Tag: Pandavapura

ಸಿಎಂ ನಾಟಿಯ ಕೃಷಿ ಪ್ರದೇಶ ಪರಿಶೀಲಿಸಿದ ಸಚಿವರು ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ
ಮಂಡ್ಯ

ಸಿಎಂ ನಾಟಿಯ ಕೃಷಿ ಪ್ರದೇಶ ಪರಿಶೀಲಿಸಿದ ಸಚಿವರು ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ

August 8, 2018

ಪಾಂಡವಪುರ:  ಭತ್ತದ ನಾಟಿ ಹಾಕುವ ಕಾರ್ಯಕ್ಕೆ ಚಾಲನೆ ನೀಡಲು ಆ.11ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಾಲೂಕಿನ ಸೀತಾಪುರ ಗ್ರಾಮದ ಹೊರವಲಯದ ಜಮೀನಿಗೆ ತೆರಳಿ ಪರಿಶೀಲಿಸಿದರು. ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಮಂಜುಶ್ರೀ, ಎಸಿ ಆರ್.ಯಶೋಧ, ತಹಶೀಲ್ದಾರ್ ಡಿ.ಹನುಮಂತ ರಾಯಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಸಚಿವ ಪುಟ್ಟರಾಜು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ ನಾಗಮಂಗಲಕ್ಕೆ ಭೇಟಿ ನೀಡಿದ ಸಂದರ್ಭ ರೈತರೊಂದಿಗೆ ಭತ್ತ…

ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ: ತಾಪಂ ಅಧ್ಯಕ್ಷೆ
ಮಂಡ್ಯ

ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ: ತಾಪಂ ಅಧ್ಯಕ್ಷೆ

August 7, 2018

ಪಾಂಡವಪುರ:  ಮಕ್ಕಳಿಗೆ ಶಿಕ್ಷಣ ದಷ್ಟೇ ಕ್ರೀಡೆಯೂ ಮುಖ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು ಎಂದು ತಾಪಂ ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು. ತಾಲೂಕಿನ ಚಿಕ್ಕಾಯರಹಳ್ಳಿಯಲ್ಲಿ ಸೋಮವಾರ 2018-19ನೇ ಸಾಲಿನ ಅರಳಕುಪ್ಪೆ ಮತ್ತು ಬನ್ನಂಗಾಡಿ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕ. ಕ್ರೀಡಾ ಕೂಟಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನು ಸ್ಫೂರ್ತಿಯಾಗಿ ತೆಗೆದು ಕೊಂಡು ಕ್ರೀಡಾಕೂಟದಲ್ಲಿ ಭಾಗವಹಿ ಸುವ ಮನೋಭಾವ…

ಕೆಟ್ಟು ನಿಂತಿದ್ದ ಟ್ರಾಕ್ಟರ್‍ಗೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಮಂಡ್ಯ

ಕೆಟ್ಟು ನಿಂತಿದ್ದ ಟ್ರಾಕ್ಟರ್‍ಗೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

July 24, 2018

ಪಾಂಡವಪುರ : ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಟ್ರಾಕ್ಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಣಿವೆಕೊಪ್ಪಲು ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ. ಕೆ.ಆರ್.ಪೇಟೆ ತಾಲೂಕಿನ ಬಣ್ಣನಕೆರೆ ಗ್ರಾಮದ ನಿವಾಸಿ ನಾಗೇಶ್ ಎಂಬುವರ ಪುತ್ರ ಅಶೋಕ್(23) ಮೃತ ಯುವಕ. ಘಟನೆ ವಿವರ: ಅಶೋಕ್ ಅವರು ಕಾರ್ಯನಿಮಿತ್ತ ಭಾನುವಾರ ರಾತ್ರಿ ತಾಲೂಕಿನ ಎಲೆಕೆರೆ ಗ್ರಾಮದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ತಾಲೂಕಿನ ಕಣಿವೆಕೊಪ್ಪಲು ಗೇಟ್ ಬಳಿ ಮರದ ದಿಮ್ಮಿಗಳನ್ನು ತುಂಬಿಕೊಂಡು…

