ಲೇಖಕ, ಪ್ರಕಾಶಕರಿಂದ ಪುಸ್ತಕ ಆಹ್ವಾನ
ಮೈಸೂರು

ಲೇಖಕ, ಪ್ರಕಾಶಕರಿಂದ ಪುಸ್ತಕ ಆಹ್ವಾನ

July 7, 2018

ಮೈಸೂರು: ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರ ಕಚೇರಿ ವತಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ 2018 ನೇ ಸಾಲಿನಲ್ಲಿ (ದಿ: 01.01.2018 ರಿಂದ ದಿ: 30.06.2018 ರವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟಣೆಯಾದ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಹಾಗೂ ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕ, ಲೇಖಕ ಪ್ರಕಾಶಕರಿಂದ ಪುಸ್ತಕ ಆಹಾನಿಸಿದೆ.

ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕವನ್ನು ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಅಂಬೇಡ್ಕರ್ ವೀದಿ, ಬೆಂಗಳೂರು-560001 ಇಲ್ಲಿಗೆ ದಿ: 31.07.2018 ರ ಸಂಜೆ 5.30 ರ ಒಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ನಗರ ಕೇಂದ್ರ ಗ್ರಂಥಾಲಯ, ಮೈಸೂರು ದೂರವಾಣಿ ಸಂಖ್ಯೆ 2423678 ಮತ್ತು 2430343 ಯನ್ನು ಸಂಪರ್ಕಿಸುವುದು.

Translate »