ಆರ್‍ಬಿಐ ನೋಟು ಮುದ್ರಣದಿಂದ  ಕೆ.ಆರ್.ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ
ಮೈಸೂರು

ಆರ್‍ಬಿಐ ನೋಟು ಮುದ್ರಣದಿಂದ ಕೆ.ಆರ್.ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ

March 10, 2019

ಮೈಸೂರು: ಆರ್‍ಬಿಐ ನೋಟು ಮುದ್ರಣ ನಿಯಮಿತ ಸಂಸ್ಥೆಯು ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಖ್ಯಾತಿಯಾಗಿರುವ ಕೆ.ಆರ್. ಆಸ್ಪತ್ರೆಗೆ ಐಸಿಯು ಸೌಲಭ್ಯ ಹೊಂದಿರುವ ಸುಸಜ್ಜಿತ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದೆ.

ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಕೆ.ಎನ್.ನಾರಾಯಣನ್ ಅವರು `ಐಸಿಯು ಆನ್ ವ್ಹೀಲ್’ ಸುಸಜ್ಜಿತ ಆಂಬುಲೆನ್ಸ್ ವಾಹ ನದ ಕೀಲಿ ಹಾಗೂ ದಾಖಲೆ ಪತ್ರಗಳನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ.ಸಿ.ಪಿ.ನಂಜರಾಜ್ ಅವರಿಗೆ ಇಂದು ಬೆಳಿಗ್ಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ನಾರಾ ಯಣನ್ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್(BRBNMPL) ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಸಿಎಸ್‍ಆರ್ ಯೋಜನೆಯಡಿ ಹಲವು ಸಾಮಾಜಿಕ ಕಾರ್ಯಗಳಿಗೆ ನೆರವು ನೀಡುತ್ತಾ ಬಂದಿದ್ದು. ಬಡ ರೋಗಿಗಳು ಬರುವ ಕೆ.ಆರ್.ಆಸ್ಪತ್ರೆಗೆ ಹಲವು ವೈದ್ಯಕೀಯ ಸಲಕರಣೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಿದೆ ಎಂದರು.

ಇದೀಗ ತುರ್ತು ಸಂದರ್ಭ ರೋಗಿ ಗಳನ್ನು ಕರೆತರಲು ಅನುಕೂಲವಾಗು ವಂತೆ ವೆಂಟಿಲೇಟರ್ ಹೊರತುಪಡಿಸಿ `ಐಸಿಯು ಆನ್ ವ್ಹೀಲ್’ ಸುಸಜ್ಜಿತ ಆಂಬು ಲೆನ್ಸ್ ವಾಹನವನ್ನು ಕೆ.ಆರ್.ಆಸ್ಪತ್ರೆಗೆ ಒದಗಿಸುವ ಮೂಲಕ ಬಡರೋಗಿಗಳಿಗೆ ನಮ್ಮ ಕಿರು ಸೇವೆ ಮಾಡುತ್ತಿದ್ದೇವೆ ಎಂದ ಅವರು, ಅಗತ್ಯವಿದೆ ಎನ್ನುವುದಾದರೆ ಮುಂದೆಯೂ ವೈದ್ಯಕೀಯ ಸಲಕರಣೆ ಗಳನ್ನು ಕೊಡುತ್ತೇವೆ ಎಂದರು.

ಈ ಸಂದರ್ಭ ಸಂಸ್ಥೆಗೆ ಕೃತಜ್ಞತೆ ಸಲ್ಲಿ ಸಿದ ಡಾ.ಸಿ.ಪಿ.ನಂಜರಾಜ್, ಕೆ.ಆರ್. ಆಸ್ಪತ್ರೆ ಬಯಸಿದಾಗಲೆಲ್ಲಾ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಅಧಿಕಾರಿ ಗಳು ಸಹಕಾರ ನೀಡುತ್ತಿದ್ದು, ರೋಗಿ ಗಳಿಗೆ ಉತ್ತಮ ಚಿಕಿತ್ಸೆ ನೀಡಲು ನಮ್ಮೊಂ ದಿಗೆ ಕೈಜೋಡಿಸಿರುವುದು ಸ್ಮರಣಾರ್ಹ ಎಂದು ಹೇಳಿದರು.

ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಶ್ರೀನಿವಾಸ, ಸ್ಥಾನಿಕ ವೈದ್ಯಾ ಧಿಕಾರಿ ಡಾ.ಶೇಖರ್, ಮೈಸೂರು ಮೆಡಿ ಕಲ್ ಕಾಲೇಜು ಪ್ರಾಂಶುಪಾಲರಾದ ದಾಕ್ಷಾಯಿಣಿ, ಕೆ.ಆರ್.ಆಸ್ಪತ್ರೆ ಸೆಕ್ಯೂರಿಟಿ ಸೂಪರ್‍ವೈಸರ್ ಮಹದೇವು, ನರ್ಸಿಂಗ್ ಸೂಪರ್‍ವೈಸರ್‍ಗಳು ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »