ಆಯಿಷ್ ವಿದ್ಯಾರ್ಥಿಗಳ ವರ್ಣರಂಜಿತ ಜುಂಬ ನೃತ್ಯ
ಮೈಸೂರು

ಆಯಿಷ್ ವಿದ್ಯಾರ್ಥಿಗಳ ವರ್ಣರಂಜಿತ ಜುಂಬ ನೃತ್ಯ

March 11, 2019

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ವರ್ಣರಂಜಿತ ಕಾರ್ಯಕ್ರಮ `ಆಯಿಷ್ ಆವಾಜ್’ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಬಗ್ಗೆ ಪ್ರಚುರಪಡಿಸಲು ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯಿಷ್ ಸಂಸ್ಥೆ ವಿದ್ಯಾರ್ಥಿಗಳು ಭಾನುವಾರ ಜುಂಬ ನೃತ್ಯ ಸಾದರಪಡಿಸಿ ಸಂಭ್ರಮಿಸಿದರು.

ಮೈಸೂರು ವಿವಿಯ ಫುಟ್‍ಬಾಲ್ ಮೈದಾನದಲ್ಲಿ ಸಂಸ್ಥೆಯ ಆಯಿಷ್ ಜಿಮ್ಖಾನ ವತಿಯಿಂದ ಇಂದು ಬೆಳಿಗ್ಗೆ 7ರಿಂದ 10ರವರೆಗೆ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಆಯಿಷ್ ಸಂಸ್ಥೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾತ್ರ ವಲ್ಲದೆ, ಎನ್‍ಐಇ, ಜೆಸಿ ಕಾಲೇಜು ಸೇರಿ ದಂತೆ ಇನ್ನಿತರ ಕಾಲೇಜು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.

ಜುಂಬ ನೃತ್ಯ ತರಬೇತುದಾರ ನಿತಿನ್ ಮಾರ್ಗದರ್ಶನದಲ್ಲಿ ಅಬ್ಬರಿಸುವ ಸಂಗೀ ತಕ್ಕೆ ಕುಣಿದು ರೋಮಾಂಚನಗೊಂಡ ವಿದ್ಯಾರ್ಥಿಗಳು ಆ ಮೂಲಕ ಮಾ.16 ಮತ್ತು 17ರಂದು ಆಯಿಷ್ ಸಂಸ್ಥೆಯ ಪಂಚವಟಿ ಆವರಣದಲ್ಲಿ ನಡೆಯುವ ಆಯಿಷ್ ಆವಾಜ್ ಸಾಂಸ್ಕೃತಿಕ ಸ್ಪರ್ಧೆಯ ಸ್ಫೂರ್ತಿ ಮೆರೆದರು. ಮೈದಾನದಲ್ಲಿ ನೂರಾರು ವಿದ್ಯಾರ್ಥಿಗಳು ಢಮಗು ಡುವ ಸಂಗೀತಕ್ಕೆ ನಾನಾ ಭಾವಭಂಗಿ ಯಲ್ಲಿ ಹೆಜ್ಜೆ ಹಾಕಿದರು.

ಈ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಆಯಿಷ್ ಜಿಮ್ಖಾನ ಉಪಾಧ್ಯಕ್ಷರೂ ಆದ ಸಂಸ್ಥೆಯ ವೈದ್ಯ ಕೀಯ ಸೇವೆಗಳ ವಿಭಾಗದ ಮುಖ್ಯಸ್ಥೆ ಡಾ.ಎನ್.ಶ್ರೀದೇವಿ, ಜುಂಬ ನೃತ್ಯ ದೈಹಿಕ ಹಾಗೂ ಮಾನಸಿಕ ಸದೃಢಕ್ಕೆ ಪೂರಕ ವಾದ ವ್ಯಾಯಾಮ ಎನ್ನಲಾಗಿದೆ. ಇದು 180 ದೇಶಗಳಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿದೆ ಎಂದರು.

`ಆಯಿಷ್ ಆವಾಜ್’ ಪ್ರಚುರಪಡಿಸಲು ಈ ನೃತ್ಯ ಕಾರ್ಯಕ್ರಮ ರೂಪಿಸಲಾಗಿದೆ. ಮುಂಬರುವ ಆಯಿಷ್ ಆವಾಜ್ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಈ ಬಾರಿ ಬೆಂಗ ಳೂರು, ಚೆನ್ನೈ, ಪಾಂಡಿಚೇರಿ ಸೇರಿದಂತೆ ಮತ್ತಿತರರ ಭಾಗಗಳ ವಾಕ್ ಮತ್ತು ಶ್ರವಣ ಸಂಸ್ಥೆ ವಿದ್ಯಾರ್ಥಿ ತಂಡಗಳು ಸೇರಿದಂತೆ ಮೈಸೂರು ವಿವಿಯ ಕಾಲೇಜು ತಂಡು ಗಳು ಇದರಲ್ಲಿ ಪಾಲ್ಗೊಳ್ಳಲಿವೆ. 2 ದಿನಗಳಲ್ಲಿ 32 ಸ್ಪರ್ಧೆಗಳು ಜರುಗಲಿದ್ದು, ಫ್ಯಾಷನ್ ಶೋ, ಸಮೂಹ ನೃತ್ಯ ಪ್ರಮುಖ ಸ್ಪರ್ಧೆಗಳಾಗಿವೆ ಎಂದು ವಿವರಿಸಿದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ.ಆರ್.ಕೀರ್ತಿ, ಆಯಿಷ್ ಜಿಮ್ಖಾನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‍ಕುಮಾರ್ ಮತ್ತಿತರರು ಹಾಜರಿದ್ದರು.

Translate »