬರೀ ಅನ್ಯಾಯವನ್ನೇ ಕಾಣುತ್ತಿದ್ದೇವೆ. ಇವೆಲ್ಲವನ್ನು…
ದೇವಸ್ಥಾನಗಳಲ್ಲಿ ಕಳವು: ಚಿನ್ನದಂಗಡಿ ಮಾಲೀಕ ಸೇರಿ ಮೂವರ ಬಂಧನ
March 11, 2019ಮೈಸೂರು: ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಕಳ್ಳ ಹಾಗೂ ಕಳವು ಮಾಲುಗಳನ್ನು ಸ್ವೀಕರಿಸಿದ್ದ ಚಿನ್ನದಂಗಡಿ ಮಾಲೀಕನನ್ನು ಬಂಧಿಸಿರುವ ಅಪರಾಧ ಪತ್ತೆ ದಳ ಹಾಗೂ ಕುವೆಂಪುನಗರ ಪೊಲೀಸರು, 3.80 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ರಾಮಕೃಷ್ಣನಗರದ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ಬನ್ನಿಮಂಟಪದ ಯಲ್ಲಮ್ಮ ಕಾಲೋನಿಯ ಮಯೂರ ಬಿನ್ ಲೇಟ್ ನಾಗಯ್ಯ (37) ಎಂಬಾತನನ್ನು ಬಂಧಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಆತ ರಾಮಕೃಷ್ಣನಗರದ ಶನೇಶ್ವರಸ್ವಾಮಿ ದೇವಸ್ಥಾನ…
ಖದೀಮನ ಬಂಧನ, 1.86 ಲಕ್ಷ ಮೌಲ್ಯದ ಚಿನ್ನಾಭರಣ ವಶ
March 11, 2019ಮೈಸೂರು: ಮೈಸೂರಿನ ಲಷ್ಕರ್ ಪೊಲೀಸರು ಚಿನ್ನದ ಅಂಗಡಿ ಮತ್ತು ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕಳ್ಳನನ್ನು ಬಂಧಿಸಿ, ಆತನಿಂದ 1.86 ಲಕ್ಷ ರೂ.ಮೌಲ್ಯದ 60 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಅಶೋಕ ರಸ್ತೆಯ ಜ್ಯೋತಿರಾಂ ಪಾಂಡುರಾಂ ಆರ್ನಮೆಂಟ್ಸ್ ಅಂಡ್ ಬುಲಿಯನ್ಸ್ ಚಿನ್ನದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ವ್ಯಕ್ತಿಯೊಬ್ಬ 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಬಗ್ಗೆ ಲಷ್ಕರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಲಷ್ಕರ್ ಪೊಲೀಸರು ಮಾಹಿತಿ ಮೇರೆಗೆ ಆರೋಪಿ ಚನ್ನಪಟ್ಟಣ…
ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದ ತೊಳೆದದ್ದು ಕೇವಲ ಪ್ರಚಾರ ತಂತ್ರ
March 11, 2019ಮೈಸೂರು: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದಲ್ಲಿ ಪೌರ ಕಾರ್ಮಿಕರ ಪಾದ ತೊಳೆದದ್ದು ಕೇವಲ ಪ್ರಚಾರ ತಂತ್ರವಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಇಂದಿಲ್ಲಿ ಟೀಕಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ವಾಸ್ತವವಾಗಿ ಪೌರ ಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳ ಏಳಿಗೆಗೆ ಮೋದಿ ಏನನ್ನೂ ಮಾಡಿಲ್ಲ. ಪೌರ ಕಾರ್ಮಿಕರ ಪಾದ ತೊಳೆದು ದರಿಂದ ಈ ವರ್ಗ ಶೋಷಣೆಯಿಂದ ಮುಕ್ತವಾಗ ಲಿಲ್ಲ. ಶೋಚನೀಯ…
ಮನೆ ಬೀಗ ಒಡೆದು 54 ಸಾವಿರ ರೂ. ಚಿನ್ನಾಭರಣ ಕಳವು