ಮೂಗುಮಾರಮ್ಮನ ಹೆಬ್ಬಾಗಿಲು, ದೇವರ ಕೊಳ ಲೋಕಾರ್ಪಣೆ
ಮಂಡ್ಯ

ಮೂಗುಮಾರಮ್ಮನ ಹೆಬ್ಬಾಗಿಲು, ದೇವರ ಕೊಳ ಲೋಕಾರ್ಪಣೆ

July 18, 2018

ಪಾಂಡವಪುರ: ತಾಲೂಕಿನ ಶಿಂಡಬೋಗನಹಳ್ಳಿ ಗ್ರಾಮದೇವತೆ ಮೂಗುಮಾರಮ್ಮನ ಹೆಬ್ಬಾಗಿಲು ಮತ್ತು ಗ್ರಾಮದ ಹೊರವಲಯದಲ್ಲಿ ಜೀರ್ಣೋದ್ಧಾರಗೊಂಡಿರುವ ದೇವರ ಕೊಳವನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು, ಗ್ರಾಮ ದೇವತೆ ಮೂಗುಮಾರಮ್ಮನ ಹಬ್ಬದ ಅಂಗವಾಗಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಮೂಗುಮಾರಮ್ಮನ ಹೆಬ್ಬಾಗಿಲು ಉದ್ಘಾಟಿಸಿ, ಗ್ರಾಮದ ಹೊರವಲಯದಲ್ಲಿ ಶಿಥಿಲ ಗೊಂಡಿದ್ದ ದೇವರಕೊಳ (ಮಗುಕೊಳ) ವನ್ನು ದುರಸ್ಥಿಗೊಳಿಸಿ ಜೀರ್ಣೋದ್ಧಾರ ಗೊಳಿಸಿದ್ದೇವೆ ಎಂದರು. ಗ್ರಾಮದೇವತೆ ಹಬ್ಬ ಆಚರಣೆಯಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದ್ದು, ಗ್ರಾಮದ ಜನತೆ ಸಹಬಾಳ್ವೆಯಿಂದ ಬದುಕು ನಡೆಸಲು ಸಹಕಾರಿಯಾಗಲಿದೆ. ಅದೇ…

ಆಸ್ಪತ್ರೆ ಸೌಲಭ್ಯ ಸದ್ಭಳಕೆಗೆ ಸಚಿವರ ಸಲಹೆ
ಮಂಡ್ಯ

ಆಸ್ಪತ್ರೆ ಸೌಲಭ್ಯ ಸದ್ಭಳಕೆಗೆ ಸಚಿವರ ಸಲಹೆ

July 16, 2018

ಪಾಂಡವಪುರ:  ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಿ ಸಿರುವ ವಾಣಿಜ್ಯ ಸಂಕೀರ್ಣ ಹಾಗೂ ಆಸ್ಪತ್ರೆ ಕ್ಯಾಂಟೀನ್ ಮತ್ತು ಸೈಕಲ್ ಸ್ಟ್ಯಾಂಡ್ ಅನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ಆಸ್ಪತ್ರೆ ಆವರಣದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವಂತೆ ಸಾರ್ವಜನಿಕ ವಾಣಿಜ್ಯ ಸಂಕೀರ್ಣ ತೆರೆಯಲಾಗಿದೆ. ಜೊತೆಗೆ ಆಸ್ಪತ್ರೆ ಕ್ಯಾಂಟೀನ್ ಆರಂಭಿಸಲಾಗಿದ್ದು, ರೋಗಿಗಳಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ದೊರೆಯಲಿದೆ. ಇದನ್ನು ರೋಗಿ ಗಳು ಹಾಗೂ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ವಾಣಿಜ್ಯ ಸಂಕೀರ್ಣ ಮಾಲೀಕ…

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ
ಮಂಡ್ಯ

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ

July 16, 2018

ಪಾಂಡವಪುರ: ಲಿಂಗೈಕ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಶ್ರದ್ಧಾ ಭಕ್ತಿಯಿಂದ ಮಠದಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಶ್ವತ ವಾದ ಕೆಲಸ ಮಾಡಿದ್ದಾರೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿಜೀ ತಿಳಿಸಿದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮ ಯೋಗಿಶ್ವರ ಮಠದ ಆವರಣದಲ್ಲಿ ಭಾನು ವಾರ ನಡೆದ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಗಳ 11ನೇ ದಿನದ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮೇಲು-ಕೀಳೆಂಬ ಭಾವನೆ ಬಿಟ್ಟು ಭಕ್ತರ ಮನೆ ಮನೆಗೆ ತೆರಳಿ ಧರ್ಮ ಪ್ರಚಾರ ಮಾಡುವ ಮೂಲಕ ಭಕ್ತರ ಪ್ರೀತಿ ಸಂಪಾದಿ ಸಿದ್ದರು….

