ಮೈಸೂರಿನಲ್ಲೂ ರಾಷ್ಟ್ರೀಯ ಲೋಕ  ಅದಾಲತ್: 1188 ಪ್ರಕರಣ ಇತ್ಯರ್ಥ
ಮೈಸೂರು

ಮೈಸೂರಿನಲ್ಲೂ ರಾಷ್ಟ್ರೀಯ ಲೋಕ ಅದಾಲತ್: 1188 ಪ್ರಕರಣ ಇತ್ಯರ್ಥ

March 10, 2019

ಮೈಸೂರು: ಮೈಸೂರಿನ ನ್ಯಾಯಾ ಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 3149 ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ 1188 ಪ್ರಕರಣವನ್ನು ಇತ್ಯರ್ಥ ಪಡಿಸಲಾಯಿತು.

ಮಾರ್ಚ್ 9ರಂದು ದೇಶದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಜರುಗಿದ್ದು, ಮೈಸೂರು ಜಿಲ್ಲೆಯಲ್ಲಿಯೂ ಎಲ್ಲಾ ತಾಲೂಕು ಒಳಗೊಂಡಂತೆ 22 ಬೆಂಚ್‍ಗಳಲ್ಲಿ ನ್ಯಾಯಾ ಧೀಶರು, ಮಧÀ್ಯಸ್ಥಿಕೆದಾರರ ಸಮ್ಮುಖದಲ್ಲಿ ದೂರುದಾರರು ಮತ್ತು ಪ್ರತಿವಾದಿಗಳನ್ನು ಮುಖಾಮುಖಿ ಮಾಡಿ ಪ್ರಕ ರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿ ಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಕಾನೂನು ಸೇವೆಗಳ ಪ್ರಾಧಿಕಾರದ ಸಹಭಾಗಿತ್ವದಲ್ಲಿ ನಡೆದ ಅದಾಲತ್‍ನಲ್ಲಿ ರಾಜಿ ಮಾಡಿಕೊಳ್ಳುವ ವಿಧಾನ, ಅದರಿಂದಾಗುವ ಪ್ರಯೋ ಜನ ಕುರಿತು ಮನವರಿಕೆ ಮಾಡಿಕೊಡಲಾಯಿತು.

ಮೈಸೂರಿನ ಜಯನಗರದಲ್ಲಿರುವ ಹೊಸ ನ್ಯಾಯಾ ಲಯ ಕಟ್ಟಡದಲ್ಲಿ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂ ಬಿಕ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಬೆಂಚ್ ಗಳಲ್ಲಿ ರಾಜಿ ಮಾಡಿಸಲಾಯಿತು. ಅದಾಲತ್ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪೀಠದಲ್ಲಿ ಕುಳಿತುಕೊಳ್ಳದೇ ಪೀಠದ ಮುಂಭಾಗದಲ್ಲಿ ಸಂಧಾನಕಾರರಾಗಿ ನಿಯೋಜನೆಗೊಂಡಿದ್ದ ಹಿರಿಯ ವಕೀಲರೊಂದಿಗೆ ಕುಳಿತು ರಾಜಿ ಪ್ರಕ್ರಿಯೆ ನಡೆಸಿದರು.

ಕೌಟುಂಬಿಕ ಪ್ರಕರಣಗಳು: ಇಂದು ನಡೆದ ರಾಜಿ ಸಂಧಾನ ದಲ್ಲಿ ಕೌಟುಂಬಿಕ ಸಮಸ್ಯೆ ಕುರಿತ ಹಲವು ಪ್ರಕರಣಗಳು ಇತ್ಯರ್ಥವಾದವು. ವಿವಾಹ ವಿಚ್ಛೇದನ ಪ್ರಕರಣ ಹೊರತು ಪಡಿಸಿ, ಗಂಡ-ಹೆಂಡತಿ ವಿರುದ್ಧ ದಾಖಲಾಗಿರುವ ದೂರು, ಕಿರುಕುಳ ಪ್ರಕರಣ ಹಾಗೂ ಇನ್ನಿತರ ವಿಷಯ ಗಳಿಗೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥಗೊಂಡವು.

ಸಿವಿಲ್ ಪ್ರಕರಣ: ಆಸ್ತಿ, ಹಣಕಾಸು ವಿವಾದ ಸೇರಿದಂತೆ ಹಲವು ಸಿವಿಲ್ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿ ಸಲಾಯಿತು. ತಾಲೂಕಿನ ಹಲವು ಗ್ರಾಮಗಳಲ್ಲಿ ತಲೆದೋರಿ ರುವ ಆಸ್ತಿ ವಿವಾದ, ಮನೆ ಮಾರಾಟ ಪ್ರಕರಣ, ಹಣಕಾಸು ಪ್ರಕರಣಗಳನ್ನು ನ್ಯಾಯಾಧೀಶರು ದೂರುದಾರರು, ಪ್ರತಿ ವಾದಿಗಳಿಗೆ ಬುದ್ಧಿ ಹೇಳಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿ ದರು. ಅಲ್ಲದೆ ಚೆಕ್ ಬೌನ್ಸ್ ಪ್ರಕರಣ, ಗುಂಪುಗಳ ನಡುವಿನ ಕಲಹ, ಕ್ಷುಲ್ಲಕ ಕಾರಣದಿಂದ ನಡೆದಿರುವ ಹಲ್ಲೆ ಪ್ರಕರಣ ಗಳನ್ನೂ ಬಗೆಹರಿಸಲಾಯಿತು. ಬೆಳಿಗ್ಗೆ 11ರಿಂದ ಆರಂಭವಾದ ರಾಜಿ ಸಂಧಾನ ಪ್ರಕ್ರಿಯೆ ಸಂಜೆ 5.30ರವರೆಗೆ ನಡೆಯಿತು. ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಲ್ಲಿರುವ ನ್ಯಾಯಾಲಯದಲ್ಲಿ ನಡೆಸಿದ ರಾಷ್ಟ್ರೀಯ ಅದಾ ಲತ್‍ನಲ್ಲಿ ಒಟ್ಟು 3149 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾ ಗಿತ್ತು. ಅವುಗಳಲ್ಲಿ 1188 ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಅದಾಲತ್‍ನಲ್ಲಿ ಬಗೆಹರಿಸುವಂತೆ 894 ವ್ಯಾಜ್ಯಪೂರ್ವ ಪ್ರಕರಣಗಳು ವಿಚಾರಣೆಗೆ ಬಂದಿದ್ದವು. ಅವುಗಳಲ್ಲಿ 179 ಪ್ರಕರಣಕ್ಕೆ ನ್ಯಾಯಾಧೀಶರು ಪರಿಹಾರ ಸೂಚಿಸಿದ್ದಾರೆ.

Translate »