March 11, 2019ಮೈಸೂರು: ಮನೆಯ ಬೀಗ ಒಡೆದು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ. ಕುವೆಂಪುನಗರದ ಹೆಚ್ ಬ್ಲಾಕ್, 8ನೇ ಮುಖ್ಯರಸ್ತೆ ನಿವಾಸಿ ಮೈತ್ರಿ ಡಿ.ಸಿಲ್ವ ಮನೆ ಯಲ್ಲಿ 54 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಮೈತ್ರಿ ಅವರು ಮಾ.6ರಂದು ಬೆಳಿಗ್ಗೆ 11 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೊರಹೋಗಿ, ಮಧ್ಯಾಹ್ನ ವಾಪಸ್ಸಾಗುವಷ್ಟರಲ್ಲಿ ಕಳ್ಳತನವಾಗಿತ್ತು. ಖದೀಮರು 2 ಸೂಟ್‍ಕೇಸ್‍ನಲ್ಲಿದ್ದ ಚಿನ್ನದ ಜುಮುಕಿ, ಓಲೆ, ರಿಂಗ್, ಸರ, ಶಿಲುಬೆ ಆಕಾರದ ಪೆಂಡೆಂಟ್…
ವಿವಿಧ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ
March 11, 2019ಮೈಸೂರು: ಮೈಸೂರಿನ ವಸಂತ ಮಹಲ್ ಬಳಿ ಇರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು 2019ನೇ ಸಾಲಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ವಿಶೇಷ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಆನ್‍ಲೈನ್ ನಲ್ಲಿ ಪಡೆದು (www.kseeb.kar.nic.in) ಮಾ.15ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಸಂತ ಮಹಲ್, ಮೈಸೂರು ಇಲ್ಲಿ ಸ್ವೀಕರಿಸಲಾಗುವುದು. ವಿವರಗಳನ್ನು ಕಚೇರಿಯ ಕರ್ತವ್ಯದ ಅವಧಿಯಲ್ಲಿ ಖುದ್ದಾಗಿ ಭೇಟಿ ನೀಡಿ ಪಡೆಯಬಹುದಾಗಿದೆ.
ಮೈಸೂರಿನಲ್ಲೂ ರಾಷ್ಟ್ರೀಯ ಲೋಕ ಅದಾಲತ್: 1188 ಪ್ರಕರಣ ಇತ್ಯರ್ಥ
March 10, 2019ಮೈಸೂರು: ಮೈಸೂರಿನ ನ್ಯಾಯಾ ಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 3149 ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ 1188 ಪ್ರಕರಣವನ್ನು ಇತ್ಯರ್ಥ ಪಡಿಸಲಾಯಿತು. ಮಾರ್ಚ್ 9ರಂದು ದೇಶದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಜರುಗಿದ್ದು, ಮೈಸೂರು ಜಿಲ್ಲೆಯಲ್ಲಿಯೂ ಎಲ್ಲಾ ತಾಲೂಕು ಒಳಗೊಂಡಂತೆ 22 ಬೆಂಚ್‍ಗಳಲ್ಲಿ ನ್ಯಾಯಾ ಧೀಶರು, ಮಧÀ್ಯಸ್ಥಿಕೆದಾರರ ಸಮ್ಮುಖದಲ್ಲಿ ದೂರುದಾರರು ಮತ್ತು ಪ್ರತಿವಾದಿಗಳನ್ನು ಮುಖಾಮುಖಿ ಮಾಡಿ ಪ್ರಕ ರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿ ಸಿಕೊಳ್ಳುವಂತೆ ಸಲಹೆ ನೀಡಲಾಯಿತು….
ಆರ್‍ಬಿಐ ನೋಟು ಮುದ್ರಣದಿಂದ ಕೆ.ಆರ್.ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ
March 10, 2019ಮೈಸೂರು: ಆರ್‍ಬಿಐ ನೋಟು ಮುದ್ರಣ ನಿಯಮಿತ ಸಂಸ್ಥೆಯು ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಕೆ.ಆರ್. ಆಸ್ಪತ್ರೆಗೆ ಐಸಿಯು ಸೌಲಭ್ಯ ಹೊಂದಿರುವ ಸುಸಜ್ಜಿತ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದೆ. ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಕೆ.ಎನ್.ನಾರಾಯಣನ್ ಅವರು `ಐಸಿಯು ಆನ್ ವ್ಹೀಲ್’ ಸುಸಜ್ಜಿತ ಆಂಬುಲೆನ್ಸ್ ವಾಹ ನದ ಕೀಲಿ ಹಾಗೂ ದಾಖಲೆ ಪತ್ರಗಳನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ.ಸಿ.ಪಿ.ನಂಜರಾಜ್ ಅವರಿಗೆ ಇಂದು ಬೆಳಿಗ್ಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನಾರಾ ಯಣನ್…