ಏತ ನೀರಾವರಿ ಯೋಜನೆಗೆ ಚಾಲನೆ
ಮಂಡ್ಯ

ಏತ ನೀರಾವರಿ ಯೋಜನೆಗೆ ಚಾಲನೆ

July 7, 2018

ಪಾಂಡವಪುರ:  ತಾಲೂಕಿನ ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಏತ ನೀರಾವರಿ ಯೋಜನೆಗೆ ಜಿಪಂ ಸದಸ್ಯ ಸಿ.ಅಶೋಕ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮಲ್ಲಿಗೆರೆ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸುಮಾರು 700 ಎಕರೆ ಅಚ್ಚುಕಟ್ಟು ಪ್ರದೇಶ ಬರಲಿದ್ದು, ಈ ವ್ಯಾಪ್ತಿಯ ರೈತರು ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಏತ ನೀರಾವರಿ ಯೋಜನೆ ಜೊತೆಗೆ ಚಿನಕುರಳಿ ಹೋಬಳಿಯ ಸುಮಾರು 22 ಕೋಟಿ ವೆಚ್ಚದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಸಹ ಆಡಳಿ ತಾತ್ಮಕವಾಗಿ ಈಗಾಗಲೇ ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆ ಬಳಿಕ ಏತ ನೀರಾವರಿ ಯೋಜನೆಯ ಉನ್ನತೀಕರಣ ಗೊಳಿಸಿ 22 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೂ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಚಾಲನೆ ನೀಡಿದ್ದಲಿದ್ದಾರೆ. ಅಲ್ಲದೇ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಚಿವರು ಕಾರ್ಯಕ್ರಮ ರೂಪಿಸಿದ್ದು ಅದಕ್ಕೂ ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ತಾಪಂ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷ ಎಂ.ಸಿ.ಯಶವಂತ್ ಕುಮಾರ್, ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಮಾಜಿ ಅಧ್ಯಕ್ಷ ರವಿಕರ, ಸದಸ್ಯರಾದ ಜಯಶೀಲ, ಕುಮಾರಿ, ಎಪಿಎಂಸಿ ನಿರ್ದೇ ನಿರ್ದೇಶಕ ಎಂ.ಎಸ್.ಜಗದೀಶ್, ಕಾವೇರಿ ನೀರಾವರಿ ನಿಗಮದ ಎಇಇ ವಾಸುದೇವ್, ಎಇಗಳಾದ ನಿರ್ಮಲೇಶ್, ಗುರುದತ್, ಪ್ರಜ್ವಲ್ ಮುಖಂಡರಾದ ಬೆಟ್ಟೇಗೌಡ, ರಾಮಕೃಷ್ಣೇಗೌಡ, ಬಿಂಡಹಳ್ಳಿ ವಿಎಸ್ ಎಸ್‍ಎನ್‍ಬಿ ಅಧ್ಯಕ್ಷ ಎಂ.ಎಸ್. ರಾಮೇಗೌಡ, ಪಿಡಿಓ ಕೆ.ಎನ್.ಸ್ವಾಮೀ ಗೌಡ ಸೇರಿದಂತೆ ಮಲ್ಲಿಗೆರೆ ಹಾಗೂ ಹಳೇಸಾಯಪನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

Translate »