ಸಂಪೂರ್ಣ ಸಾಲ ಮನ್ನಾಕ್ಕಾಗಿ ರೈತರಿಂದ ವಿವಿಧೆಡೆ ಪ್ರತಿಭಟನೆ
ಮಂಡ್ಯ

ಸಂಪೂರ್ಣ ಸಾಲ ಮನ್ನಾಕ್ಕಾಗಿ ರೈತರಿಂದ ವಿವಿಧೆಡೆ ಪ್ರತಿಭಟನೆ

July 10, 2018

ಮಂಡ್ಯ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಹಲವೆಡೆ ಸೋಮವಾರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ಮಂಡ್ಯ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಂಡ್ಯ: ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಂಡ್ಯ ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಮಾ ವೇಶಗೊಂಡ ಪ್ರತಿಭಟನಾಕಾರರು, ಧರಣಿ ನಡೆಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡದಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ…

ಏತ ನೀರಾವರಿ ಯೋಜನೆಗೆ ಚಾಲನೆ
ಮಂಡ್ಯ

ಏತ ನೀರಾವರಿ ಯೋಜನೆಗೆ ಚಾಲನೆ

July 7, 2018

ಪಾಂಡವಪುರ:  ತಾಲೂಕಿನ ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಏತ ನೀರಾವರಿ ಯೋಜನೆಗೆ ಜಿಪಂ ಸದಸ್ಯ ಸಿ.ಅಶೋಕ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಲ್ಲಿಗೆರೆ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸುಮಾರು 700 ಎಕರೆ ಅಚ್ಚುಕಟ್ಟು ಪ್ರದೇಶ ಬರಲಿದ್ದು, ಈ ವ್ಯಾಪ್ತಿಯ ರೈತರು ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಏತ ನೀರಾವರಿ ಯೋಜನೆ ಜೊತೆಗೆ ಚಿನಕುರಳಿ ಹೋಬಳಿಯ ಸುಮಾರು 22 ಕೋಟಿ ವೆಚ್ಚದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ…

ಪಾಂಡವಪುರ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಯೋಜನೆ
ಮಂಡ್ಯ

ಪಾಂಡವಪುರ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಯೋಜನೆ

July 2, 2018

ಪಾಂಡವಪುರ:  ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟ ರಾಜು ತಿಳಿಸಿದರು. ಭಾನುವಾರ ಬೆಳಿಗ್ಗೆ ಪಟ್ಟಣದ ಕೃಷ್ಣಾ ನಗರದ ತಮ್ಮ ನಿವಾಸದಲ್ಲಿ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಪಾಂಡವಪುರದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು ಉಪ ನಗರ ಮಾದರಿಯಲ್ಲಿ ಪಟ್ಟಣಕ್ಕೆ ಅಗತ್ಯವಿರುವ ರಸ್ತೆ, ಯುಜಿಡಿ, ಪಾರ್ಕ್, ಸುಸಜ್ಜಿತ ಆಸ್ಪತ್ರೆ ಕಟ್ಟಡ, ಈಜುಕೊಳ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೂ ಹಲವು…

ಮೃತ ಶಿವಣ್ಣ ಕುಟುಂಬಕ್ಕೆ ಸಚಿವರಿಂದ ಸಾಂತ್ವನ
ಮಂಡ್ಯ

ಮೃತ ಶಿವಣ್ಣ ಕುಟುಂಬಕ್ಕೆ ಸಚಿವರಿಂದ ಸಾಂತ್ವನ

June 27, 2018

ಪಾಂಡವಪುರ: ಇತ್ತೀಚೆಗೆ ಮೃತಪಟ್ಟ ತಾಲೂಕಿನ ಸಣಬ ಗ್ರಾಮದ ಜೆಡಿಎಸ್ ಮುಖಂಡ ಶಿವಣ್ಣ ಅವರ ಮನೆಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಮೃತರ ಪತ್ನಿ ಜಯ ಲಕ್ಷ್ಮಿ ಹಾಗೂ ಕುಟುಂಬದವರಿಗೆ ಸಾಂತ್ವ್ವನ ಹೇಳಿದರು. ನಂತರ ಮಾತನಾಡಿದ ಅವರು, ಶಿವಣ್ಣ ನವರ ಅಕಾಲಿಕ ಮರಣ ನನಗೆ ವೈಯುಕ್ತಿಕ ವಾಗಿ ನೋವುಂಟು ಮಾಡಿದೆ. ಶಿವಣ್ಣ ನಮ್ಮ ಪಕ್ಷದ ಮುಖಂಡ ಎನ್ನುವುದಕ್ಕಿಂತ ನಮ್ಮ ಮನೆಯ ಮಗನಂತಿದ್ದರು. ಸದಾ ನಮ್ಮ ಕುಟುಂಬದೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿದ್ದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು….

1 2 3 4
Translate »